spot_img
Wednesday, March 11, 2026
spot_img

ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ | 85 ಕೋಟಿ ಠೇವಣಿ :2.3 ಕೋಟಿ ಲಾಭ 17% ಡಿವಿಡೆಂಡ್ ಘೋಷಣೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಸುದೀರ್ಘ ಸಾಧನೆಯ ಇತಿಹಾಸ ಹೊಂದಿರುವ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಪ್ರಗತಿಯ ಪಥದಲ್ಲಿ ಮುನ್ನೆಡೆಯುತ್ತಿದೆ. ಉತ್ತಮ ರೀತಿಯಲ್ಲಿ ಸಾಲ ವಸೂಲಾತಿ ಸಾಧಿಸಿ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಸರಕಾರದಿಂದ ಸಿಗಬಹುದಾದ ಎಲ್ಲಾ ಸೌಲಭ್ಯ ಪಡೆಯುವಲ್ಲಿ ಸಂಘ ಸಹಕಾರ ನೀಡುತ್ತಿದೆ. ವರದಿ ವರ್ಷದಲ್ಲಿ ಸಂಘವು ರೂ.2,03,64,220 ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.17 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಶೀನ ಪೂಜಾರಿ ಹೇಳಿದರು.

ಸೆ.14ರಂದು ನಡೆದ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವರದಿ ವರ್ಷದ ಅಂತ್ಯಕ್ಕೆ ಸಂಘದಲ್ಲಿ ಒಟ್ಟು 15405 ಸದಸ್ಯರಿದ್ದು, ಒಟ್ಟು ರೂ.19376690 ಪಾಲು ಹಣವನ್ನು ಹೊಂದಿದೆ. ವರದಿ ವರ್ಷದ ಅಂತ್ಯಕ್ಕೆ ಸಂಘವು ಕ್ಷೇಮನಿಧಿ ಹಾಗು ಇತರ ನಿಧಿಗಳಲ್ಲಿ ಸಂಚಯಿಸಿದ ನಿಧಿಗಳು ಒಟ್ಟು ಮೊಬಲಗು ರೂ.4,86,24,479.43 ಆಗಿದೆ ಎಂದರು.

ಸಂಘವು ಸದಸ್ಯರು ಹಾಗು ಗ್ರಾಹಕರ ಸಹಕಾರದಿಂದ ವಿವಿಧ ಠೇವಣಿಗಳಿಂದ ವರದಿ ವರ್ಷದಲ್ಲಿ ರೂ.238,05,34,088 ಠೇವಣಿ ಸಂಗ್ರಹಿಸಿ ವರ್ಷದ ಅಂತ್ಯದ ಅಂತ್ಯಕ್ಕೆ ರೂ.85,08,62,561.99 ಠೇವಣಿಯನ್ನು ಹೊಂದಿದೆ ಎಂದರು.

ವರದಿ ವರ್ಷದ ಅಂತ್ಯಕ್ಕೆ ಸಂಘವು ರೂ,8,70,34,169 ಸಾಲ ಪಡೆದು ಸದಸ್ಯರ ವಿವಿಧ ಉದ್ದೇಶಗಳಿಗೆ ವಿತರಿಸಲಾಗಿದೆ. ವರದಿ ಸಾಲಿನಲ್ಲಿ ಸದಸ್ಯರಿಗೆ ರೂ.79.15 ಕೋಟಿಯಷ್ಟು ಸಾಲ ನೀಡಿ, ರೂ.70.72 ಸಾಲ ವಸೂಲಾತಿಯಾಗಿದೆ. ಶೇ.97ರಷ್ಟು ಸಾಲ ವಸೂಲಾತಿಯಾಗಿದ್ದು ಮುಂದಿನ ಸಾಲಿನಲ್ಲಿ ಶೇ.100 ಸಾಲ ವಸೂಲಾತಿ ಗುರಿ ಹೊಂದಲಾಗಿದ್ದು ಸದಸ್ಯರು ಸಹಕಾರ ನೀಡಬೇಕು ಎಂದರು.

ಸಂಘವು ನವೋದಯ ಸ್ವಸಹಾಯ ಗುಂಪು ಯೋಜನೆ ಅನುಷ್ಟಾನಿಸಿದ್ದು, 263 ಸ್ವಸಹಾಯ ಗುಂಪುಗಳಿಂದ ರೂ.85 ಲಕ್ಷ ಠೇವಣಿ ಇದ್ದು, 74 ಸ್ವಸಹಾಯ ಸಂಘಗಳಿಂದ ರೂ.2.48 ಕೋಟಿ ಸಾಲವು ಹೊರಬಾಕಿ ಇದೆ. ನಮ್ಮ ಸಂಘವು ಸಂಘದ ವತಿಯಿಂದ 151 ಅಕ್ಷಯ ಸ್ವಸಹಾಯ ಗುಂಪು ಯೋಜನೆ ಅನುಷ್ಟಾನಿಸಿದೆ. ವರದಿ ವರ್ಷಾಂತ್ಯಕ್ಕೆ 122 ಅಕ್ಷಯ ಸ್ವಸಹಾಯ ಗುಂಪುಗಳಿಂದ ರೂ.4.95 ಕೋಟಿ ಸಾಲವು ಹೊರಬಾಕಿ ಇರುತ್ತದೆ ಎಂದರು.

