spot_img
Sunday, March 8, 2026
spot_img

ಕುಂದಾಪುರದಲ್ಲಿ ಕ್ರಿಸ್ಮಸ್ ಆಚರಣೆ 

 ಕುಂದಾಪುರ:  455 ವರ್ಷದ ಇತಿಹಾಸವುಳ್ಳ ಕೆನರಾದಲ್ಲೆ ಅತ್ಯಂತ ಪ್ರಾಚೀನ ಇಗರ್ಜಿಗಳಲ್ಲಿ ಎರಡನೇ ಇಗರ್ಜಿಯಾದ ಹೋಲಿ ರೋಜರಿ ಇಗರ್ಜಿಯಲ್ಲಿ ಡಿ.24 ರ ಸಂಜೆ ಕ್ರಿಸ್ಮಸ ಹಬ್ಬ ಸಡಗರ ಭಕ್ತಿಭಾವದಿಂದ ದಿವ್ಯ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು.

ಕ್ರಿಸ್ಮಸ್ ಪ್ರಯುಕ್ತ ಮಂಗಳೂರಿನ ಜೆಪ್ಪು ಸೆಮಿನರಿಯ ಪ್ರಾದ್ಯಪಕರಾದ ವಂ।ಐವನ್ ಡಿಸೋಜಾ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ‘ದೇವ ಪುತ್ರನು ಈ ಜಗತ್ತಿನಲ್ಲಿ ಮನುಷ್ಯನೊಂದಿಗೆ ಜೀವಿಸಲು ಮನುಷ್ಯನಾಗಿ ಹುಟ್ಟಿದ, ಮನುಷ್ಯ ಹೇಗೆ ಜೀವಿಸಬೇಕೆಂದು ತಿಳಿಸಲು ದೇವರು ಮನುಷ್ಯನಾಗಿ ಹುಟ್ಟಿದ, ಸಂತೋಷದ ವಿಚಾರ ಎನೆಂದರೆ, ದೇವರು ನಮ್ಮೊಂದುಗೆ ಜೀವಿಸಲು ಬಂದಿದ್ದು. ಆದರೆ ಇಂದು ದೇವರು ನಮ್ಮೊಂದಿಗೆ ಭೇಟಿ ಮಾಡುವುದಿಲ್ಲ, ಆದರೆ ಇತರ ಮನುಷ್ಯರ ಮುಖಾಂತರ ನಮಗೆ ಸಹಾಯ ಮಾಡುತ್ತಾನೆ, ಮಮತೆ ತೋರಿಸುತ್ತಾನೆ, ಕಶ್ಟ ಕಾರ್ಪ್ಯಣಗಳನ್ನು ನೀಗಿಸುತ್ತಾನೆ, ಹಾಗಾಗಿ ನಾವು ಇಂತಹ ಪುಣ್ಯ್ದ ಕೆಲಸಗಳನ್ನು ನಾವು ಮಾಡಬೇಕು. ನೋಡಿ ಯೇಸು ಯಾವುದೇ ಆಡಂಭರ ಇಲ್ಲದೆ, ಹಟ್ಟಿಯಲ್ಲಿ ಜನಿಸಿದ. ಹಟ್ಟಿಯಲ್ಲಿ, ಅನ್ಯಾಯ ಇಲ್ಲ, ಗೌಜಿ ಗಲಾಟೆ ಇಲ್ಲ, ಅಹಂಕಾರ ಇಲ್ಲ, ದೊಡ್ಡಸ್ತಿಕೆ ಇಲ್ಲ, ಮೇಲು ಕೀಳು ಇಲ್ಲ, ಅಲ್ಲಿ ಶಾಂತಿಯ ವಾತವರಣ ಇದೆ, ಆದರಿಂದ ಯೇಸು ಹಟ್ಟಿಯಲ್ಲಿ ಜನಿಸಿದ, ಇದರ ಸಂದೇಶ ನಾವು ಕೂಡ ಸಾಮನ್ಯರಂತೆ ಬಡವರಾಗಿ, ಜೀವಿಸಿ ಇತರರಿಗೆ ಸಹಾಯ ಮಾಡುವಂತರರಾಬೇಕು.’ ಎಂದು ಸಂದೇಶ ನೀಡಿದರು.

ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸಿ, ಶುಭಾಷಯ ಕೋರಿ ವಂದಿಸಿದರು. ಐಸಿವೈಎಮ್ ಸಂಘಟನೇಯಿಂದ ವಾಳೆಯವರಿಗಾಗಿ ಕೇಕ್ ವಿತರಿಸಲಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!