spot_img
Sunday, February 22, 2026
spot_img

ಶಂಕರನಾರಾಯಣ ತೆರೆಸೀಯನ್ ಗಾಟ್ ಟ್ಯಾಲೆಂಟ್

ಶಂಕರನಾರಾಯಣ: ಶಂಕರನಾರಾಯಣದ ಮದರ್ ತೆರೆಸಾ ಶಾಲೆಯಲ್ಲಿ ಇತ್ತೀಚಿಗೆ ಹಿರಿಯ ಪ್ರಾಥಮಿಕ ವಿಭಾಗದ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ಸಲುವಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಕುಮಾರಿ ಶಮಿತಾ ರಾವ್ ಹಾಗೂ ರೇನಿಟಾ ಲೋಬೋ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳು,ತೀರ್ಪುಗಾರರೂ ಆಗಿರುವ ಶ್ರೀಮತಿ ಸಂಧ್ಯಾ ರಾವ್( ಕಂಟ್ರಿ ಮ್ಯಾನೇಜರ್ ಅಮೇರಿಕನ್ ಏರ್ ಲೈನ್ಸ್ ) ಶ್ರೀ ಯಶ್ ಆರ್ಯನ್ (ರಾಮಯ್ಯ ಯುನಿವರ್ಸಿಟಿ ಇನ್ ಟರ್ನ್ ಇಂಡಿಯಾ ಓಲ್ಡ್ಸ ಟ್ II ಎಸ್.ಸಿ ಯುವ ಲ್ಯಾಬ್) ಹಾಗೂ ಅಲಿಟಾ ಡೇಸಾ (ಸಂಸ್ಕೃತಿ ಮತ್ತು ಭಾಷಾ ಅಭಿವೃದ್ಧಿ ನಿರ್ದೇಶಕರು) ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಮತಾ ಪೂಜಾರಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅತಿಥಿಗಳಾಗಿರುವ ಶ್ರೀಮತಿ ಸಂಧ್ಯಾ ರಾವ್ ಕಾರ್ಯಕ್ರಮದ ಕುರಿತು ಮಾತನಾಡಿ ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮುಖ್ಯವೆಂದು ಹೇಳಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಅದೇ ರೀತಿಯಾಗಿ ವಿದ್ಯಾರ್ಥಿಗಳು ತರಗತಿವಾರು ನೃತ್ಯ, ಹಾಡು, ಏಕಪಾತ್ರಾಭಿನಯ,ಕೊಳಲು ವಾದನ, ವೀಣಾ ವಾದನ, ಯೋಗಾಸನ ,ಯಕ್ಷಗಾನವನ್ನು ಅತ್ಯಂತ ಸುಂದರವಾಗಿ ಹಾಗೂ ನೋಡುಗರು ಮನಸೂರೆಗೊಳ್ಳುವ ರೀತಿಯಲ್ಲಿ ಅತ್ಯಂತ ಸುಂದರವಾಗಿ ಪ್ರದರ್ಶಿಸಿದರು. ಈ ಕಾರ್ಯಕ್ರಮದಲ್ಲಿ ಆರನೇ ತರಗತಿಯ ವಿದ್ಯಾರ್ಥಿಗಳಾದ ಸಾತ್ವಿಕ್. ಆರ್ ಯೋಗಾಸನದಲ್ಲಿ ಪ್ರಥಮ ಸ್ಥಾನವನ್ನು ,ಶ್ರೀ ಕರ್ ಭಟ್ ಹಾಡುಗಾರಿಕೆಯಲ್ಲಿ ದ್ವಿತೀಯ ಸ್ಥಾನವನ್ನು, ಮನಸ್ವಿ. ಎಂ ಶೆಟ್ಟಿ ಏಕಪಾತ್ರಭಿನಯದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. ಅದೇ ರೀತಿಯಾಗಿ ಏಳನೇ ತರಗತಿಯಲ್ಲಿ ಶ್ರೀಶಾಂತ್ ಹಾಡುಗಾರಿಕೆಯಲ್ಲಿ ಪ್ರಥಮ ಸ್ಥಾನವನ್ನು, ಹಿಮಾನಿ ಕೃಪಾ ಯಕ್ಷಗಾನದಲ್ಲಿ ದ್ವಿತೀಯ ಸ್ಥಾನವನ್ನು, ಅಮೂಲ್ಯ ನೃತ್ಯದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಎಂಟನೇ ತರಗತಿಯ ವಿದ್ಯಾರ್ಥಿಗಳಲ್ಲಿ ಪನ್ನಗ ಆರೂರು ಕೊಳಲು ವಾದನದಲ್ಲಿ ಪ್ರಥಮ ಸ್ಥಾನವನ್ನು, ರಶ್ಮಿತಾ ಏಕ ಪಾತ್ರಭಿನಯದಲ್ಲಿ ದ್ವಿತೀಯ ಸ್ಥಾನವನ್ನು, ನಿಧಿ ಶೆಟ್ಟಿ ನೃತ್ಯದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯವರು ಹಾಗೂ ಮುಖ್ಯ ಅತಿಥಿಗಳು ಅಭಿನಂದಸಿದರು. ಗ್ರೇಸಿ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!