spot_img
Friday, April 10, 2026
spot_img

ಬಿ. ಬಿ. ಹೆಗ್ಡೆ ಕಾಲೇಜಿನ ಎನ್ನೆಸ್ಸೆಸ್ ಶಿಬಿರದಲ್ಲಿ ಕೆಸರಲ್ಲೊಂದಿನ

ಕುಂದಾಪುರ: ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ
ಯಡಾಡಿ-ಮತ್ಯಾಡಿಯಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದ ಭಾಗವಾಗಿ ಹುಣಸೆಮಕ್ಕಿ ಹೆಗ್ಡೆ ಹೌಸ್‌ನಲ್ಲಿ ಆಯೋಜಿಸಿದ ಕೆಸರಲ್ಲೊಂದಿನ
ಕಾರ್ಯಕ್ರಮ ಗಮನ ಸೆಳೆಯಿತು. ಎನ್.ಎಸ್.ಎಸ್. ಸ್ವಯಂಸೇವಕರು ವಿಶಾಲ ಗದ್ದೆಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಡುವ
ಮೂಲಕ ಗ್ರಾಮಸ್ಥರ ಮನಗೆದ್ದರು.

ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಮತ್ತು ಉದ್ಯಮಿಗಳಾದ ಶ್ರೀಮತಿ ವಸಂತಿ ಎಮ್. ಶೆಟ್ಟಿ ಅವರು ಉದ್ಘಾಟಿಸಿದರು.

ಉದ್ಯಮಿಗಳಾದ ಸಬ್ಲಾಡಿ ಮಂಜಯ್ಯ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ|
ಡಾ| ಕೆ. ಉಮೇಶ್ ಶೆಟ್ಟಿ ಆಶಯನುಡಿಗಳನ್ನಾಡಿದರು. ಪ್ರಥಮ ದರ್ಜೆ ಗುತ್ತಿಗೆದಾರರಾದ ಲಯನ್ ಬಿ. ಅರುಣ್ ಕುಮಾರ್ ಹೆಗ್ಡೆ,
ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಎನ್. ನಾರಾಯಣ್ ನಾಯಕ್, ಹುಣ್ಸೆಮಕ್ಕಿ ಜಿ.ಎಮ್. ಆಗ್ರೋ ಇಂಡಸ್ಟ್ರೀಸ್‌ನ
ಮಾಲಕರಾದ ಕಿಶೋರ್ ಕುಮಾರ್ ಶೆಟ್ಟಿ ಕ್ಯಾಸನಮಕ್ಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈಲ್ಕೆರೆ ಇಲ್ಲಿನ ಮುಖ್ಯ ಶಿಕ್ಷಕರಾದ
ಸಂತೋಷ್ ಶೆಟ್ಟಿ,  ಜಯರಾಮ ಶೆಟ್ಟಿ ಕೈಲ್ಕೆರೆ, ಬನ್ನಾಡಿ ಬ್ರಹ್ಮಬೈದರ್ಕಳ ಕಂಬಳ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್
ಶೆಟ್ಟಿ ಬನ್ನಾಡಿ, ಹುಣ್ಸೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ತಲ್ಮಕ್ಕಿಯ ಅನುವಂಶಿಕ ಮೊಕ್ತೇಸರರಾದ ವಿಶ್ವಾಸ್
ಭಂಡಾರ್‌ಕಾರ್, ಪಿ.ಡಬ್ಲ್ಯೂ.ಡಿ. ಕಂಟ್ರಾಕ್ಟರ್ ಶ್ರೀ ವಿಜಯಚಂದ್ರ ಶೆಟ್ಟಿ ಕೊತ್ತಾಡಿ, ಹುಣ್ಸೆಮಕ್ಕಿ ಸಾರ್ವಜನಿಕ ಗಣೇಶೋತ್ಸವ ಸಮಿತಿ
ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ, ಯಡಾಡಿ-ಮತ್ಯಾಡಿಯ ಶಿಕ್ಷಕರಾದ ಸುಧಾಕರ್ ಹಳ್ನಿರು, ಶ್ರೀ ಮಂಜುನಾಥ್ ಪೂಜಾರಿ
ಹುಣ್ಸೆಮಕ್ಕಿ, ಹೊಂಬಾಡಿ-ಮಂಡಾಡಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್ ಶೆಟ್ಟಿ, ಯಕ್ಷಕೇದಿಗೆ ಶ್ರೀ ಮಹಾಲಿಂಗೇಶ್ವರ
ಯಕ್ಷಗಾನ ಸಂಘ, ಗುಡ್ಡೆಯಂಗಡಿ ಇದರ ಅಧ್ಯಕ್ಷರಾದ ರಾಜಾರಾಮ್ ಶೆಟ್ಟಿ, ಸಂಕೇತ್ ಕೊಠಾರಿ ಗುಡ್ಡೆಯಂಗಡಿ, ಹರೀಶ್
ಆಚಾರ್ ಗುಡ್ಡೆಯಂಗಡಿ, ಪ್ರಭಾಕರ್ ಆಚಾರ್ ಗುಡ್ಡೆಯಂಗಡಿ, ರಂಜಿತ್ ಶೆಟ್ಟಿ ಮತ್ಯಾಡಿ, ಸುರೇಶ್ ಶೆಟ್ಟಿ ಮತ್ಯಾಡಿ,
ರಾಘವೇಂದ್ರ ಕುಲಾಲ್ ನಾಲ್ತೂರು, ಶಿವರಾಮ್ ಅಡಿಗ ನಾಲ್ತೂರು ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಪೂಜಾ ಕುಂದರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!