ವರದಿ ವರ್ಷದ ಅಂತ್ಯಕ್ಕೆ ವಿವಿಧ ಬ್ಯಾಂಕು ಖಾತೆಗಳಲ್ಲಿ ರೂ.2,96,29,392.61 ಇರುತ್ತದೆ. ರೂ.43,24,67,369 ಗಳನ್ನು ವಿವಿಧ ಬ್ಯಾಂಕು ಮತ್ತು ಸಂಘ ಸಂಸ್ಥೆಗಳಲ್ಲಿ ಧನ ವಿನಿಯೋಗ ಮಾಡಲಾಗಿದೆ. ಸಂಘವು ಕಾರ್ಯವ್ಯಾಪ್ತಿಯ ಬಸ್ರೂರು, ಕೋಣಿ, ಕಂದಾವರ, ಆನಗಳ್ಳಿ ಗ್ರಾಮಗಳಲ್ಲಿ ಸ್ವಂತ ಆಸ್ತಿ, ನವೀಕೃತ ಕಚೇರಿ, ಕಟ್ಟಡ ಹಾಗೂ ಗೋದಾಮುಗಳನ್ನು ಹೊಂದಿದ್ದು, ವರ್ಷಾಂತ್ಯಕ್ಕೆ ಸಂಘ ಒಟ್ಟು ರೂ.1,67,26,305.78 ಮೌಲ್ಯದ ಸ್ಥಿರ-ಚರಾಸ್ತಿಗಳನ್ನು ಹೊಂದಿದೆ ಎಂದರು.

ಸಂಘವು ಸದಸ್ಯರಿಗೆ ಹಾಗೂ ಗ್ರಾಹಕರಿಗೆ ನಿಯಂತ್ರಿತ ಪಡಿತರ ಸಾಮಗ್ರಿ ಪೂರೈಸುತ್ತಿದ್ದು ವರದಿ ಸಾಲಿನಲ್ಲಿ ರೂ.73,318.00 ರಷ್ಟು ಪಡಿತರ ದಾಸ್ತಾನು ಹೊಂದಿದ್ದು, ರೂ.11,35,881 ಲಾಭ ಗಳಿಸಿದೆ. ಸಂಘದ ಕಾರ್ಯಕ್ಷೇತ್ರದಲ್ಲಿ ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ರೈತಕೂಟ ಬಸ್ರೂರು ಕಾರ್ಯನಿರ್ವಹಿಸುತ್ತಿದೆ ಎಂದರು.

ಸಭೆಯಲ್ಲಿ ನಿವೃತ್ತ ಯೋಧರಾದ ದೀಪಕ್ ಕುಮಾರ್ ಬಸ್ರೂರು, ಸಂಘದಲ್ಲಿ ಆಂತರಿಕ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಅಣ್ಣಪ್ಪ ಬಿಲ್ಲವ, 24 ಗಂಟೆಗಳ ಕಾಲ ಕೊಳಲು ನುಡಿಸಿ, ಗಿನ್ನಿಸ್ ದಾಖಲೆ ಮಾಡಿದ ವರ್ಷಾ ಆಚಾರ್ಯ ಬಸ್ರೂರು ಇವರನ್ನು ಸನ್ಮಾನಿಸಲಾಯಿತು.

ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದ ಸದಸ್ಯರಿಗೆ ಆಕರ್ಷಕ ಉಡುಗೊರೆ ನೀಡಲಾಯಿತು. ಸಂಘದ ವ್ಯಾಪ್ತಿಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸಂಜೀವ ಪೂಜಾರಿ, ನಿರ್ದೇಶಕರಾದ ಗೋಪಾಲ ಶೆಟ್ಟಿಗಾರ್, ಕೆ.ಮಹಾಲಿಂಗ, ಕೆ.ವಿಕಾಸ ಹೆಗ್ಡೆ, ಕೆ.ಕೃಷ್ಣ ಪೂಜಾರಿ, ರಾಮ್ ಕಿಶನ್ ಹೆಗ್ಡೆ, ನಟರಾಜ್ ಬಿ.ವಿ.ಅಶೋಕ ಪೂಜಾರಿ, ಶ್ರೀಮತಿ ಅನುಪಮಾ ಶೆಟ್ಟಿ, ಶ್ರೀಮತಿ ಸವಿತಾ ಪೂಜಾರಿ, ವೀರ ಉಪಸ್ಥಿತರಿದ್ದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಬಿತಾ ವಾರ್ಷಿಕ ವರದಿ ಮಂಡಿಸಿ, ಸಾಧನೆಗೆ ಸಹಕಾರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ನಿರ್ದೇಶಕ ಕೆ.ವಿಕಾಸ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಖಾಧಿಕಾರಿಗಳಾದ ಸರೋಜಿನಿ ಕಂದಾವರ, ಪ್ರವೀಣ್ ಕುಮಾರ್ ಶೆಟ್ಟಿ ಕೋಣಿ, ಸುಧಾ ಪಿ. ಶೆಟ್ಟಿ ಆನಗಳ್ಳಿ ಶಾಖೆಯಲ್ಲಿ ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿಸಿದವರ ಪಟ್ಟಿ ವಾಚಿಸಿದರು. ಸಂಘದ ಅಸಿಸ್ಟೆಂಟ್ ಮೆನೇಜರ್ ಗೌತಮ್ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಅಶೋಕ ಪೂಜಾರಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!