spot_img
Tuesday, March 10, 2026
spot_img

ಸಂಭ್ರಮದ ಕಾಳಾವರ ಚಂಪಾ ಷಷ್ಠಿ ಮಹೋತ್ಸವ

ಕುಂದಾಪುರ: ಕರಾವಳಿಯ ಹೆಸರಾಂತ ನಾಗಕ್ಷೇತ್ರವಾಗಿರುವ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದಲ್ಲಿ ನವಂಬರ್ 26 ಬುಧವಾರ ಚಂಪಾ ಷಷ್ಠಿ (ಹಿರಿಷಷ್ಠಿ) ನಡೆಯಿತು.

ನ. 25 ಬೆಳಿಗ್ಗೆ ೯ ರಿಂದ ನವಕುಂಭ ಸ್ನಪನ-ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವರಿಗೆ ರುದ್ರಾಭಿಷೇಕ-ಶ್ರೀ ಮಹಾಲಿಂಗೇಶ್ವರ ದೇವರಿಗೆ. ಮಧ್ಯಾಹ್ನ ಗಂಟೆ ೧೨.೩೦ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ ಗಂಟೆ ೧.೦೦ಕ್ಕೆ ಪ್ರಸಾದ ವಿತರಣೆ. ನ.೨೬-೧೧-೨೦೨೫ನೇ ಬುಧವಾರ ಬೆಳಿಗ್ಗೆ ೪.೩೦ಕ್ಕೆ ಅಭಿಷೇಕ, ಪಂಚಾಮೃತ ಪೂಜೆ, ಮಂಗಳಾರತಿ, ಉದಯ ಗಂಟೆ ೫.೦೦ರಿಂದ ಹಣ್ಣುಕಾಯಿ, ಹೂ ಕಾಯಿ, ಕಲಶ ಸಮರ್ಪಣೆ, ಕರ್ಪೂರ ಆರತಿ ದೇವರ ದರ್ಶನ, ತೀರ್ಥಪ್ರಸಾದ ವಿತರಣೆ ನಡೆಯಿತು. ಬೆಳಿಗ್ಗೆ ೭ ರಿಂದ ಋತ್ವಿಜರಿಂದ ವೇದ ಪಾರಾಯಣ ಗಂಟೆ ೧೦.೩೦ರಿಂದ ಉರುಳು ಸೇವೆ, ಮಧ್ಯಾಹ್ನ ೧೨.೦೦ಕ್ಕೆ ಕಲಶಾಭಿಷೇಕ, ಮಹಾಮಂಗಳಾರತಿ, ಸಂದರ್ಶನ (ದರ್ಶನ) ಕ್ಷೇತ್ರ ಪ್ರದಕ್ಷಿಣೆ ಪಲ್ಲಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ೬.೩೦ ರಿಂದ ರಾತ್ರಿ ೮.೩೦ರ ವರೆಗೆ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ಸುಬ್ರಹ್ಮಣ್ಯ ಮಹಿಳಾ ಭಜನಾ ತಂಡ ಕಾಳಾವರ ಹಾಗೂ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ಸುಬ್ರಹ್ಮಣ್ಯ ಮಕ್ಕಳ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ, ರಾತ್ರಿ ೮.೩೦ಕ್ಕೆ ರಂಗಪೂಜೆ (ಶ್ರೀ ಮಹಾಲಿಂಗೇಶ್ವರ ದೇವರಿಗೆ) ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎ.ಅಜಿತ್ ಕುಮಾರ್ ಶೆಟ್ಟಿ ಅಸೋಡು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತ್ಯನಾರಾಯಣ ಪುರಾಣಿಕ (ಅರ್ಚಕರು) ಕೆ.ರಂಜನ್ ಕುಮಾರ ಶೆಟ್ಟಿ ಸಳ್ವಾಡಿ, ಸುಧೀರ್ ಜಿ.ಕಾಳಾವರ, ಎ.ಚಂದ್ರಶೇಖರ ಶೆಟ್ಟಿಗಾರ ಅಸೋಡು, ಅಕ್ಷತಾ ಎನ್ ಶೆಟ್ಟಿ ಕಾಳಾವರ, ಕೆ.ರತ್ನಾಕರ ಶೆಟ್ಟಿ ಕಾಳಾವರ, ರಾಜೀವಿ ಕಾಳಾವರ, ಸುಧಾಕರ ಶೆಟ್ಟಿ ಕಾಳಾವರ ಹಾಗೂ ಕಾಳಾವರದ ಹತ್ತು ಸಮಸ್ತರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!