spot_img
Thursday, March 5, 2026
spot_img

ಹರೇಗೋಡು:ಮಹಾವಿಷ್ಣು ಯುವಕ ಮಂಡಲ ಹಾಗೂ ಮಾನಸ ಯುವತಿ ಮಂಡಲದ ವಾರ್ಷಿಕೋತ್ಸವ

ಕುಂದಾಪುರ: ಗ್ರಾಮೀಣ ಪ್ರದೇಶದಲ್ಲಿ ಜನರ ಜೊತೆಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡು ಸಮಾಜಮುಖಿ ಕೆಲಸ ಮಾಡುತ್ತಿರುವ ಈ ಸಂಸ್ಥೆ ಮುಂದಿನ ವರ್ಷ ರಜತ ಸಂಭ್ರಮ ಆಚರಿಸಲಿದೆ. ಈ ಯುವಕರ ತಂಡ ಆರೋಗ್ಯ ಶಿಕ್ಷಣ ಕೃಷಿ ಧಾರ್ಮಿಕ ಇತರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಪಾರವಾದ ಗೌರವವನ್ನು ತಂದುಕೊಂಡಿದ್ದಾರೆ. ಇನ್ನಷ್ಟು ಸಮಾಜಸೇವಾ ಕಾರ್ಯಗಳನ್ನು ನಡೆಯುವಂತಾಗಲಿ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಮಹಾವಿಷ್ಣು ಯುವಕ ಮಂಡಲ ಹಾಗೂ ಮಾನಸ ಯುವತಿ ಮಂಡಲ ಇವರ ಜಂಟಿ ಆಶ್ರಯದಲ್ಲಿ ನಡೆದ 24ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಆರ್ ನಾಯಕ್ ವಹಿಸಿದ್ದರು.
ಸಮಾರಂಭದಲ್ಲಿ ಕುಂದಾಪುರ ರೋಟರಿ ಮಿಡ್ ಟೌನ್ ಅಧ್ಯಕ್ಷರಾದ ಸುನಿಲ್ ಕುಮಾರ್ ಶೆಟ್ಟಿ, ರೋಟರಿ ಕ್ಲಬ್ ದಕ್ಷಿಣ ಅಧ್ಯಕ್ಷರಾದ ಸಚಿನ್ ನಕ್ಕತ್ತಾಯ, ಹೆಮ್ಮಾಡಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ್ ಶೆಟ್ಟಿ ಸ್ಥಳೀಯ ಕೃಷಿಕರಾದ ಕೃಷ್ಣ ಗಾಣಿಗ, ಕೊಗ್ಗ ಗಾಣಿಗ, ಸ್ಥಳೀಯ ಪ್ರತಿಭೆ ಯೋಗ ಪಟು ಕಲಾಶ್ರೀ ತನ್ವಿತಾ ಮೊದಲಾದವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಉದ್ಯಮಿ ಶಂಕರ್ ಶೆಟ್ಟಿ, ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಜಿಲ್ಲಾ ಕೆ ಡಿ ಪಿ ಸದಸ್ಯರಾದ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ರೂಪಮ್ ರಾಧಾಕೃಷ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರಾಮಶೆಟ್ಟಿ , ಯುವಕ ಮಂಡಲದ ಗೌರವಾಧ್ಯಕ್ಷರಾದ ರಾಘವೇಂದ್ರ ಚರಣ್ ನಾವುಡ, ಮಹಿಳಾ ಮಂಡಲ ಅಧ್ಯಕ್ಷೆ ಗಂಗಮ್ಮ, ಗೀತಾ ಸುರೇಶ್ ದೇವಾಡಿಗ, ಕೆರಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಮಂಜು ಕೊಠಾರಿ, ನಾಗರಾಜ ಗಾಣಿಗ, ರವೀಶ್ ದೇವಾಡಿಗ, ಅರುಣ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ನರಸಿಂಹ ಗಾಣಿಗ ಸ್ವಾಗತಿಸಿ, ಶರತ್ ಗಾಣಿಗ, ಸಂಗೀತ ಆಚಾರ್ಯ, ಶಶಿಪ್ರಭ ಗಾಣಿಗ, ಲಿಖಿತ ಗಾಣಿಗ ಇವರು ಅತಿಥಿಗಳ ಪರಿಚಯ ಮಾಡಿದರು. ರಾಘವೇಂದ್ರ ಬಳೆಗಾರ ವಂದಿಸಿದರು. ಪ್ರಸಾದ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!