spot_img
Saturday, March 7, 2026
spot_img

ಪಡುವಾಲ್ತೂರು: ಅಂಪಾರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಕುಂದಾಪುರ: 2025-26ನೇ ಸಾಲಿನ ಅಂಪಾರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಜ.1 ಗುರುವಾರ ಸ.ಹಿ.ಪ್ರಾ ಶಾಲೆ ಪಡುವಾಲ್ತೂರು ಇಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಂಡ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನೌಶಿನ್ ಹಜರತ್ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂತೋಷ್ ಜಿ ಶೇಟ್ ವಹಿಸಿದ್ದರು. ಅಂಪಾರು ವೃತ್ತ ಶಿಕ್ಷಣ ಸಂಯೋಜಕರಾದ ಶಂಕರ್ ಪ್ರಾಸ್ತಾವಿಕ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಂಡ್ಲೂರು ಪಂಚಾಯತ್ ಉಪಾಧ್ಯಕ್ಷ ಸುರೇಶ್ ಶೆಟ್ಟಿ, ಸದಸ್ಯರಾದ ಪ್ರಕಾಶ್ಚಂದ್ರ ಶೆಟ್ಟಿ, ಶ್ಯಾಮಲಾ ದೇವಾಡಿಗ, ಕುಂದಾಪುರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಮಿಲ್ಟನ್ ಸರ್, ಸಂತೋಷ ಕುಮಾರ್ ಶೆಟ್ಟಿ, ರೇಖಾ ಕೆ. ಎಲ್., ಸುಕನ್ಯಾ, ಬಿದ್ಕಲ್ ಕಟ್ಟೆ ಸಿ. ಆರ್.ಪಿ.ಸತೀಶ್ ಎಚ್. ಆರ್, ಹುಣ್ಸೆಮಕ್ಕಿ ಸಿ. ಆರ್.ಪಿ.ವಸಂತ. ಬಿ. ಹಾಲಾಡಿ ಸಿ.ಆರ್.ಪಿ. ಅನುಪ್ ಕುಮಾರ್ ಶೆಟ್ಟಿ, ಸಿದ್ಧಾಪುರ ಸಿ.ಆರ್.ಪಿ. ಪ್ರಭಾಕರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಶೇಟ್, ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ವೀಣಾ ತಪ್ಪಲು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಎಚ್. ಪ್ರಭಾಕರ ಶೆಟ್ಟಿ ಸ್ವಾಗತಿಸಿ, ಅಂಪಾರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶಂಕರ ದೇವಾಡಿಗ ವಂದಿಸಿದರು. ಅತಿಥಿ ಶಿಕ್ಷಕಿ ಲವಿನಾ ಕಾರ್ಯಕ್ರಮ ನಿರೂಪಿಸಿ, ಅತಿಥಿ ಶಿಕ್ಷಕಿ ಮಾಧುರಿ, ಗೌರವ ಶಿಕ್ಷಕಿಯರಾದ ರೂಪ. ಕೆ. ಅಶ್ವಿನಿ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!