spot_img
Wednesday, April 1, 2026
spot_img

ಸೆ.22ರಿಂದ ಅ.2: ಬಗ್ವಾಡಿಯಲ್ಲಿ ಶರನ್ನವರಾತ್ರಿ | ‘ಮನೆಮನೆಗೆ ಮಹಿಷಾಮರ್ದಿನಿ’

ಕುಂದಾಪುರ: ಕರಾವಳಿಯ ಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲಿ ಒಂದಾದ ಕುಂದಾಪುರ ತಾಲೂಕು ಬಗ್ವಾಡಿಯ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲಿ ಶರನ್ನವರಾತ್ರಿ ಮಹೋತ್ಸವ ಸೆ.22ರಿಂದ ಅ.2ರ ತನಕ ನಡೆಯಲಿದೆ. ಪ್ರತಿದಿನ ಚಂಡಿಕಾ ಹೋಮ, ಚಂಡಿಕಾ ಪಾರಾಯಣ, ಪಂಚಾಮೃತಾಭಿಷೇಕ, ಕಲ್ಪೋಕ್ತ ಪೂಜೆ ಮತ್ತು ವಿಜಯ ದಶಮಿಯಂದು ಮಹಾಚಂಡಿಕಾ ಹೋಮ ನಡೆಯಲಿದೆ.

ಸೆ.24ರಂದು ಸಾಮೂಹಿಕ ಚಂಡಿಕಾ ಯಾಗ ನಡೆಯಲಿದೆ. ಅ.2 ಗುರುವಾರ ವಿಜಯದಶಮಿಯಂದು ಮಹಾ ಚಂಡಿಕಾ ಹೋಮ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

‘ಮನೆಮನೆಗೆ ಮಹಿಷಾಮರ್ದಿನಿ:’
ಕಳೆದ ವರ್ಷ ಶರನ್ನವರಾತ್ರಿಯಂದು ಕರಾವಳಿ ಭಾಗದಲ್ಲಿಯೇ ಪ್ರಥಮ ಬಾರಿಗೆ ಮನೆಮನೆಗೆ ಮಹಿಷಾಮರ್ದಿನಿ ಎನ್ನುವ ವಿಶಿಷ್ಠ ಕಾರ್ಯಕ್ರಮ ಆಯೋಜಿಸಿ ಅಭುತಪೂರ್ವ ಯಶಸ್ಸು ಗಳಿಸಿದ ಕಾರ್ಯಕ್ರಮ ಈ ವರ್ಷ ಇನ್ನಷ್ಟು ವಿಶೇಷತೆಗಳೊಂದಿಗೆ ನಡೆಯಲಿದೆ. ಇಡೀ ಬಗ್ವಾಡಿ ಗ್ರಾಮದ ಪ್ರತಿಮನೆಗೂ ಮಹಿಷಾಮರ್ದಿನಿ ಮೆರವಣಿಯಲ್ಲಿ ಹೋಗುವ ವಿಶೇಷವಾದ ಕಾರ್ಯಕ್ರಮ ಇದಾಗಿದೆ. ಸುಮಾರು 250ಕ್ಕೂ ಹೆಚ್ಚು ಮನೆಗಳಿಗೆ ಮಹಿಷಾಮರ್ದಿನಿಯ ಅಲಂಕೃತ ಪೋಟೋವನ್ನು ಪುಷ್ಪಾಲಂಕೃತವಾಗಿರಿಸಿ ತಲೆಯ ಮೇಲೆ ಹೊತ್ತು ವಾದ್ಯಘೋಷದೊಂದಿಗೆ ಮನೆ ಮನೆಗೆ ತೆರಳಿ, ಪ್ರತೀ ಮನೆಯ ಒಳಗೆ ಕುರ್ಚಿಯಲ್ಲಿ ಕುಳಿಸಿ ಪೂಜಿಸಿ ಬರುವ ಅಪರೂಪದ ಪ್ರಕ್ರಿಯೆ ಇದಾಗಿದೆ. ಸಾಕ್ಷಾತ್ ಮಹಿಷಾಮರ್ದಿನಿ ದೇವಿಯೇ ಮನೆಮನೆಗೆ ಬರುತ್ತಾಳೆ ಎನ್ನುವ ಭಾವನಾತ್ಮಕವಾದ ನಂಬಿಕೆ ಗ್ರಾಮಸ್ಥರಲ್ಲಿ ಮೂಡುತ್ತದೆ. ಹಾಗಾಗಿ ಈ ಭಕ್ತಿ ಅಭಿಯಾನಕ್ಕೆ ಜನತೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಶರನ್ನವರಾತ್ರಿಯ ಸಮಯದಲ್ಲಿಯೇ ಶ್ರೀ ದೇವಿ ಮನೆಮನೆ ಬರುವುದು ಶುಭ ಹಾಗೂ ಸಂಪತ್ತಿನ ಸಂಕೇತವಾಗಿದೆ.

ಸೆ.24ರಂದು ಸಾಮೂಹಿಕ ಚಂಡಿಕಾಹೋಮ
ಎಲ್ಲಾ ಭಕ್ತಾಧಿಗಳಿಗೂ ಚಂಡಿಕಾ ಹೋಮದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸೆ.24 ಬುಧವಾರ ಬೆಳಿಗ್ಗೆ 9.30ರಿಂದ ಸಾಮೂಹಿಕ ಚಂಡಿಕಾಹೋಮ ನಡೆಸಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದೆ. ಸಾಮೂಹಿಕವಾಗಿ ಚಂಡಿಕಾಹೋಮದಲ್ಲಿ ಭಾಗವಹಿಸುವ ಭಕ್ತಾದಿಗಳು 7795229092 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!