spot_img
Saturday, March 7, 2026
spot_img

ಸಿದ್ದಾಪುರ ಏತ ನೀರಾವರಿ: ಎಲ್ಲಾ ರೈತರಿಗೂ ಒಂದೇ ರೀತಿ ನ್ಯಾಯ ಇರಬೇಕು, ಕೆಳಭಾಗದ ರೈತರಿಗೆ ತೊಂದರೆಯಾಗಬಾರದು-ರಾಘವೇಂದ್ರ ನೆಂಪು

ಕುಂದಾಪುರ: ಸಿದ್ದಾಪುರ ಏತ ನೀರಾವರಿ ಯೋಜನೆ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಎಲ್ಲಾ ರೈತರಿಗೂ ಒಂದೇ ರೀತಿ ನ್ಯಾಯ ಇರಬೇಕು. ಡ್ಯಾಂನ ಮೇಲ್ಬಾಗದಲ್ಲಿ ನೀರು ತಗೆದರೆ ಕೆಳಭಾಗದ ರೈತರಿಗೆ ತೊಂದರೆಯಾಗುತ್ತದೆ. ಹೊಳೆಗೆ ನೀರು ಹರಿಯಲು ಬಿಟ್ಟು ಕೆಳಭಾಗದಲ್ಲಿ ಡ್ಯಾಂ ಮಾಡಬಹುದು. ಇಲ್ಲದಿದ್ದರೆ ವಾರಾಹಿ ಹೊಳೆ ಬತ್ತಿ ಹೋಗುವ ಸಾಧ್ಯತೆ ಇದೆ ಎಂದು ಬೈಂದೂರು ಮಂಡಲ ಬಿಜೆಪಿ ಉಪಾಧ್ಯಕ್ಷ ರಾಘವೇಂದ್ರ ನೆಂಪು ಹೇಳಿದ್ದಾರೆ.

ಅವರು ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸರಿಯಿದ್ದ ವ್ಯವಸ್ಥೆಯನ್ನು ಸರಿ ಇಲ್ಲ ಎನ್ನುವುದು ತಪ್ಪು. ಎಲ್ಲಾ ರೈತರಿಗೂ ಸಮಾನ ನ್ಯಾಯ ಸಿಗಬಹುದು. ಈಗಾಗಲೇ ಹಾಲಾಡಿ ಹೊಳೆಯಲ್ಲಿ ನೀರು ಇರುವುದಿಲ್ಲ. ಹೊಳೆಯಲ್ಲಿ ನೀರು ಕೊರತೆಯಾದರೆ ಸೌಕೂರು ಏತ ನೀರಾವರಿ ಯೋಜನೆಗೂ ಸಮಸ್ಯೆಯಾಗುತ್ತದೆ. ಈಗ ಸೌಕೂರು ಏತ ನೀರಾವರಿ ಯೋಜನೆಯಿಂದ ಈ ಭಾಗಕ್ಕೆ ಸಾಕಷ್ಟು ಅನುಕೂಲವಾಗಿದೆ ಎಂದರು.

ಉಡುಪಿ ಜಿಲ್ಲಾ ರೈತ ಸಂಘ ಈ ಹಿಂದೆ ವಾರಾಹಿ ಯೋಜನೆಯ ಮೂಲ ಉದ್ದೇಶ ಬಿಟ್ಟು, ಬೇರೆ ಯೋಜನೆ ಮಾಡಬಾರದೆಂದು ಧರಣಿ ಕುಳಿತು. ಕಾಲುವೆಯಲ್ಲಿ ನೀರು ಹರಿಸಿ ಉತ್ತಮ ಕೆಲಸ ಮಾಡಿತ್ತು. ವಾರಾಹಿ ಯೋಜನೆಯ ಮೂಲ ಉದ್ದೇಶ ಬಿಟ್ಟು, ಮಾಡಬಾರದೆಂದು ಎಲ್ಲೆಡೆ ಹೇಳುತ್ತಾ ಬಂದಿತ್ತು. ಆದರೆ ಈಗ ಸಿದ್ದಾಪುರ ಏತ ನೀರಾವರಿ ಯೋಜನೆ ಬಂದ ಮೇಲೆ ನಿಮ್ಮ ನಿಲುವಲ್ಲಿ ಯಾಕೇ ಬದಲಾವಣೆಯಾಗಿದೆ ಎಂದು ಅವರು ರೈತ ಸಂಘವನ್ನು ಪ್ರಶ್ನಿಸಿದ್ದಾರೆ.

