spot_img
Friday, January 30, 2026
spot_img

ಯಕ್ಷಗಾನ ಕಲಾವಿದ ವಸಂತ ಗೌಡ ಕಾಯರ್ತ್ತಡ್ಕ ಅವರಿಗೆ ಸನ್ಮಾನ

ಕುಂದಾಪುರ: ಧರ್ಮಸ್ಥಳ ಮೇಳವೊಂದರಲ್ಲಿಯೇ 50 ವರ್ಷಗಳ ಸತತ ಸೇವೆ ಸಲ್ಲಿಸಿ 51ನೇ ವರ್ಷದ ತಿರುಗಾಟ ಮಾಡುತ್ತಿರುವ ಹಿರಿಯ ಕಲಾವಿದ ವಸಂತ ಗೌಡ ಕಾಯರ್ತ್ತಡ್ಕ ಅವರನ್ನು ಡಿ.8ರಂದು ಕರ್ಕುಂಜೆ ಗ್ರಾ.ಪಂ. ವ್ಯಾಪ್ತಿಯ ಶರಾಳ ಹೊಸಮನೆಯಲ್ಲಿ ನಡೆದ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಸೇವಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿಜ್ರಿ ರಾಜೀವ ಶೆಟ್ಟಿ, ಶ್ರೀಗಿರಿ ಮಹಾಲಕ್ಷ್ಮೀ ದೇವಸ್ಥಾನದ ಮುಖ್ಯಸ್ಥರಾದ ಶಂಕರ ಪೈ ನೇರಳಕಟ್ಟೆ, ಸೇವಾರ್ಥಿಗಳಾದ ಜಲಜ ಮುಡೂರ ನಾಯ್ಕ್, ಚಂದ್ರ ನಾಯ್ಕ್, ಹೇಮ ಚಂದ್ರ ನಾಯ್ಕ್, ಗೋಪಾಲ ನಾಯ್ಕ್, ಸುಮತಿ ಗೋಪಾಲ ನಾಯ್ಕ್, ಆನಂದ ನಾಯ್ಕ್, ಶೀನ ಪೂಜಾರಿ, ರವಿ ಗಾಣಿಗ, ಭಾಸ್ಕರ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.

ವಾಸು ಜಿ.ನಾಯ್ಕ್ ಸನ್ಮಾನಿತರನ್ನು ಪರಿಚಯಿಸಿದರು. ಉಪನ್ಯಾಸಕ ಮಂಜುನಾಥ ಚಂದನ್ ನೆಂಪು ಸನ್ಮಾನ ಪತ್ರ ವಾಚಿಸಿ ಕಾರ್ಯಕ್ರಮ ನಿರ್ವಹಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!