spot_img
Saturday, March 7, 2026
spot_img

ಕಶ್ವಿ ಚೆಸ್ ಸ್ಕೂಲ್ ವಿದ್ಯಾರ್ಥಿನಿ ಆರಾಧ್ಯ ಎಸ್.ಶೆಟ್ಟಿ ಸಲ್ವಾಡಿ ಅವರಿಗೆ ರಾಷ್ಟ್ರ ಮಟ್ಟದ ಚೆಸ್ ಸ್ಕೂಲ್ ಚಾಂಪಿಯನ್‍ ಶಿಪ್‍ ನಲ್ಲಿ ಬೆಳ್ಳಿ ಪದಕ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಕುಂದಾಪುರದ ಕಶ್ವಿ ಚೆಸ್ ಸ್ಕೂಲ್ ಉಡುಪಿ ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿದೆ. ರಾಷ್ಟ್ರ ಮಟ್ಟದ ಚೆಸ್ ಸ್ಕೂಲ್ ಚಾಂಪಿಯನ್ ಶಿಪ್ ನಲ್ಲಿ ಸಂಸ್ಥೆಯ ವಿದ್ಯಾರ್ಥಿನಿ ಆರಾಧ್ಯ ಎಸ್.ಶೆಟ್ಟಿ ಸಲ್ವಾಡಿ ಬೆಳ್ಳಿಯ ಪದಕ ಪಡೆದಿದ್ದಾರೆ. ಪ್ರಸ್ತುತ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‍ನಲ್ಲಿ 9ನೇ ತರಗತಿ ಓದುತ್ತಿರುವ ಆರಾಧ್ಯ ಸಲ್ವಾಡಿಯ ಶ್ರೀಕಾಂತ್ ಶೆಟ್ಟಿ ಮತ್ತು ಉಷಾಲತಾ ಶೆಟ್ಟಿ ಅವರ ಪುತ್ರಿ. 2019ರಲ್ಲಿ ಇವರು ಕಶ್ವಿ ಚೆಸ್ ಸ್ಕೂಲ್ ಸೇರಿದ್ದು, ಕಳೆದ ಐದು ವರ್ಷಗಳಿಂದ ಅವರ ಚೆಸ್ ಪಯಣ ಮುಂದುವರಿಯುತ್ತಿದೆ ಎಂದು ಕಶ್ವಿ ಚೆಸ್ ಸ್ಕೂಲ್ ಮುಖ್ಯಸ್ಥರಾದ ನರೇಶ್ ಹೇಳಿದರು.

ಅವರು ಕುಂದಾಪುರ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಆರಾಧ್ಯ ಈಗಾಗಲೇ ಅಂತರಾಷ್ಟ್ರೀಯ ಮಟ್ಟದ ಪಿಡೆ ರೇಟಿಂಗ್ ಟೂರ್ನಮೆಂಟ್ ಸಹಿತ ರಾಜ್ಯಮಟ್ಟದ ಚಾಂಪಿಯನ್‍ಶಿಫ್ ಗಳು ಸೇರಿದಂತೆ 100ಕ್ಕೂ ಹೆಚ್ಚು ಪಂದ್ಯಾವಳಿಗಳಲ್ಲಿ ಆಡಿದ್ದಾರೆ. ಪಿಡೆ ರೇಟಿಂಗ್, ರಾಷ್ಟ್ರೀಯ ಇತ್ಯಾದಿಗಳಲ್ಲಿ ಸ್ಪರ್ಧಿಸಿರುವ ಆಟಗಾರ್ತಿ ಮತ್ತು ಬೇರೆ ಬೇರೆ ರಾಷ್ಟ್ರ, ರಾಜ್ಯಗಳಲ್ಲಿ ಆಡಿದ ಹೆಮ್ಮೆಯ ವಿದ್ಯಾರ್ಥಿನಿ ಎಂದರು.

