spot_img
Tuesday, March 31, 2026
spot_img

ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 34ನೇ ಮಹಾಸಭೆ : ರೂ. 4.13 ಕೋಟಿ ಲಾಭ | ಶೇ.22% ಡಿವಿಡೆಂಡ್ ಘೋಷಣೆ

ಕುಂದಾಪುರ : ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ತನ್ನ 34ನೇ ವರ್ಷದ ಯಶಸ್ವೀ ಪಯಣವನ್ನು ಪೂರೈಸುತ್ತಿರುವ ಸಮಯದಲ್ಲಿ ಸಂಘವು ರೂ.199 ಕೋಟಿಗೂ ಮೀರಿದ ಶ್ರೇಷ್ಠ ಸಾಧನೆಗಳತ್ತ ಪಯಣ ಮಾಡಿದೆ. ಈ ಅವಧಿಯಲ್ಲಿ ಒಟ್ಟು ವ್ಯವಹಾರ ರೂ.1000 ಕೋಟಿಯನ್ನು ಮೀರಿದ್ದು ಈ ಆರ್ಥಿಕ ವರ್ಷದಲ್ಲಿ ರೂ. 4.13 ಕೋಟಿ ಲಾಭ ಗಳಿಸಿರುವುದು ಎಲ್ಲರ ಒಟ್ಟುಗೂಡಿದ ಶ್ರಮದ ಫಲವಾಗಿದೆ ಎಂದು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿ’ ಅಲ್ಮೇಡಾ ಹೇಳಿದರು.

ಕೋಟೇಶ್ವರದ ಸಹನಾ ಕನ್‍ವೆನ್ಶನ್ ಸೆಂಟರ್ ಸಭಾಂಗಣದಲ್ಲಿ ಆ. 24 ರಂದು ನಡೆದ ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 34 ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದ ಸದಸ್ಯರಿಗೆ ಶೇ. 22 % ಡಿವಿಡೆಂಡ್ ಘೋಷಣೆ ಮಾಡಿದರು.

ಈ ಸಂಸ್ಥೆಗೆ ಕೇವಲ ಲಾಭವನ್ನು ಗಳಿಸುವ ಉದ್ದೇಶ ಆಗಿರದೆ ಅಸಕ್ತರಿಗೆ ಸಹಾಯ, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವಂತಹ ಸಾಮಾಜಿಕ ಕಳಕಳಿಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಈ ಸೊಸೈಟಿಯಿಂದ ಉನ್ನತ ಶಿಕ್ಷಣಕ್ಕೆ, ಉದ್ಯೋಗ ಮಾಡುವರಿಗೆ, ವಾಹನಗಳನ್ನು ಖರೀದಿಸುವರಿಗೆ, ಮನೆಕಟ್ಟಲು ಇನ್ನಿತರ ಯೋಜನೆಗಳಿಗೆ ಸಾಲ, ನೀಡುತ್ತಿದ್ದೇವೆ, ಇದರಿಂದ ಹಲವರ ಅಭಿವೃದ್ದಿಗೆ ಕಾರಣವಾಗಿದೆ. ಸೊಸೈಟಿ ಕೂಡ ಅಭಿವೃದ್ದಿಯತ್ತ ದಾಪು ಕಾಲು ಹಾಕುತ್ತ ಇದೆ. ಇದಕ್ಕೆಲ್ಲ ಕಾರಣ, ಸದಸ್ಯರು, ಸಿಬಂದಿ ವರ್ಗ ಮತ್ತು ನಿರ್ದೇಶಕರು ಕಾರಣಿಕರ್ತರಾಗಿದ್ದಾರೆ. ಎಂದು ಹೇಳಿದ ಅವರು ಸೊಸೈಟಿಯು ಕುಂದಾಪುರದ ಹೃದಯ ಭಾಗದಲ್ಲಿ 44 ಸೆಂಟ್ಸ್ ಜಾಗವನ್ನು ಖರೀದಿಸುತ್ತದೆ ಎಂದರು.

`ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಸದಸ್ಯರ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಶಾಖೆಗಳನ್ನು ತೆರೆದು ಹತ್ತಿರದಲ್ಲಿ ಉತ್ತಮ ಸೇವೆ ನೀಡುತ್ತಿದೆ. ಶಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ, ಸದಸ್ಯರ ಸ್ವಾವಲಂಬನೆಗೆ ಸಾಲ ಸೌಲಭ್ಯಗಳು, ಮಾರ್ಗದರ್ಶವನ್ನು ನೀಡುತ್ತಿದೆ ಎಂದರು.

ಸೊಸೈಟಿಯ ಆಧ್ಯಾತ್ಮಿಕ ನಿರ್ದೇಶಕರಾದ ಕುಂದಾಪುರ ರೋಜರಿ ಚರ್ಚಿನ ಧರ್ಮಗುರು ಅ|ವಂ|ಪೌಲ್ ರೇಗೊ ಅವರು ಆಶೀರ್ವಚನ ಮಾಡಿ ವಿದ್ಯಾರ್ಥಿ ವೇತನ ಪಡೆದ ಸೊಸೈಟಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು.

ಸೊಸೈಟಿಯ ನಿರ್ದೇಶಕರಾದ ನಿವೃತ್ತ ಪೊಲೀಸ್ ಅಧಿಕಾರಿ ವಲೈಂಟನ್ ಡಿಸೋಜಾ `ಆನ್ ಲೈನ್ ವಂಚನೆ ವಿಷಯದಲ್ಲಿ ಜಾಗರೂಕರಾಗಿರಬೇಕು, ಸುಳ್ಳು ಸುದ್ದಿ ನಂಬಬಾರದು, ಅಪಪ್ರಚಾರ ಮಾಡಬಾರದು ಎಂದು ತಿಳಿಸಿದರು.

ಎಸ್.ಎಸ್.ಎಲ್.ಸಿ., ದ್ವೀತಿಯ ಪಿಯುಸಿ, ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್, ಮೆಡಿಕಲ್ ಮಾಡಿ, 50% ಅಂಕಗಳನ್ನು ಪಡೆದ ಸದಸ್ಯರ ಮಕ್ಕಳಿಗೆ , ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ವಿದ್ಯಾರ್ಥಿ ವೇತನ ಪಡೆದವರ ಹೆಸರುಗಳನ್ನು ನಿರ್ದೇಶಕಿ ಶಾಂತಿ ಆರ್.ಕರ್ವಾಲ್ಲೊ ವಾಚಿಸಿದರು.

ವೇದಿಕೆಯಲ್ಲಿ, ವಿನೋದ್ ಕ್ರಾಸ್ಟೊ, ಬ್ಯಾಪ್ಟಿಸ್ಟ್ ಡಾಯಾಸ್, ಓಜಲಿನ್ ರೆಬೆಲ್ಲೊ, ಡಯಾನಾ ಡಿ ಅಲ್ಮೇಡಾ, ಶಾಂತಿ ಡಾಯಾಸ್, ವಿಲ್ಸನ್ ಡಿಸೋಜಾ, ಸಂತೋಷ್ ಓಝೊವಲ್ಡ್ ಡಿ ಸಿಲ್ವಾ, ಟೆರೆನ್ಸ್ ಸುವಾರಿಸ್, ಡೆರಿಕ್ ಡಿಸೋಜಾ, ರೋವನ್ ಡಿಕೋಸ್ತಾ, ಲಿಪ್ಡನ್ ಒಲಿವೇರಾ ಉಪಸ್ಥಿತರಿದ್ದರು.

ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೇಬಲ್ ಡಿ ಆಲ್ಮೇಡಾ ವರದಿ ಮಂಡಿಸಿದರು. ಸದಸ್ಯರ ಪ್ರಶ್ನೆಗಳಿಗೆ ಅಧ್ಯಕ್ಷರು ಉತ್ತರ ನೀಡಿದರು. ನಿರ್ದೇಶಕ ಫಿಲಿಪ್ ಡಿಕೋಸ್ತಾ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಕಿರಣ್ ಲೋಬೊ ವಂದಿಸಿದರು. ನಿರ್ದೇಶಕ ಮೈಕಲ್ ಪಿಂಟೊ, ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!