spot_img
Friday, March 13, 2026
spot_img

ಸಾಸ್ತಾನ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ: 1.45 ಕೋಟಿ ನಿವ್ವಳ ಲಾಭ| ಶೇ.20 ಡಿವಿಡೆಂಡ್ ಘೋಷಣೆ

ಜನಪ್ರತಿನಿಧಿ ವಾರ್ತೆ] ಸಾಸ್ತಾನ ಸಹಕಾರಿ ವ್ಯವಸಾಯಿಕ ಸಂಘವು ವರ್ಷದಿಂದ ವರ್ಷಕ್ಕೆ ಸಂಘದ ವ್ಯವಹಾರದಲ್ಲಿ ಮತ್ತು ಗಳಿಕೆಯಲ್ಲಿ ಪ್ರಗತಿಯಾಗುತ್ತಿದ್ದು ಸಂಘದ ಮೇಲೆ ಸದಸ್ಯರು ಮತ್ತು ಠೇವಣಿದಾರರು ಇಟ್ಟಿರುವ ವಿಶ್ವಾಸದ ಸಂಕೇತವಾಗಿದೆ. ಸದಸ್ಯರಿಗೆ ಇನ್ನಷ್ಟು ಸೌಲಭ್ಯವನ್ನು ಸಂಘದ ಮೂಲಕ ಒದಗಿಸಿಕೊಡಲು, ರೈತ ಸದಸ್ಯರ ಅವಶ್ಯಕತೆಗಳನ್ನು ಪೂರೈಸಲು ಸಂಘದ ಆಡಳಿತ ಮಂಡಳಿ ಬದ್ಧವಾಗಿದೆ ಎಂದು ಸಾಸ್ತಾನ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಬಿ.ಸುರೇಶ ಅಡಿಗ ಹೇಳಿದರು.

ಅವರು ಸೆ.13ರಂದು ಸಾಸ್ತಾನದ ಸೈಂಟ್ ಥೋಮಸ್ ಓರ್ಥೋಡಕ್ಸ್ ಸಿರಿಯನ್ ಚರ್ಚ್‍ನ ಸಂಭ್ರಮ ಸಭಾಂಗಣದಲ್ಲಿ ನಡೆದ ಸಂಘದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅವರು 20% ಡಿವಿಡೆಂಟ್ ಘೋಷಣೆ ಮಾಡಿದರು. ಸಂಘವು 58 ವರ್ಷಗಳ ಸಾರ್ಥಕ ಸೇವೆ ನೀಡಿ ಮುನ್ನೆಡೆಯುತ್ತಿದೆ. ಸಾಸ್ತಾನದಲ್ಲಿ ಪ್ರಧಾನ ಕಚೇರಿ ಹೊಂದಿ, ಹಂಗಾರಕಟ್ಟೆ ಹಾಗೂ ಮೂಡಹಡು-ಯೆಡಬೆಟ್ಟು ಶಾಖೆಗಳನ್ನು ಹೊಂದಿದೆ. ವರದಿ ವರ್ಷದ ಅಂತ್ಯಕ್ಕೆ ಒಟ್ಟು 10,458ಸದಸ್ಯರಿದ್ದು, ಒಟ್ಟು ರೂ.2,16,02,635 ಪಾಲು ಬಂಡವಾಳವನ್ನು ಹೊಂದಿದೆ. ಹಿಂದಿನ ಮಿತಿ 2 ಕೋಟಿ ಇದ್ದು ಕಳೆದ ಆರ್ಥಿಕ ವರ್ಷದಲ್ಲಿ ಮಿತಿ ಹೆಚ್ಚಾಗಿರುವುದರಿಂದ ರೂ.3 ಕೋಟಿಗೆ ಸಂಘದ ಅಧಿಕೃತ ಪಾಲು ಬಂಡವಾಳದ ಮಿತಿ ಹೆಚ್ಚಳಕ್ಕೆ ತೀರ್ಮಾನಿಸಿದೆ ಎಂದರು.

ಸಂಘದ ಠೇವಣಾತಿ ವರ್ಷಂತ್ಯಕ್ಕೆ ಶೇ.10.82 ಹೆಚ್ಚಳವಾಗಿದ್ದು, ಒಟ್ಟು ರೂ.87,27,82,303.92 ಠೇವಣಾತಿಯನ್ನು ಹೊಂದಿದೆ. ಸಂಘವು ಸತತವಾಗಿ 21 ರ್ಷಗಳಿಂದ ಎ ಶ್ರೇಣಿಯಲ್ಲಿ ಆಡಿಟ್ ವರ್ಗೀಕರಣ ಹೊಂದುತ್ತಿದ್ದು, ವರದಿ ವರ್ಷದಲ್ಲಿ ರೂ.1,45,00,595.53 ನಿವ್ವಳ ಲಾಭ ಗಳಿಸಿದೆ ಎಂದರು.