ಸುಮಾರು 11 ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವುದರಿಂದ ವಂಚಿತರಾಗಿದ್ದ ಆರಾಧ್ಯ ತುಮಕೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಚೆಸ್ ಸ್ಕೂಲ್ ಚಾಂಪಿಯನ್ ಶಿಪ್ ನ 17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮೊದಲ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಡಿಸೆಂಬರ್ 27ರಿಂದ 31-2025ರ ತನಕ ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಮಟ್ಟದ 17 ವಯೋಮಿತಿಯ ಚೆಸ್ ಚಾಂಪಿಯನ್ ಶಿಪ್ ನಲ್ಲಿ 9 ಸುತ್ತಿನಲ್ಲಿ 7 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ಗಳಿಸಿದ್ದಾರೆ. ಮುಂಬರುವ ಏಪ್ರಿಲ್ ತಿಂಗಳಲ್ಲಿ ನಡೆಯುವ ವಿಶ್ವ ಮಟ್ಟದ ಚೆಸ್ ಸ್ಕೂಲ್ಸ್ ಚಾಂಪಿಯನ್ ಶಿಫ್ ನಲ್ಲಿ 17ರ ವಯೋಮಾನದ ವಿಭಾಗದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕೇವಲ 15 ವರ್ಷ ವಯಸ್ಸಿನಲ್ಲಿ ಆರಾಧ್ಯ ಅದ್ಬುತ ಪ್ರದರ್ಶನ ನೀಡುತ್ತಿದ್ದಾರೆ. ಕಲಿಕೆಯಲ್ಲೂ ಕೂಡಾ ಮೊದಲ ಪ್ರಥಮ ಸ್ಥಾನದಲ್ಲಿದ್ದಾಳೆ. ಅತೀ ಚಿಕ್ಕ ವಯಸ್ಸಿನಲ್ಲಿ ರಂಗಭೂಮಿ ಕಲಾವಿದೆಯಾಗಿ, ಝಿ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಝಿ ಕುಟುಂಬ ಆವಾಡ್ರ್ಸ್‍ನಲ್ಲಿ ಭಾಗವಹಿಸಿದ್ದಾರೆ. ಡ್ರಾಮಾ ಜೂನಿಯರ್ಸ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 2022ರಲ್ಲಿ ಈ ಬಾಲನಟಿಯನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಆರಾಧ್ಯರ ಸಾಧನೆ ಆಧರಿಸಿ 2026ರಲ್ಲಿ ಆರಾಧ್ಯ ಎಸ್.ಶೆಟ್ಟಿ ನಾಮಾಂಕಿತದೊಂದಿಗೆ ಲಂಡನ್ ಸಿಸ್ಟಮ್ ಎನ್ನುವ ಹೊಸ ಚೆಸ್ ಪುಸ್ತಕ ಬಿಡುಗಡೆಯಾಗಲಿದೆ ಎಂದರು.

ಆರಾಧ್ಯ ಎಸ್.ಶೆಟ್ಟಿ ಮಾತನಾಡಿ ನನ್ನ ಚೆಸ್ ಕಲಿಕೆಗೆ ಸದಾ ಉತ್ತೇಜನ ನೀಡಿ ಪ್ರೋತ್ಸಾಹಿಸಿದ್ದು ತಂದೆ ತಾಯಿ. ಕಶ್ವಿ ಚೆಸ್ ಸ್ಕೂಲ್‍ನ ನರೇಶ್ ಅವರು ನನಗೆ ನಿರಂತರ ಮಾರ್ಗದರ್ಶನ ಮಾಡುತ್ತಿದ್ದಾರೆ. ಚೆಸ್ ಕಲಿಕೆ, ಸಾಧನೆಗೆ ಕಶ್ವಿ ಚೆಸ್ ಸ್ಕೂಲ್ ಉತ್ತಮ ಆಯ್ಕೆ. ಅಲ್ಲಿನ ತರಬೇತುದಾರರು, ಸಹಪಾಠಿಗಳು ಸಹಕಾರ ನನ್ನ ಸಾಧನೆಗೆ ಪೂರಕವಾಗಿದೆ. ನನಗೆ ಚೆಸ್ ಆಸಕ್ತಿ ಮೂಡಿಸಿದ್ದು ನನ್ನ ಸಹೋದರ. ಎಲ್ಲರೂ ನನ್ನ ಸಾಧನೆಗೆ ಪೂರಕವಾಗಿದ್ದಾರೆ. ನಾನು ಹಲವಾರು ಟೂನ್ ್ಮೆಂಟ್ ಆಡಿದ್ದೇನೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದ್ದೇನೆ. ಸೋತಾಗ ಚೆಸ್ ಬಿಡಲಿಲ್ಲ. ತಾಳ್ಮೆಯಿಂದ ಆಡುತ್ತಾ ಬಂದಿದ್ದೇನೆ. ಈಗ ಸಾಧನೆ ಮಾಡುವ ಗುರಿ ಇದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!