spot_img
Thursday, March 12, 2026
spot_img

ಬರೆಯಲು ಉತ್ತಮ ಓದು ಅತ್ಯವಶ್ಯಕ-ಪತ್ರಕರ್ತ ಲಕ್ಷ್ಮೀ ಮಚ್ಚಿನ

ಕುಂದಾಪುರ: ಬರಹ ಉತ್ತಮವಾಗಿರಬೇಕಾದರೆ ಒಳ್ಳೆಯ ಓದುಗರಾಗಿರಬೇಕು. ಬರವಣಿಗೆ ಎನ್ನುವುದು ಎಲ್ಲರಿಗೂ ಅವಶ್ಯಕ. ಬರೆಯುವುದಕ್ಕೆ ಆಸಕ್ತಿಯ ಜೊತೆಗೆ ಉತ್ತಮ ಓದು ವಿಷಯದ ಕುರಿತ ತಿಳುವಳಿಕೆ ಅಗತ್ಯ ಎಂದು ಉದಯವಾಣಿ ಪತ್ರಿಕೆಯ ಕುಂದಾಪುರದ ಉಪ ಮುಖ್ಯ ವರದಿಗಾರರಾದ ಲಕ್ಮೀ ಮಚ್ಚಿನ ಹೇಳಿದರು.

ಅವರು ಸೆಪ್ಟೆಂಬರ್ ೨೩ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗವು ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪ್ರ ೮೯.೬ ಎಫ್. ಎಮ್ ಇವರ ಸಹಯೋಗದಲ್ಲಿ ನಡೆಸಿದ ‘ತಿಂಗಳ ಅತಿಥಿ’ ಕಾರ್ಯಕ್ರಮದಲ್ಲಿ ಪತ್ರಿಕಾ ಬರವಣಿಗೆಯ ತಂತ್ರಗಳು ಕುರಿತು ವಿಶೇಷ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.

ಮುಖ್ಯವಾಗಿ ಪತ್ರಿಕೆಯ ಬರವಣಿಗೆಯಲ್ಲಿ ಶೀರ್ಷಿಕೆ, ಪ್ರಸ್ತಾವನೆ ಮತ್ತು ವಿಸ್ತೃತ ಮಾಹಿತಿಗಳು ಮುಖ್ಯವಾಗಿರುತ್ತದೆ ಎಂದು ಹೇಳಿದ ಅವರು, ಕೆಲವು ನುಡಿಚಿತ್ರ ಮತ್ತು ಲೇಖನಗಳ ಉದಾಹರಣೆ ತೋರಿಸಿ ಅದರ ಸ್ವಾರಸ್ಯಕರ ಶೀರ್ಷಿಕೆಗಳು, ವಿಷಯವನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಮಾತನಾಡಿ ಪತ್ರಿಕಾ ರಂಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗ. ಪತ್ರಿಕೆಗಳಿಂದ ಕ್ರಾಂತಿಯೇ ಸೃಷ್ಟಿಯಾಗಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ನಾಯ್ಕ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಸಿಂಚನ ಮತ್ತು ಶ್ವೇತ ಪ್ರಾರ್ಥನೆ ನೆರವೇರಿಸಿದರು. ಶ್ರಾವ್ಯ ಸ್ವಾಗತಿಸಿದರು. ಅಮೃತ ಪರಿಚಯಿಸಿದರು. ಕಾರ್ಯಕ್ರಮ ಸಂಯೋಜಕ ವಿದ್ಯಾರ್ಥಿ ಸತ್ಯನ್ ಕಾಂಚನ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!