ವಾರಾಹಿ ಮೂಲ ಯೋಜನೆಯಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆ ಇದೆಯೇ? ಸಿದ್ದಾಪುರ ಏತ ನೀರಾವರಿ ಯೋಜನೆ ಮೂಲ ಡಿಪಿ‌ಆರ್ ನಂತೆ ಕಾಮಗಾರಿ ಮಾಡುವಂತೆ ನೀರಾವರಿ ನಿಗಮದ ಎಂಡಿಗೆ ಪತ್ರ ಬರೆದಿದ್ದೀರಿ. ಇದು ನಿಮ್ಮ ದ್ವಂದ್ವ ನಿಲುವು ಅಲ್ವಾ. ಏತ ನೀರಾವರಿ ಯೋಜನೆ ವಾರಾಹಿ ಮೂಲ ನದಿಯಲ್ಲಿ ಡ್ಯಾಂ ಕೆಳಭಾಗದಲ್ಲಿ ಮಾಡಿದ್ದಾಗ ಮೂಲ ನದಿ ಉಳಿಸಿದಂತೆ ಆಗುತ್ತದೆ. ಜೊತೆಯಲ್ಲಿ ನದಿ ಪಾತ್ರದ ಗ್ರಾಮಗಳ, ನಗರಗಳ, ಪಟ್ಟಣ ಪಂಚಾಯತಗಳಿಗೆ, ಪುರಸಭೆಗಳಿಗೆ ಕುಡಿಯುವ ನೀರಿಗೆ ಹಾಗೂ ರೈತಾಪಿ ವರ್ಗಗಳಿಗೆ ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರು ಸರಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.

ಅನೇಕ ಯೋಜನೆಗಳು ಜಾರಿಯಾಗಿ ಕಾರ್ಯರೂಪಕ್ಕೆ ಬಂದರೆ ಮತ್ತು ಹೊಸ ಯೋಜನೆಗಳು ಮೂಲ ನದಿಯಲ್ಲಿ ಮಾಡುವ ಬದಲು, ಹೊಳೆ ಶಂಕರನಾರಾಯಣ ಬಳಿ ವಾರಾಹಿ ನದಿಗೆ ಹೊರಿ‌ಅಬ್ಬೆ ಬಳಿ ಅಡ್ಡಲಾಗಿ ಕಟ್ಟಿರುವ ಡ್ಯಾಂ ಮೇಲ್ ಭಾಗದಲ್ಲಿ ಆರಂಭಗೊಳ್ಳುವುದರಿಂದ ವಾರಾಹಿ ಮೂಲ ನದಿಗೆ ಕೊಡಲಿ ಏಟು ನೀಡಿದಂತಾಗುತ್ತದೆ. ಇದರಿಂದ ಭವಿಷ್ಯದಲ್ಲಿ ವಾರಾಹಿ ಮೂಲ ನದಿ ಕಣ್ಮರೆಯಾಗಲಿದೆ ಎಂದರು.
ರೈತ ಸಂಘದ ಮುಖಂಡರು ಕೇವಲ ಸಿದ್ದಾಪುರ ಏತ ನೀರಾವರಿ ಯೋಜನೆಯ ಬಗ್ಗೆ ಮಾತನಾಡುವ ಬದಲು ನದಿ ಪಾತ್ರದ ಮತ್ತು ವಾರಾಹಿ ಕಾಲುವೆ ನೀರಿನ ಆಶ್ರಯದ ರೈತರ, ಕೃಷಿಕರ ಕಬ್ಬು ಬೆಳೆಗಾರರ ಬಗ್ಗೆ ಚಿಂತನೆ ಮಾಡಬೇಕು. ನಿಮ್ಮ ಈ ದ್ವಂದ್ವ ನಿಲುವು ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ? ಎಂದು ಅವರು ರೈತ ಸಂಘವನ್ನು ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಹೆಮ್ಮಾಡಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರಾದ ರಾಜೀವ ಶ್ರೀಯಾನ್, ಕರ್ನಾಟಕ ಟಾಕ್ಷಿ ಅಸೋಸಿಯೇಶನ್ ಅಧ್ಯಕ್ಷ ರಮೇಶ ಟಿ.ಟಿ., ರಾಜು ಮೆಂಡನ್ ತ್ರಾಸಿ, ಬಚ್ಚು ನಾಯ್ಕ, ಸತೀಶ ಮೊಗವೀರ ಗುಲ್ವಾಡಿ, ಚಂದ್ರಶೇಖರ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!