spot_img
Saturday, March 7, 2026
spot_img

ರೈತರಿಗೆ ಸಮಗ್ರ ಕೃಷಿ ಮಾಹಿತಿಯಿಂದ ಉತ್ತಮ ಬೆಳವಣಿಗೆಗೆ ಸಹಕಾರಿ| ಬೆಳ್ವೆಯಲ್ಲಿ ಸಮಗ್ರ ಕೃಷಿ ಮಾಹಿತಿ, ವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ- ಎಂ ಮಹೇಶ್ ಹೆಗ್ಡೆ

ಬೆಳ್ವೆ: ಸಹಕಾರಿ ಸಂಘಗಳು ರೈತರಿಗೆ ಹಾಗೂ ಸದಸ್ಯರಿಗೆ ಸೂಕ್ತ ಸಲಹೆ ಮಾಹಿತಿಗಳನ್ನು ನೀಡಿದಾಗ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಲಿದೆ.ಬೆಳ್ವೆ ವ್ಯವಸಾಯ ಸಹಕಾರಿ ಸಂಘವು ಸದಸ್ಯರಿಗೆ ಉತ್ತಮ ಸೇವೆಯೊಂದಿಗೆ ಉನ್ನತ ಸ್ಥಾನಮಾನವನ್ನು ಹೊಂದಿರುವುದು ಪ್ರಶಂಸನೀಯ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಂ ಮಹೇಶ್ ಹೆಗ್ಡೆ ಹೇಳಿದರು.

ಅವರು ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಹಾಲ್‌ನಲ್ಲಿ ಪ್ರಗತಿಪರ ಕೃಷಿಕರಿಗೆ ಸನ್ಮಾನ,ಸಮಗ್ರ ಕೃಷಿ ಮಾಹಿತಿ ಶಿಬಿರ,ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್ ಜಯರಾಮ ಶೆಟ್ಟಿ ಸುರ್‍ಗೋಳಿ ಅಧ್ಯಕ್ಷತೆ ವಹಿಸಿದರು.

ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ,ಹೆಂಗವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯ,ಹಾಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕಕುಮಾರ್ ಶೆಟ್ಟಿ ಚೋರಾಡಿ,ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಪೂಜಾರಿ,ಸಹಕಾರಿ ಸಂಘದ ಉಪಾಧ್ಯಕ್ಷ ಬಿ ಹರೀಶ್ ಕಿಣಿ ಬೆಳ್ವೆ,ನಿರ್ದೇಶಕರುಗಳಾದ ಚಂದ್ರಶೇಖರ ಶೆಟ್ಟಿ ಎಂ,ದಯಾನಂದ ಆರ್ ಶೆಟ್ಟಿ,ದಯಾನಂದ ಪೂಜಾರಿ ಕೆ,ಹೆಚ್ ಕೆ ಸೀತಾರಾಮ ಶೆಟ್ಟಿ,ಇಚ್ಚಿತಾರ್ಥ ಶೆಟ್ಟಿ,ಸವಿತಾ ಶೆಟ್ಟಿ,ಸುಜಾತ ಪೂಜಾರಿ,ಕೃಷ್ಣ ನಾಯ್ಕ,ಉದಯ ಶೆಟ್ಟಿ,ಶಿವರಾಮ,ಪ್ರದೀಪ್,ವೃತ್ತಿಪರ ನಿರ್ದೇಶಕ ಜಯದೇವ ಹೆಗ್ಡೆ,ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ,ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತಿಕುಮಾರ್ ಶೆಟ್ಟಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

ಪ್ರಗತಿಪರ ಕೃಷಿಕರಿಗೆ ಸನ್ಮಾನ,ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ,ಪ್ರಗತಿಪರ ಕೃಷಿಕ ರಾಜೇಂದ್ರ ಪೂಜಾರಿ ಬೆಚ್ಚಳ್ಳಿ ಸಮಗ್ರ ಕೃಷಿ,ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್‌ಪ್ರಕಾಶ್ಚಂದ್ರ ಶೆಟ್ಟಿ ಸಮಗ್ರ ಹೈನುಗಾರಿಕೆ ವಿಷಯದಲ್ಲಿ ಸಂಪನ್ಮೋಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.

ಎಸ್.ಜಯರಾಮ ಶೆಟ್ಟಿ ಸುರ್‍ಗೋಳಿ ಸ್ವಾಗತಿಸಿದರು.ಪಲ್ಲವಿ ಪ್ರಾರ್ಥಿಸಿ,ರೈತ ಗೀತೆ ಹಾಡಿದರು.ಕೀರ್ತಿಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಬಿ ಹರೀಶ್ ಕಿಣಿ ಬೆಳ್ವೆ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!