spot_img
Friday, January 30, 2026
spot_img

ಕರ್ನಾಟಕ ಕರಾವಳಿ ಅಭಿವೃದ್ಧಿಯ ವಿಧೇಯಕ ಮಂಡನೆ: ಶಾಸಕ ಗುರುರಾಜ ಗಂಟಿಹೊಳೆ

ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ವಿಧಾನ ಸಭೆಯ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ ಸದಸ್ಯರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಬೆಳಗಾವಿಯ ಚಳಿಗಾಲದ ವಿಧಾನಸಭೆಯ ಅಧಿವೇಶನದಲ್ಲಿ ತಮ್ಮದೇ ಆದ ಖಾಸಗಿ ವಿಧೇಯಕವನ್ನು ಮಂಡಿಸುವ ಸಲುವಾಗಿ, ಬೆಳಗಾವಿಯ ಸುವರ್ಣ ಸೌಧದ ಮೊದಲನೇ ಮಹಡಿಯಲ್ಲಿ ಮಂಗಳವಾರ ಸಂಜೆ ಉಪ ಸಭಾಧ್ಯಕ್ಷರು ಹಾಗೂ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿರವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ವಿಧಾನ ಸಭೆಯ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಕರಾವಳಿಯ ಅಭಿವೃದ್ಧಿಯ ಹಿತದೃಷ್ಟಿಯಿಂದ “The Karnataka Overall Development In Karavali Bill – 2025” ಎಂಬ ವಿಧೇಯಕವನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಅನುಮತಿ ಕೋರಿ, ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಅಧಿಕಾರಿಗಳ ಗಮನ ಸೆಳೆದರು.

ಈ ವಿಧೇಯಕವನ್ನು ಪರಿಶೀಲಿಸಿ ಸಮಿತಿಯು ಮುಂದಿನ ಕ್ರಮವಹಿಸುವುದು ಎಂಬ ಭರವಸೆಯನ್ನು ಶಾಸಕರು ವ್ಯಕ್ತಪಡಿಸಿದರು.
ಈ ವಿದೇಯಕದ ಪ್ರಮುಖ ಉದ್ದೇಶಗಳೆಂದರೆ ಕರಾವಳಿ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಘೋಷಣೆ, ಮೀನುಗಾರಿಕೆ ಕೃಷಿ ಪ್ರವಾಸೋದ್ಯಮಗಳ ಸಮಗ್ರ ಅಭಿವೃದ್ಧಿ, ಪ್ರವಾಸೋದ್ಯಮ ವಲಯಕ್ಕೆ ಸಮರ್ಪಿತ ನೀತಿ ಸ್ವಾಯತ್ತತೆ, ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿ, ಕರಾವಳಿಯ ಸ್ಥಳೀಯ ಕಲೆ ಸಂಸ್ಕೃತಿಯ ಸಂರಕ್ಷಣೆ ಸೇರಿದಂತೆ ಹಲವಾರು ಕರಾವಳಿಯ ಅಭಿವೃದ್ಧಿಯ ಹಿತದೃಷ್ಟಿಯನ್ನು ಈ ವಿಧೇಯಕವು ಹೊಂದಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!