spot_img
Wednesday, April 1, 2026
spot_img

ಕೊಕ್ಕರ್ಣೆ: ಕೆಲಸಕ್ಕೆ ಹೊರಟಿದ್ದ ಯುವತಿಗೆ ಚೂರಿಯಿಂದ ಇರಿದು ಯುವಕ ಪರಾರಿ

ಬ್ರಹ್ಮಾವರ: ಬ್ರಹ್ಮಾವರ ಠಾಣಾ ಸರಹದ್ದಿನ ಪೆಜಮಂಗೂರು ಗ್ರಾಮದ ಕೊಕ್ಕರ್ಣೆಯ ಚಗುರಿಬೆಟ್ಟು ಕೆಲಸಕ್ಕೆ ಹೊರಟಿದ್ದ ಯುವತಿಗೆ ಸಂಬಂಧಿ ಯುವಕ ದಾರಿಯಲ್ಲಿ ಅಡ್ಡಗಟ್ಟಿ ಚೂರಿಯಿಂದ ಇರಿದು ಮಾರಣಾಂತಿಕ ಹಲ್ಲೆಗೈದು ಪರಾರಿಯಾದ ಘಟನೆ ಇಂದು ಬೆಳಿಗ್ಗೆ (ಸೆ.12) ನಡೆದಿದೆ.

ರಕ್ಷಿತಾ (23ವ) ಎಂಬ ಯುವತಿಯನ್ನು ಅದೇ ಊರಿನ ನಿವಾಸಿ ಹಾಗೂ ಆಕೆಯ ದೂರದ ಸಂಬಂಧಿಯಾದ ಆರೋಪಿತ ಕಾರ್ತಿಕ್ ರಕ್ಷಿತಾಳನ್ನು ಕೊಲೆ ಮಾಡುವ ಉದ್ದೇಶದಿಂದ ಸೆ. 12ರ ಬೆಳಿಗ್ಗೆ 8:45 ಗಂಟೆಗೆ ಪೆಜಮಂಗೂರು ಗ್ರಾಮದ ಪುತ್ತನಕಟ್ಟೆ ಬಳಿ ಇರುವ ಸಾಸ್ತಾವು ರಸ್ತೆಯಲ್ಲಿ ಮನೆಯಿಂದ ರಕ್ಷಿತಾಳು ಕೆಲಸಕ್ಕೆಂದು ತನ್ನ ತಂಗಿ ಶ್ರಾವಣಿಯ ಜೊತೆ ನಡೆದುಕೊಂಡು ಬರುತ್ತಿದ್ದಾಗ ಮೋಟಾರ್ ಸೈಕಲಿನಲ್ಲಿ ಬಂದು ಚೂರಿಯಿಂದ ರಕ್ಷಿತಾಳ ಹೊಟ್ಟೆಗೆ ಇರಿದು, ಕುತ್ತಿಗೆಗೆ ಕೊಯ್ದು, ಹಾಗೂ ರಕ್ಷಿತಾಳ ತಂಗಿ ಶ್ರಾವಣಿಗೆ ಹೊಡೆದು, ಈ ಸ್ಥಳದಿಂದ ಆಕೆಗೆ ಹೋಗುವಂತೆ, ಹೋಗದೇ ಇದ್ದಲ್ಲಿ ಅವಳನ್ನು ಸಹ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ನಂತರ ತನ್ನ ಮೋಟಾರ್ ಸೈಕಲ್ ಅನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ.

ರಕ್ಷಿತಾಳು ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡಿದ್ದು ಅವಳನ್ನು ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!