spot_img
Wednesday, February 18, 2026
spot_img

ಜ. 19: ಕಕ್ಕುಂಜೆ – ಕಂಬಿಕಲ್ಲು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ

  1. ಕುಂದಾಪುರ :ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಕ್ಕುಂಜೆ ಗ್ರಾಮದ ಕಂಬಿಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದಿನಾಂಕ:19.01.2026 ರಂದು ಸೋಮವಾರ ಬೆಳಿಗ್ಗೆ  8.00 ರಿಂದ ವಾರ್ಷಿಕ ವರ್ಧಂತಿ ಉತ್ಸವದ ಪ್ರಯುಕ್ತ  ಪರಿಕಲಶಃ ಸಹಿತ ಬ್ರಹ್ಮ ಕುಂಭಾಭಿಷೇಕ,108 ಕಾಯಿ ಗಣಹೋಮ,ಮಹಾಪೂಜೆ, ಕಡುಬಿನ ಸೇವೆ  ಮಧ್ಯಾಹ್ನ 12.30 ರಿಂದ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ಸಂಜೆ 6.30 ರಿಂದ  ರಂಗಪೂಜೆ, ವಿವಿಧ ಭಜನಾ ತಂಡಗಳಿಂದ  ಭಜನಾ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಕುಂದಾಪುರ ತಾಲೂಕಿನ ಪ್ರಾಕೃತಿಕ ಬಂಡೆಯಲ್ಲಿ ಉದ್ಭವಿಸಿದ ಪಂಚ ಗಣಪತಿ ಕ್ಷೇತ್ರಗಳಲ್ಲಿ  ಕಕ್ಕುಂಜೆ ಗ್ರಾಮದ ಕಂಬಿಕಲ್ಲು ಶ್ರೀ ಮಹಾಗಣಪತಿ ಕ್ಷೇತ್ರವು ಒಂದು. ಹಾಲಾಡಿ – ಕಕ್ಕುಂಜೆ ಮಾರ್ಗದ ಪ್ರಕೃತಿ ರಮಣೀಯ ಕಂಬಿಕಲ್ಲು ಎಂಬ ಸ್ಥಳದಲ್ಲಿ ಈ ಮಂದಿರ ಕಾಣ ಸಿಗುತ್ತದೆ. ಕಂಬದಾಕಾರದಲ್ಲಿ ಸಾಲು ಸಾಲು ಕಲ್ಲು ಇಲ್ಲಿ ಗೋಚರಿಸಿರುವುದರಿಂದ ಈ ಊರಿಗೆ ಕಂಬಿಕಲ್ಲು ಎಂಬ ಹೆಸರು ಬಂದಿದೆ..   ಗಣಪತಿಯ ಎದುರು ಅನತಿ ದೂರದಲ್ಲಿ ಜಾರುವ ರೀತಿಯ ಬಂಡೆಯ ಮೇಲೆ ನಿಂತಂತೆ ಭಾಸವಾಗುವ ಬೃಹತ್ ಬಂಡೆಯು ವಿಸ್ಮಯ ಹುಟ್ಟಿಸುತ್ತದೆ.. ಬೃಹತ್ ಆನೆಯಾಕಾರದ ಶಿಲೆಯ ಉದರ ಭಾಗವನ್ನು ಸೀಳಿಕೊಂಡು ಬಂದಂತೆ ಇಲ್ಲಿ ಗಣಪತಿ ದೇವರು ಉದ್ಭವನಾಗಿದ್ದಾನೆ.. ಪುರಾಣ ಕಾಲದಲ್ಲಿ ಸಾಮವೇದ ಋಷಿಯೊಬ್ಬರು ಇಲ್ಲಿ ತಪಸ್ಸನ್ನಾಚರಿಸಿದ್ದು, ಶ್ರೀ ಮಹಾ ಗಣಪತಿಯನ್ನು ಅರ್ಚಿಸಿದ ಪ್ರತೀತಿಯಿದೆ.  ಇಲ್ಲಿಯ ಮಹಾಗಣಪತಿಯು ಸಂತಾನ ಉದ್ಯೋಗ ವ್ಯವಹಾರಗಳನ್ನು ಸಿದ್ಧಿಸುವ ದೇವರು ಎನ್ನುವ ನಂಬಿಕೆಯಿದೆ. ಗಣ ಹೋಮ, ರಂಗಪೂಜೆ ಮತ್ತು ಕಡುಬುಸೇವೆ, ಶ್ರಾವಣ ಮಾಸದಲ್ಲಿ  ಸೋಣೆ  ಆರತಿ ಸೇವೆ, ಭಜನಾ ಕಾರ್ಯಕ್ರಮಗಳನ್ನು  ದೇವರ ಪ್ರೀತ್ಯರ್ಥವಾಗಿ  ನಡೆಸಿಕೊಂಡು ಬರಲಾಗುತ್ತಿದೆ.. ಬಂಡೆಯ ಒಳಗೆ ಗಣಪತಿಯು ಉದ್ಭವನಾಗಿದ್ದು,  ಈ ಹಿಂದೆ ಇಲ್ಲಿ ಸಣ್ಣ ಗುಡಿಯಿದ್ದು,2019 ರ ಜನವರಿ 19 ರಂದು ಇಲ್ಲಿ ನೂತನ ಗರ್ಭಗುಡಿ, ಸುತ್ತು ಪೌಳಿ, ತೀರ್ಥಭಾವಿ, ಮುಖದ್ವಾರ ಸೇರಿದಂತೆ ಸಮಗ್ರ ಜೀರ್ಣೋದ್ಧಾರವನ್ನು ನಡೆಸಲಾಗಿದ್ದು, ಸುಸಜ್ಜಿತ ದೇವಸ್ಥಾನದ ನಿರ್ಮಾಣ ಮಾಡಲಾಗಿದೆ.  ಪ್ರತಿವರ್ಷವೂ ಜನವರಿ 19 ರಂದು ಇಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿದ್ದು,  ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೇವರ ಕಾರ್ಯದಲ್ಲಿ ಬಾಗಿಗಳಾಗಬೇಕಾಗಿ ದೇವಸ್ಥಾನದ ಪ್ರಕಟಣೆ ಕೋರಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!