spot_img
Thursday, March 12, 2026
spot_img

ಕುಂದಾಪುರ ಹಳೆ ತಾಲೂಕು ಕಛೇರಿ ಬಳಿಯ ಸರಕಾರಿ ಕಟ್ಟಡದ ಮೇಲೆ ಉರುಳಿ ಬಿದ್ದ ಬೃಹತ್ ಮರ

ಕುಂದಾಪುರ : ಕುಂದಾಪುರದ ಹಳೆ ತಾಲೂಕು ಕಛೇರಿ ಆವರಣದ ಸರಕಾರಿ ಕಟ್ಟಡದ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದ ಘಟನೆ ಇಂದು (ಅ.2) ಸಂಜೆ ನಡೆದಿದೆ.

ವಿಜಯದಶಮಿ ಗಾಂಧಿ ಜಯಂತಿ ಪ್ರಯುಕ್ತ ಸರಕಾರಿ ರಜೆ ಇರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಸರಕಾರಿ ಕಛೇರಿಗಳು ತೆರೆದಿದ್ದರೆ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ನಿಲ್ಲುತ್ತಿದ್ದರು. ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

ಅಂಚೆ ಕಚೇರಿ ಇರುವ ಕಟ್ಟಡದ ಮೇಲೆ ಸಮೀಪದಲ್ಲಿದ್ದ ಮರ ಬುಡ ಕೆಟ್ಟು ಹೋಗಿ ಬಿದ್ದಿದ್ದು ಕಟ್ಟಡ ಸಂಪೂರ್ಣ ಜಖುಂ ಆಗಿದೆ. ಮರ ಕಟ್ಟಡ ಮೇಲೆಯೇ ಒರಗಿದ್ದು, ಕಟ್ಟಡದ ಒಳಗಿನ ದಾಖಲೆಗಳನ್ನು ತೆಗೆಯುವ ಕೆಲಸವನ್ನು ಸಿಬ್ಬಂದಿಗಳು ಮಾಡುತ್ತಿದ್ದಾರೆ.

ಸಾಕಷ್ಟು ಹಳೆ ಮರ ಇದಾಗಿದ್ದು ಮರದ ಬುಡದ ತಿರುಳಿನ ಭಾಗ ಕೆಟ್ಟು ಹೋಗಿದ್ದು, ನೆಲಮಟ್ಟದಿಂದಲೇ ತುಂಡಾಗಿ ಮರ ಕಟ್ಟಡದ ಮೇಲೆ ಉರುಳಿದೆ. ನಿಧಾನಕ್ಕೆ ಮರ ಬಿದ್ದ ಪರಿಣಾಮ ಕಟ್ಟಡ ನೆಲಸಮವಾಗಿಲ್ಲ. ಮರದ ಗೆಲ್ಲುಗಳು ಪಕ್ಕದ ಬಸ್ ನಿಲ್ದಾಣದ ಕಟ್ಟಡಕ್ಕೂ ತಡೆದುಕೊಂಡಿವೆ.

ಸ್ಥಳಕ್ಕೆ ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!