spot_img
Friday, January 30, 2026
spot_img

ಅಮಾಸೆಬೈಲು ಡ್ಯುಯಲ್ ಸ್ಟಾರ್ ಶಾಲೆ ಶಿಕ್ಷಕ ವಿಘ್ನೇಶ್ ಜಿ.ಎಲ್ ಅವರಿಗೆ ಡಾ.ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ ಪ್ರದಾನ

ಮಾಸೆಬೈಲು: ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಹಾಜಿ ಅಬ್ದುಲ್ಲ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ರಿ., ಉಡುಪಿ, ರೋಟರಿ ಕ್ಲಬ್ ಕೋಟ ಸಿಟಿ, ಉಸಿರು ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಕೋಟ ಥೀಮ್ ಪಾರ್ಕ್‌ನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಹೊಸತನಕ್ಕಾಗಿ ಪ್ರೌಢಶಾಲೆಯ ವಿಭಾಗದಲ್ಲಿ ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಇಲ್ಲಿನ ಸಹಶಿಕ್ಷಕರಾದ ವಿಘ್ನೇಶ್.ಜಿ.ಎಲ್.ರವರಿಗೆ ಡಾ.ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ 2025 ಪ್ರದಾನ ಮಾಡಲಾಯಿತು.

ಈ ಸಮಾರಂಭದಲ್ಲಿ ಉಡುಪಿಯ ಸಾಂಸ್ಕೃತಿಕ ಚಿಂತಕರಾದ ಸೈಯದ್ ಸಿರಾಜ್ ಅಬ್ದುಲ್, ಡಯಟ್‌ನ ಪ್ರಾಂಶುಪಾಲರಾದ ಅಶೋಕ್ ಕಾಮತ್, ಆನಂದ್ ಸಿ.ಕುಂದರ್, ಸುಬ್ರಾಯ ಆಚಾರ್ಯ, ವಾಸು ಪೂಜಾರಿ, ರವೀಂದ್ರ ರಾವ್, ನರೇಂದ್ರ ಕುಮಾರ್ ಕೋಟ ಉಪಸ್ಥಿತರಿದ್ದರು.

ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!