spot_img
Thursday, March 12, 2026
spot_img

ಉಡುಪಿ: ಆದಿತ್ಯ ಬಿರ್ಲಾ ಶಾಖೆ ಆರಂಭ

ಉಡುಪಿ: ಆದಿತ್ಯ ಬಿರ್ಲಾ ಸನ್ ಲೈಫ್ ಎ‌ಎಂಸಿ ಲಿಮಿಟೆಡ್, ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ ಮತ್ತು ಸನ್ ಲೈಫ್ (ಇಂಡಿಯಾ) ಎ‌ಎಂಸಿ ಇನ್ವೆಸ್ಟ್‍ಮೆಂಟ್ ಐ‌ಎನ್‍ಸಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ನೂತನ ಶಾಖೆಯನ್ನು ಮಣಿಪಾಲದಲ್ಲಿ ಆರಂಭಿಸಿದೆ.
ಮಣಿಪಾಲ ಶಾಖೆಯು ಎಬಿ‌ಎಸ್‍ಎಲ್‍ಎ‌ಎಂಸಿಯ ಸಮಗ್ರ ಹೂಡಿಕೆ ಉತ್ಪನ್ನಗಳನ್ನು ವೈಯಕ್ತಿಕ ಮತ್ತು ಸಾಂಸ್ಥಿಕ ಹೂಡಿಕೆದಾರರಿಗೆ ತಲುಪಿಸುವ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ, ಈ ಪ್ರದೇಶದಲ್ಲಿ ವಿತರಣಾ ಪಾಲುದಾರರನ್ನು ಸಕ್ರಿಯಗೊಳಿಸುವತ್ತ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ಆದಿತ್ಯ ಬಿರ್ಲಾ ಸನ್ ಲೈಫ್ ಎ‌ಎಂಸಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿ‌ಇ‌ಒ ಎ. ಬಾಲಸುಬ್ರಮಣಿಯನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ನೂತನ ಶಾಖೆ ಉಡುಪಿ ಬನ್ನಂಜೆಯ ಜಯಲಕ್ಷ್ಮಿ ಸಿಲ್ಕ್ಸ್ ಬಳಿಯ ಡೈಮಂಡ್ ಕಾಂಪ್ಲೆಕ್ಸ್‍ನ ಒಂದನೇ ಮತ್ತು 2ನೇ ಮಹಡಿಯಲ್ಲಿದ್ದು, ಹೂಡಿಕೆದಾರರನ್ನು ಸಬಲೀಕರಣಗೊಳಿಸುವ ಮತ್ತು ಅವರ ಹೆಚ್ಚುತ್ತಿರುವ ಆರ್ಥಿಕ ಆಕಾಂಕ್ಷೆಗಳನ್ನು ಬೆಂಬಲಿಸುವ ಮೂಲಕ, ಕರ್ನಾಟಕದಲ್ಲಿ, ವಿಶೇಷವಾಗಿ ಮಣಿಪಾಲದಂತಹ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಎಬಿ‌ಎಸ್‍ಎಲ್‍ಎಂಎ‌ಎಂಸಿಯ ಬೆಳವಣಿಗೆಯಲ್ಲಿ ಶಾಖೆಯು ಸಕ್ರಿಯ ಪಾತ್ರ ವಹಿಸಲು ಸಜ್ಜಾಗಿದೆ.

ದೇಶಾದ್ಯಂತ 300ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಮಣಿಪಾಲ ಶಾಖೆ ಆರಂಭದೊಂದಿಗೆ ಕರ್ನಾಟಕದಲ್ಲಿ ತನ್ನ ರಿಟೇಲ್ ವಿತರಣಾ ಹೆಜ್ಜೆಗುರುತನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಹೂಡಿಕೆದಾರರಿಗೆ, ವಿಶೇಷವಾಗಿ ಶ್ರೇಣಿ 3 ಮತ್ತು ಶ್ರೇಣಿ 4 ನಗರಗಳಲ್ಲಿ ವಿಶ್ವಾಸಾರ್ಹ ಆಸ್ತಿ ವ್ಯವಸ್ಥಾಪಕರಾಗಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಕಟಣೆ ಹೇಳಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!