spot_img
Friday, September 11, 2026
spot_img

ನಿರಂತರ ವೇದಿಕೆಯ ಪರಿಕಲ್ಪನೆ ಅರ್ಥಪೂರ್ಣ: ವಿಠ್ಠಲಾಚಾರ್ ಬಸ್ರೂರು

 

ತೆಕ್ಕಟ್ಟೆ: ಜುಲೈ: 25: ಕಲಿಕೆಯೊಂದಿಗೆ ಪ್ರದರ್ಶನವು ಇದ್ದಲ್ಲಿ ಅತೀ ತೀವ್ರ ಗತಿಯ ಕಲಿಕೆಯಾಗಿ ನಿರಂತರತೆಯನ್ನು ಸಾಧಿಸುವುದಕ್ಕೆ ಸಾಧ್ಯ. ಕಲಾವಿದರಿಗೆ ರಂಗವು ಅತೀ ಹೆಚ್ಚು ಹೆಚ್ಚು ದೊರಕಿದಾಗ ಪ್ರಬುದ್ಧತೆಯನ್ನು ಸಾಧಿಸುವುದಕ್ಕೆ ಕಾರಣವಾಗುತ್ತದೆ. ನಿರಂತರ ವೇದಿಕೆಯ ಪರಿಕಲ್ಪನೆ ಕೈಲಾಸ ಕಲಾಕ್ಷೇತ್ರದ ಯೋಜನೆ ನಿಜಕ್ಕೂ ಅರ್ಥಪೂರ್ಣ ಎಂದು ಭಾಗವತ ವಿಠ್ಠಲ ಆಚಾರ್ ಬಸ್ರೂರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಜುಲೈ 25ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಉಡುಪಿ ಜಿಲ್ಲೆ ಸಹಯೋಗದಲ್ಲಿ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಆಶ್ರಯದಲ್ಲಿ ‘ಮಹಾಭಾರತ’ ಸರಣಿ ಕಾರ್ಯಕ್ರಮವಾಗಿ ತಾಳಮದ್ದಳೆ ‘ಭೀಷ್ಮ ವಿಜಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಠ್ಠಲಾಚಾರ್ ಮಾತನ್ನಾಡಿದರು. ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಕಲಾಪೋಷಕ ಅ್ಯಂಡ್ರು ಡಿ ಸಿಲ್ವಾ, ಉಪನ್ಯಾಸಕ ಶಶಾಂಕ್ ಪಟೇಲ್ ಉಪಸ್ಥಿತರಿದ್ದರು. ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ‘ಭೀಷ್ಮ ವಿಜಯ’ ಕಾರ್ಯಕ್ರಮ ರಂಗದಲ್ಲಿ ಸಂಪನ್ನಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!