spot_img
Thursday, April 2, 2026
spot_img

ಕೊಕ್ಕರ್ಣೆ: ಮದುವೆಗೆ ನಿರಾಕರಣೆ ಯುವತಿಗೆ ಚೂರಿಯಿಂದ ಇರಿದು, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ

ಬ್ರಹ್ಮಾವರ: ಬ್ರಹ್ಮಾವರ ಠಾಣಾ ವ್ಯಾಪ್ತಿಯ ಪೆಜಮಂಗೂರು ಗ್ರಾಮದ ಕೊಕ್ಕರ್ಣೆಯ ಚಗುರಿಬೆಟ್ಟು ಕೆಲಸಕ್ಕೆ ಹೊರಟಿದ್ದ ಯುವತಿಗೆ ಸಂಬಂಧಿ ಯುವಕ ದಾರಿಯಲ್ಲಿ ಅಡ್ಡಗಟ್ಟಿ ಚೂರಿಯಿಂದ ಇರಿದು ತಾನೂ ಕೂಡಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ (ಸೆ.೧೨) ನಡೆದಿದೆ.

ಉಡುಪಿಯಲ್ಲಿ ಸರ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರಕ್ಷಿತಾ (೨೩) ಳನ್ನು ಅದೇ ಊರಿನ ನಿವಾಸಿ ಹಾಗೂ ಆಕೆಯ ದೂರದ ಸಂಬಂಧಿಯಾದ ಆರೋಪಿತ ಕಾರ್ತಿಕ್ (೨೬ವ) ರಕ್ಷಿತಾಳನ್ನು ಕೊಲೆ ಮಾಡುವ ಉದ್ದೇಶದಿಂದ ಸೆ. ೧೨ರ ಬೆಳಿಗ್ಗೆ ೦೮:೪೫ ಗಂಟೆಗೆ ಪೆಜಮಂಗೂರು ಗ್ರಾಮದ ಪುತ್ತನಕಟ್ಟೆ ಬಳಿ ಇರುವ ಸಾಸ್ತಾವು ರಸ್ತೆಯಲ್ಲಿ ಮನೆಯಿಂದ ರಕ್ಷಿತಾಳು ಕೆಲಸಕ್ಕೆಂದು ತನ್ನ ತಂಗಿ ಶ್ರಾವಣಿಯ ಜೊತೆ ನಡೆದುಕೊಂಡು ಬರುತ್ತಿದ್ದಾಗ ಮೋಟಾರ್ ಸೈಕಲಿನಲ್ಲಿ ಬಂದು ಚೂರಿಯಿಂದ ರಕ್ಷಿತಾಳ ಹೊಟ್ಟೆಗೆ ಇರಿದು, ಕುತ್ತಿಗೆಗೆ ಕೊಯ್ದು, ಹಾಗೂ ರಕ್ಷಿತಾಳ ತಂಗಿ ಶ್ರಾವಣಿಗೆ ಹೊಡೆದು, ಈ ಸ್ಥಳದಿಂದ ಆಕೆಗೆ ಹೋಗುವಂತೆ, ಹೋಗದೇ ಇದ್ದಲ್ಲಿ ಅವಳನ್ನು ಸಹ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ನಂತರ ತನ್ನ ಮೋಟಾರ್ ಸೈಕಲ್ ಅನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ.

ರಕ್ಷಿತಾ ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡಿದ್ದು ಅವಳನ್ನು ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಣಿಪಾಲ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿರಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಸಂಜೆ ವೇಳೆ ಅಸುನೀಗಿದಳು.
ಇತ್ತ ಚೂರಿಯಿಂದ ಇರಿದು ಹಾಡಿಯ ಮೂಲಕ ಓಡಿ ಹೋಗಿದ್ದ ಹಂತಕ ಕಾರ್ತಿಕ್ ರಕ್ಷಿತಾಳ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾರ್ತಿಕ ರಕ್ಷಿತಾಳನ್ನು ಪ್ರೇಮಿಸುತ್ತಿದ್ದ ಎನ್ನಲಾಗಿದೆ. ಕಾರ್ತಿಕಗೆ ಸರಿಯಾದ ಉದ್ಯೋಗ ಇರದ ಕಾರಣ ಇವರ ಮದುವೆಗೆ ಮನೆಯಲ್ಲಿ ಸಮ್ಮತಿ ಇರಲಿಲ್ಲ. ಹದಿನೈದು ದಿನಗಳ ಹಿಂದೆ ಈ ಬಗ್ಗೆ ಮಾತುಕತೆ ನಡೆದು ನಾನು ಇನ್ನೂ ರಕ್ಷಿತಾ ವಿಚಾರಕ್ಕೆ ಬರುವುದಿಲ್ಲ ಎಂದು ಪ್ರಮಾಣ ಮಾಡಿದ್ದ ಎನ್ನಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!