ಸದಸ್ಯರಿಗೆ ಬೇಡಿಕೆಗಳಿಗನುಗುಣವಾಗಿ ವರದಿ ವರ್ಷದಲ್ಲಿ ರೂ.49,40,23,001 ಸಾಲ ನೀಡಿದ್ದು, ರೂ. 39,13,49,063 ವಸೂಲಿ ಬಂದಿದ್ದು ವರ್ಷಾಂತ್ಯಕ್ಕೆ ರೂ. 65,60,80,227 ದಲ್ಲಿ ಹೊರಬಾಕಿ ಇದ್ದು ಸುಸ್ತಿ ಸಾಲ ರೂ. 1,94,62,214 ಇರುತ್ತದೆ. ಇದು ಒಟ್ಟು ಹೊರ ಬಾಕಿ ಸಾಲದ ಶೇ. 2.97% ಆಗಿದ್ದು ವಸೂಲಾತಿ ಪ್ರಮಾಣ ಶೇ. 97.03% ಆಗಿದೆ. ಮುಂದಿನ ದಿನಗಳಲ್ಲಿ ಸದಸ್ಯರು ಪಡೆದ ಸಾಲ ಕ್ಲಪ್ತ ಸಮಯಕ್ಕೆ ಮರುಪಾವತಿಸಿದ್ದಲ್ಲಿ ಇನ್ನೂ ಹೆಚ್ಚಿನ ಗುರಿ ಸಾಧಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.

ಸಂಘದ ಮೂರು ಮಾರಾಟ ವಿಭಾಗಕ್ಕೆ ಒಳಪಟ್ಟ ಗ್ರಾಹಕರಿಗೆ ಪಡಿತರ, ರಾಸಾಯನಿಕ ಗೊಬ್ಬರ ಮಾರಾಟಕ್ಕಾಗಿ ರಷ್ಟು ಮೌಲ್ಯದ ಸರಕು 5. 12,30,891.42 ಮೌಲ್ಯದ ಸರಕು ಖರೀದಿಸಿ ರೂ. 13,68,125.66 ರಷ್ಟು ಮೌಲ್ಯದ ಸರಕು ಮಾರಾಟ ಮಾಡಿ ವರ್ಷದ ಅಂತ್ಯದಲ್ಲಿ ರೂ. 3,45,750.17 ರಷ್ಟು ಮೌಲ್ಯದ ದಾಸ್ತಾನು ಇರುತ್ತದೆ. ಒಟ್ಟು ವ್ಯಾಪಾರ ಲಾಭ ರೂ.8,12,751.65 ಬಂದಿದೆ ಎಂದರು.

ಸಂಘದ 2023-24ನೇ ಸಾಲಿನ ಸರ್ವಾಂಗೀಣ ಸಾಧನೆಗಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿ ಲಭಿಸಿದೆ. ರಾಜ್ಯ ಸರಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ 752ಕ್ಕೂ ಮಿಕ್ಕಿ ಸದಸ್ಯರನ್ನು ನೊಂದಾಯಿಸಲಾಗಿದೆ. ಮಣಿಪಾಲ ಹೆಲ್ತ್ ಕಾರ್ಡ್ ಸೇವೆ ನೀಡಲಾಗಿದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಪೂಜಾರಿ ಸಂಘದ ವಾರ್ಷಿಕ ವರದಿ ಮಂಡಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಗೋವಿಂದ ಪೂಜಾರಿ ಮೂಡಹಡು, ನಿರ್ದೇಶಕರಾದ ಶ್ರೀಧರ ಪಿ.ಎಸ್ ಪಾಂಡೇಶ್ವರ, ಆನಂದ ಗಾಣಿಗ ಐರೋಡಿ, ಎ.ರಮೇಶ ಕಾರಂತ ಐರೋಡಿ, ಶ್ರೀಮತಿ ಕಮಲ ಆಚಾರ್ ಪಾಂಡೇಶ್ವರ, ಶ್ರೀಮತಿ ಲೀಲಾವತಿ ಗಂಗಾಧರ ಪಾಂಡೇಶ್ವರ, ಶೇಖರ ಗದ್ದೆಮನೆ ಬಾಳ್ಕುದ್ರು, ಚಂದ್ರಮೋಹನ ಪಾಂಡೇಶ್ವರ, ಅರುಣ ಪೂಜಾರಿ ವೈ ಮೂಡಹಡು, ವಿಜಯ ಪೂಜಾರಿ ಮೂಡಹಡು, ಕಿರಣ್ ಥೋಮಸ್ ಡಾಯಸ್ ಬಾಳ್ಕುದ್ರು, ಕು.ಪ್ರೀತಿ ಪಾಂಡೇಶ್ವರ, ಶ್ರೀಮತಿ ಜ್ಯೋತಿ ಎಸ್.ಪೂಜಾರಿ ಐರೋಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ವ್ಯಾಪ್ತಿಯ ರೈತ ಸಾಧಕರನ್ನು ಗೌರವಿಸಲಾಯಿತು. ಯುವ ಕೃಷಿಕ ಶಶಾಂಕ ಪೂಜಾರಿ ಪಾಂಡೇಶ್ವರ ಅವರಿಗೆ ರೈತಸಿರಿ ಯುವ ರೈತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘಕ್ಕೆ ನಿರಂತರವಾಗಿ ಸಾಫ್ಟ್‍ವೇರ್‍ನಲ್ಲಿ ಸೇವೆ ನೀಡುತ್ತಿದ್ದ ನಾಗರಾಜ ಭಟ್ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕ ಚಂದ್ರ ಮೋಹನ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!