spot_img
Wednesday, March 11, 2026
spot_img

ವರಾಹಿ ಪಂಪ್ಡ್ ಸ್ಟೋರೇಜ್ ಜನವಿರೋಧಿ ಯೋಜನೆ-ವಿಕಾಸ್ ಹೆಗ್ಡೆ

ಕುಂದಾಪುರ: ತಾಲ್ಲೂಕಿನ ಹೊಸಂಗಡಿ ಹಾಗೂ ಮಚ್ಚಟ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ನಿಗಮವು ಕೇಂದ್ರ ಸರ್ಕಾರದ ರಾಷ್ಟ್ರಿಯ ಉಷ್ಣ ವಿದ್ಯುತ್ ನಿಗಮದ ಅಂಗ ಸಂಸ್ಥೆಯಾದ ತೆಹ್ರಿ ಹೈಡ್ರೋ ಡೆವಲಪ್ಮೆಂಟ್ ಕಾರ್ಪೋರೇಶನ್ ಸಂಸ್ಥೆಯೊಂದಿಗಿನ ಸುಮಾರು ೧,೫೦೦ ಕೋಟಿ ವೆಚ್ಚದ ವೆಚ್ಚದ ಒಪ್ಪಂದದಲ್ಲಿ ಸುಮಾರು ೧೫೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನ ಸಾಮರ್ಥ್ಯದ ವರಾಹಿ ಪಂಪ್ಡ್ ಸ್ಟೋರೇಜ್ ಕೂಡ ಸೇರಿರುವುದು ವರಾಹಿ ನದಿ ಪಾತ್ರದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅತ್ಯಂತ ಅಪಾಯಕಾರಿ ಯೋಜನೆಯಾಗಿದೆ ಎಂದು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ತಿಳಿಸಿದ್ದಾರೆ.

ಮಾಣಿ ಆಣೆಕಟ್ಟುವಿನಿಂದ ಹರಿದು ಬಂದ ನೀರು ಹೊಸಂಗಡಿಯ ಕರ್ನಾಟಕ ವಿದ್ಯುತ್ ನಿಗಮದ ಜಲ ವಿದ್ಯುತ್ ಉತ್ಪಾದನಾ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ವರಾಹಿ ನದಿಯ ಮೂಲಕ ಹರಿದುಬಂದು ಹೋರಿಯಬ್ಬೆಯ ಅಣೆಕಟ್ಟುವಿನಲ್ಲಿ ಶೇಖರಣೆಯಾಗಿ ಅಲ್ಲಿಂದ ವರಾಹಿ ನದಿ ಮತ್ತು ವರಾಹಿ ಕಾಲುವೆ ಮೂಲಕ ರೈತರ ಕೃಷಿ ಭೂಮಿಗೆ ಹರಿಯುತ್ತದೆ. ಇವತ್ತು ವರಾಹಿ ಎಡ ದಂಡೆ ಕಾಲುವೆಯ ಕಾಮಗಾರಿ ಮುಗಿದಿದ್ದು ಸುಮಾರು ೮,೦೦೦ ಹೆಕ್ಟೇರ್ ಕೃಷಿ ಭೂಮಿಗೆ ನೀರು ಹರಿಯುತ್ತಿದ್ದರೆ, ವರಾಹಿ ಏತ ನೀರಾವರಿ ಕಾಲುವೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಹಾಗೂ ಅದರ ಜೊತೆ ವರಾಹಿ ನದಿಯಲ್ಲಿ ಬಳ್ಕೂರು ಗ್ರಾಮದ ತನಕ ಸಾವಿರಾರು ರೈತರು ಕೃಷಿ ಪಂಪುಸೆಟ್ ಗಳ ಮೂಲಕ ತಮ್ಮ ಕೃಷಿ ಭೂಮಿಗಳಿಗೆ ನೀರನ್ನು ಬಳಸುತ್ತಿದ್ದಾರೆ. ಇನ್ನು ಕುಂದಾಪುರ ಪುರಸಭೆ ಮತ್ತು ಸುಮಾರು ಹನ್ನೆರಡು ಗ್ರಾಮ ಪಂಚಾಯತುಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಾಗುವುದು ವರಾಹಿ ನದಿಯಿಂದ. ಆದುದರಿಂದ ಈ ಪಂಪ್ಡ್ ಸ್ಟೋರೇಜ್ ಯೋಜನೆ ಆದರೆ ವರಾಹಿ ನದಿಯಲ್ಲಿ ನೀರಿನ ಹರಿಯುವಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿ ರೈತರಿಗೆ, ಪುರಸಭೆ ಹಾಗೂ ಗ್ರಾಮ ಪಂಚಾಯತುಗಳಿಗೆ ಮುಂದೆ ನೀರಿನ ಹಾಹಾಕಾರ ತಲೆದೋರಲಿದೆ. ಆದುದರಿಂದ ಜನಪ್ರತಿನಿದಿನಗಳು ಕೂಡಲೇ ಎಚ್ಚೆತ್ತುಕೊಂಡು ಈ ಜನವಿರೋಧಿ ಯೋಜನೆ ಜಾರಿಯಾಗದಂತೆ ಕ್ರಮವಹಿಸಬೇಕು ಹಾಗೂ ಸರ್ಕಾರ ಈ ಯೋಜನೆ ಜಾರಿಗೆ ಮುಂದಾದರೆ ಉಗ್ರಹೋರಾಟ ಮಾಡುತ್ತೇವೆ ಎಂದು ಕುಂದಾಪುರ ತಾಲ್ಲೂಕು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!