spot_img
Monday, March 16, 2026
spot_img

ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಇನ್ನಿಲ್ಲ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಹಿರಿಯ ಯಕ್ಷಗಾನ ಪ್ರಸಂಗಕರ್ತ, ತಾಳಮದ್ದಳೆ ಅರ್ಥಧಾರಿ, ರಂಗನಟ, ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ (89ವ) ಇನ್ನು ನೆನಪು ಮಾತ್ರ. ವಯೋ ಸಹಜ ಕಾರಣದಿಂದ ಅವರು ಬುಧವಾರ ಬೆಳಗಿನ ಜಾವ ನೂಜಾಡಿಯ ಸ್ವಗೃಹದಲ್ಲಿ ನಿಧನರಾದರು.

1936ರಲ್ಲಿ ಬಳ್ಕೂರು ಕಂದಾವರದಲ್ಲಿ ಕರ್ಕಿ ಸದಿಯಣ್ಣ ಶೆಟ್ಟಿ ಮತ್ತು ಪುಟ್ಟಮ್ಮ ಶೆಟ್ಟಿ ದಂಪತಿಗಳ ಪುತ್ರರಾಗಿ ಜನಿಸಿದ್ದ ಇವರು ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ 35 ವರ್ಷಗಳ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಯಕ್ಷಗಾನದ ಆಸಕ್ತಿ ಮೈಗೂಡಿಸಿಕೊಂಡಿದ್ದ ಅವರು ಬಾಲ ಕಲಾವಿದರಾಗಿ, ಭಾಗವತರಾಗಿ ಹವ್ಯಾಸಿ ಕಲಾವಿದರಾಗಿ ರೂಪುಗೊಂಡವರು.

ಯಕ್ಷಗಾನ ಸಾಹಿತ್ಯವನ್ನು ಸ್ವತಃ ಅಭ್ಯಾಸಿಸಿದ್ದ ಅವರು ಯಕ್ಷ ಛಂದಸ್ಸು ವಿಚಾರದಲ್ಲಿ ಆಳವಾದ ಅನುಭವ ಪಡೆದುಕೊಂಡರು. ದಿ.ಎಂ.ಎಂ.ಹೆಗ್ಡೆಯವರ ಕೂಟದಲ್ಲಿ ಹೆಚ್ಚು ತೊಡಗಿಸಿಕೊಂಡರು. ತಾಳಮದ್ದಲೆಯ ಅರ್ಥಧಾರಿಯಾಗಿ ಬೆಳೆದರು. ಈ ನಡುವೆ ರಂಗಭೂಮಿಯಲ್ಲೂ ಕೂಡಾ ಮಿಂಚಿದರು.

ಯಕ್ಷಗಾನ ಪ್ರಸಂಗ ರಚನೆಯಲ್ಲಿ ಕಂದಾವರ ಹೆಸರು ಅಜರಾಮರ. ಶ್ರೀದೇವಿ ಬನಶಂಕರಿ, ಚಲುವೆ ಚಿತ್ರಾವತಿ, ಶೂದ್ರ ತಪಸ್ವಿನಿ, ರತಿ ರೇಖಾ, ವಸುವರಾಂಗಿ, ಸೀತಾ ಪಾರಮ್ಯ, ನಾಗ ನಂದನೆ, ಸತಿ ಸೀಮಂತಿನಿ, ವಧು ಮಾಧವಿ ಮೊದಲಾದ ಪ್ರಸಂಗಗಳು ಇಂದಿಗೂ ನಿತ್ಯನೂತನವಾಗಿ ಉಳಿದಿವೆ. ಡೇರೆ ಮೇಳ, ಬಯಲಾಟ ಮೇಳ, ತೆಂಕು ಬಡಗು ಬಡಾಬಡಗು ತಿಟ್ಟುಗಳಲ್ಲಿ ಇವರ ಪ್ರಸಂಗಗಳು ಜಯಭೇರಿ ಭಾರಿಸಿದ್ದವು. ಈಗಲೂ ಕೂಡಾ ಅವರ ಪ್ರಸಂಗಗಳು ಪೌರಾಣಿಕ ಪ್ರಸಂಗಗಳ ಸಾಲಿನಲ್ಲಿ ಪ್ರಚಲಿತತೆ ಕಾಯ್ದುಕೊಂಡಿವೆ.

ನಿವೃತ್ತಿಯ ನಂತರ ಅವರು ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂಜಾಡಿಯಲ್ಲಿ ಪತ್ನಿ ಮಕ್ಕಳೊಂದಿಗೆ ನೆಲೆಸಿದ್ದರು. ಇವರ ಮೇರು ಸಾಧನೆಯನ್ನು ಕೊನೆಗೂ ಸರಕಾರ ಗುರುತಿಸುವಲ್ಲಿ ವಿಫಲವಾಗಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!