spot_img
Wednesday, March 25, 2026
spot_img

ಬೈಂದೂರು: ಶುಭಂ ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಕರಣ ಮಳಿಗೆ ಶುಭಾರಂಭ

 

ಬೈಂದೂರು ಕಾರ್ಪೋರೇಷನ್ ಬ್ಯಾಂಕ್ ಹತ್ತಿರ ದೊಂಬೆ ಕಾಂಪ್ಲೆಕ್ಸ್‌ನಲ್ಲಿ ಶುಭಂ ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಕರಣ ವಸ್ತುಗಳ ನೂತನ ಮಳಿಗೆ ಸರ್ವಮಂಗಳ ಎಂಟರ್‌ಪ್ರೈಸಸ್‌ನ ಪ್ರಾಂಚೈಸಿಯೊಂದಿಗೆ ಅ.30ರಂದು ಶುಭಾರಂಭಗೊಂಡಿತು.

ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ನೂತನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಬೈಂದೂರು ತಾಲೂಕು ಅಭಿವೃದ್ದಿ ಪಥದೆಡೆಗೆ ಸಾಗುತ್ತಿದೆ. ಇಂಥಹ ಮಳಿಗೆಗಳ ಅವಶ್ಯಕತೆ ಬೆಳೆಯುವ ನಗರಗಳಿಗೆ ಅಗತ್ಯವಿದೆ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಜನರಿಗೆ ಗುಣಮಟ್ಟದ ಗ್ರಹೋಪಕರಣ ವಸ್ತುಗಳನ್ನು ತಲುಪಿಸುವಲ್ಲಿ ಇಂಥಹ ಸಂಸ್ಥೆಗಳ ಅವಶ್ಯಕತೆ ಇರುತ್ತದೆ. ಈ ಮಳಿಗೆ ಇನ್ನಷ್ಟು ಶಾಖೆಗಳನ್ನು ವಿಸ್ತರಿಸುವ ಮೂಲಕ ಯಶಸ್ಸು ಕಾಣಲಿ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗ್ಡೆ, ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ, ಗ್ರಾ.ಪಂ. ಯಡ್ತರೆ ಅಧ್ಯಕ್ಷೆ ಮೂಕಾಂಬು ದೇವಾಡಿಗ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಧನಂಜಯ ಕುಮಾರ, ಕಟ್ಟಡ ಮಾಲಿಕರಾದ ರವೀಂದ್ರ ದೊಂಬೆ, ಸರ್ವ ಮಂಗಳ ಜ್ಯುವೆಲ್ಲರ್‍ಸ್‌ನ ಕೆ.ದಯಾನಂದ ಶೇಟ್ ಮತ್ತು ಮಕ್ಕಳು ಉಪಸ್ಥಿತರಿದ್ದರು.

ಶುಭಂ ಸಂಸ್ಥೆಯ ರಿಜಿನಲ್ ಮ್ಯಾನೇಜರ್ ಶಿವಕುಮಾರ ಎಸ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, 25 ವರ್ಷಗಳ ಸಂಭ್ರಮದಲ್ಲಿರುವ ಸಂಸ್ಥೆ 107 ಶಾಖೆಗಳನ್ನು ಹೊಂದಿದೆ. ಅಲ್ಲದೆ ಮಾಸಿಕ ಮುಂಗಡ ಕಂತುಗಳ ಶುಭಂ ಖರೀದಿ ಸ್ಕೀಮ್ (S.P.S) ಲಭ್ಯವಿದ್ದು ಗ್ರಾಹಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಕೈಗೆಟುಕುವ ದರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತಾ ಬಂದಿರುವ ಸಂಸ್ಥೆ ಗ್ರಾಹಕರ ವಿಶ್ವಾಸ ಗಳಿಸಿದೆ. ಆಕರ್ಷಕ ವಿನಿಮಯ ಕೊಡುಗೆಗಳು ಹಾಗೂ ಇನ್ನಿತರ ರೀತಿಯ ಕೊಡುಗೆಗಳು ಇದ್ದು, ಖರೀದಿಸಿದ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!