spot_img
Friday, March 13, 2026
spot_img

ಪಡುಕೋಣೆ ಸಂತ ಅಂತೋನಿ ಚರ್ಚ್: ಸೌಪರ್ಣಿಕ ಮಹಿಳಾ ಸಂಘದಿಂದ ಮಹಿಳೆಯರ ದಿನಾಚರಣೆ

ಕುಂದಾಪುರ: ಪಡುಕೋಣೆ ಸಂತ ಅಂತೋನಿ ಚರ್ಚಿನ ಸೌಪರ್ಣಿಕ ಮಹಿಳಾ ಸಂಘದಿಂದ ಇತ್ತೀಚೆಗೆ ಸೌಪರ್ಣಿಕ ನದಿಯ ದಂಡೆಯ ಮೇಲೆ ಮಹಿಳೆಯರ ದಿನಾಚರಣೆಯನ್ನು ಆಚರಿಸಲಾಯಿತು.

ವಂದನೀಯ ಫಾದರ್ ಪ್ರಾನ್ಸಿಸ್ ಕರ್ನೆಲಿಯೊರವರು ಚರ್ಚಿನ ಭಕ್ತಾಧಿಗಳ ಜೊತೆಗೂಡಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ಬಳಿಕ ಚರ್ಚಿನ ಸಭಾಂಗಣದಲ್ಲಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸ್ವಾಗತ ನೃತ್ಯ, ವಿವಿಧ ವಿನೋದಾವಳಿಗಳಾದ ಇತರ ನೃತ್ಯಗಳು, ಹಾಡುಗಳು ಪ್ರದರ್ಶನ ನೀಡಿದರು. ಹೆಚ್ಚಿನ ಮಹಿಳೆಯರು ತುಂಬಾ ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂ. ಫಾ. ಪ್ರಾನ್ಸಿಸ್ ಕರ್ನೆಲಿಯೊತಮ್ಮ ವಹಿಸಿ ಮಾತನಾಡಿದರು. ಅತಿಥಿಗಳಾದ ಪ್ರಭು ಕೆನಡಿ ಪಿರೇರಾ, ಚರ್ಚಿನ ಅಯೋಗಾದ ಸಂಚಾಲಕ ವಿನ್ಸೆಂಟ್ ಡಿ’ಸೋಜ, ಸಿ. ಲೂಸಿ, ಕುಂದಾಪುರ ಭಾವನ ಮಹಿಳಾ ಒಕ್ಕೂಟದ ಅಧ್ಯಕ್ಷೆಯಾದ ಸಿಂತಿಯಾ ರೊಡ್ರಿಗಸ್ ಹಾಗೂ ವೈ.ಸಿ.ಎಂ ಅಧ್ಯಕ್ಷೆಯಾದ ಕುಮಾರಿ ಹೊಲೋರಾ ರೆಬೆಲ್ಲೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಡಾ.ಸೋನಿಯಾ ಡಿಕೋಸ್ತಾ ಆಗಮಿಸಿದ್ದರು. ಕವಿತಾ ಸುವಾರಿಸ್ ಪರಿಚಯಿಸಿದರು . ಸ್ತ್ರೀ ಸಂಘಟನೆ ಅಧ್ಯಕ್ಷೆ ಕವಿತಾ ಡಿಸುವಾರಿಸ್ ಸ್ವಾಗತಿಸಿದರು. ಪ್ಲೇವಿ ಲುವಿಸ್ ವಂದಿಸಿದರು, ಶೈಲಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!