spot_img
Friday, March 13, 2026
spot_img

ಕುಂದಾಪುರದಲ್ಲಿ ಸಂಭ್ರಮದ ಮೊಂತಿ ಫೆಸ್ತ್

ಕುಂದಾಪುರ: ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯಲ್ಲಿ ಮಾತೆ ಮೇರಿಯ  ಹುಟ್ಟು ಹಬ್ಬವನ್ನು “ಮೊಂತಿ ಫೆಸ್ತ್” ಬಹಳ ಶ್ರದಾ ಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು.   ಉಡುಪಿ ಧರ್ಮಪ್ರಾಂತ್ಯದ ಉಡುಪಿ ಧರ್ಮ ಪ್ರಾಂತ್ಯದ ಯುವ ಸಂಘಟನೆಗಳ ನಿರ್ದೇಶಕರಾದ ವಂ। ಧರ್ಮಗುರು ಸ್ಟೀವನ್ ಫೆರ್ನಾಂಡಿಸ್ ಅವರ ನೇತ್ರತ್ವದಲ್ಲಿ ಹೊಸ ಬೆಳೆ ಭತ್ತದ ತೇನೆಗಳನ್ನು ಮೂಲಕ ಹಬ್ಬಕ್ಕೆ ಚಾಲನೆಯನ್ನು ನೀಡಲಾಯಿತು. ಬಳಿಕ ಅಲಂಕ್ರತ ಬಾಲ ಮೇರಿ ಮಾತೆಯ ಪುಥ್ಥಳಿಗೆ ಚಿಕ್ಕ ಮಕ್ಕಳು ಪುಷ್ಪಗಳನ್ನು ಆರ್ಚನೆ ಮಾಡಿದರು. ದಿವ್ಯ  ಬಲಿದಾನವನ್ನು ಅರ್ಪಿಸಲಾಯಿತು.

ವಂ। ಧರ್ಮಗುರು ಸ್ಟೀವನ್ ಫೆರ್ನಾಂಡಿಸ್,ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಮತ್ತು ಕುಂದಾಪುರದವರೇ ಆದ ವಂ।ನೊವೆಲ್ ಒಲಿವೆರಾರ ಜೊತೆ, ದಿವ್ಯ ಬಲಿದಾನ ಅರ್ಪಿಸಿ, ‘ಇಂದು ಮೇರಿ ಮಾತೆಯ ಜನ್ಮ ದಿನದ ಹಬ್ಬ ಆಚರಿಸುತ್ತಿದ್ದೇವೆ, ಕಾರಣ ಮೇರಿ ಮಾತೆ ಯೇಸು ಕ್ರಿಸ್ತರ ತಾಯಿ ಎಂದು, ಆದರೆ ಅದು ಕಾರಣ ಮಾತ್ರ ಅಲ್ಲ, ಮೇರಿ ಮಾತೆ ನಮಗೆಲ್ಲರಿಗೂ ಆದರ್ಶ ಮಾತೆ. ಅವಳು ದೇವರು ಹೇಳಿದಂತೆ ಕೇಳಿದ ನಿಷ್ಠಾವಂತ ಮಾತೆ. ಕುಟುಂಬ ಕಟ್ಟಿದ ಮಾತೆ. ಕುಟುಂಬ ಎಂಬುದು ದೇವರ  ವೀಶೆಷ ವರ ವರ, ಯಾಕೆಂದರೆ ನಮಗೆ ಬೇಕಾದವರಲ್ಲಿ ನಮಗೆ ಹುಟ್ಟಲು ಅವಕಾಶವಿಲ್ಲ,  ದೇವರೆ ನಮ್ಮನ್ನು ಇಂತಹ ಕುಟುಂಬದಲ್ಲಿ ಹುಟ್ಟಿಸುತ್ತಾರೆ, ಅದಕ್ಕಾಗಿ ನಾವು ನಾವು ನಮ್ಮ ಕುಟುಂಬಕ್ಕೆ ಮಹಳ ಮಹತ್ವ ನೀಡಬೇಕು. ಕುಟುಂಬಕ್ಕಾಗಿ ಮೇರಿ ಮಾತೆಯಲ್ಲಿ ವಿಶಿಷ್ಟ ಸ್ಥಾನವಿದೆ. ಅವರು ಪವಿತ್ರ ಕುಟುಂಬವನ್ನು ಕಟ್ಟಿದ್ದರು. ಆದರಿಂದ ನಾವೆಲ್ಲ ಈ ಹಬ್ಬವನ್ನು ಕುಟುಂಬದ ಹಬ್ಬವಾನ್ನಾಗಿ ಆಚರಿಸುತಿದ್ದೇವೆ. ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ಪ್ರಾರ್ಥಿಸಬೇಕು, ಒಟ್ಟಾಗಿ ಭೋಜನ ಮಾಡಬೇಕು. ಪ್ರಕ್ರತಿಯನ್ನು ದೇವರು ನಮಗೆ ನೀಡಿದ್ದಾನೆ, ಆದರೆ ಅದನ್ನು ನಾಶ ಮಾಡಬಾರದು, ಬೆಳೆಸಿ ಸಂರಕ್ಷಸಿಸ ಬೇಕು’    ಎಂದು ಅವರು ಸಂದೇಶ ನೀಡಿದರು.

ಚರ್ಚಿನ ಧರ್ಮಗುರು  ಬಲಿದಾನದ ಬಳಿಕ ಅವರು ಎಲ್ಲರಿಗೂ ಶುಭಾಶಯಗಳನ್ನು ಕೋರಿ ಎಲ್ಲಾ ಕುಟುಂಬದವರಿಗೆ ಹೊಸ ತೆನೆಗಳನ್ನು ಹಂಚಲಾಯಿತು. ಮಕ್ಕಳಿಗೆ ಕಬ್ಬುಗಳನ್ನು ಹಂಚಲಾಯಿತು. ಹಬ್ಬದ ಬಲಿದಾನದಲ್ಲಿ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪ್ರತಿನಿಧಿಗಳು, ಧರ್ಮಭಗಿನಿಯರು ಮತ್ತು ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಜರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!