spot_img
Tuesday, March 24, 2026
spot_img

ನೆಂಪು: ಟೇಬಲ್ ಟೆನಿಸ್ ಒಳಾಂಗಣ ಕೋರ್ಟ್ ಉದ್ಘಾಟನೆ, ಯಕ್ಷಗಾನ ತರಬೇತಿ ಸಮಾರೋಪ

 

ಪಲ್ಲವಿ ವಿ.ರಾವ್ ಟೇಬಲ್ ಟೆನಿಸ್ ಒಳಾಂಗಣ ಕೋರ್ಟ್‍ನ್ನು ಉದ್ಘಾಟಿಸಿದರು.
ಪಲ್ಲವಿ ವಿ.ರಾವ್ ಟೇಬಲ್ ಟೆನಿಸ್ ಒಳಾಂಗಣ ಕೋರ್ಟ್‍ನ್ನು ಉದ್ಘಾಟಿಸಿದರು.

ತಾಳಮದ್ದಳೆ ಅರ್ಥದಾರಿ ಸುನಿಲ್ ಹೊಲಾಡು ಅವರನ್ನು ಸನ್ಮಾನಿಸಲಾಯಿತು.
ತಾಳಮದ್ದಳೆ ಅರ್ಥದಾರಿ ಸುನಿಲ್ ಹೊಲಾಡು ಅವರನ್ನು ಸನ್ಮಾನಿಸಲಾಯಿತು.
ಕ್ರೀಡಾಪಟು ಪಲ್ಲವಿ ವಿ.ರಾವ್ ಅವರನ್ನು ಸನ್ಮಾನಿಸಲಾಯಿತು.
ಕ್ರೀಡಾಪಟು ಪಲ್ಲವಿ ವಿ.ರಾವ್ ಅವರನ್ನು ಸನ್ಮಾನಿಸಲಾಯಿತು.

ಕುಂದಾಪುರ: ನೆಂಪು-ವಂಡ್ಸೆಯ ಶ್ರೀ ಸಾಯಿ ಕಲ್ಚರಲ್ ಸ್ಪೋಟ್ಸ್  ಕ್ಲಬ್‍ನಲ್ಲಿ ನೂತನ ಟೇಬಲ್ ಟೆನಿಸ್ ಒಳಾಂಗಣ ಕೋರ್ಟ್‍ನ ಉದ್ಘಾಟನೆ ಹಾಗೂ ಹಂಗಳೂರು ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನ.1 ಕನ್ನಡ ರಾಜ್ಯೋತ್ಸವದಂದು ನಡೆಯಿತು. ರಾಷ್ಟ್ರೀಯ ಟೇಬಲ್ ಟೆನಿಸ್ ಕ್ರೀಡಾಪಟು ಪಲ್ಲವಿ ವಿ.ರಾವ್ ಟೇಬಲ್ ಟೆನಿಸ್ ಒಳಾಂಗಣ ಕೋರ್ಟ್‍ನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಾಯಿ ಕಲ್ಚರಲ್ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷರಾದ ಅಶೋಕ ಶೆಟ್ಟಿ ಜಾಡ್ಕಟ್ಟು ಮಾತನಾಡಿ, ಈಗಾಗಲೇ ಎರಡು ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಕೋರ್ಟು, ಸ್ನೂಕರ್ ಕೋರ್ಟು, ಎರಡು ಕೇರಂ ಕೋರ್ಟುಗಳು ಇದ್ದು ದಿನ ಸುಮಾರು 40-50 ಜನ ಸ್ಥಳೀಯ ಯುವಕರು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈಗ ಟೇಬಲ್ ಟೆನಿಸ್ ಒಳಾಂಗಣ ಕೋರ್ಟ್ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ವತಿಯಿಂದ ಹೊರಾಂಗಣ ಲಾನ್ ಟೆನಿಸ್ ಕೋರ್ಟ್, ವಾಲಿಬಾಲ್ ಕೋರ್ಟ್ ರಚಿಸುವುದರ ಮೂಲಕ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ತರಬೇತಿ ನೀಡಲಾಗುವುದು. ಜೊತೆಗೆ ಯೋಗ ತರಗತಿ, ಭರತನಾಟ್ಯ ತರಗತಿಗಳನ್ನು ನಡೆಸಲಾಗುವುದು ಎಂದರು.

ಹಂಗಳೂರು ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ರಮೇಶ್ ಕೆ.ಕುಂದರ್, ಪೆರ್ಡೂರು ಯಕ್ಷಗಾನ ಮೇಳದ ವ್ಯವಸ್ಥಾಪಕ ವೈ.ಕರುಣಾಕರ ಶೆಟ್ಟಿ, ಬ್ರಹ್ಮಾವರ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷರಾದ ಚಂದ್ರಶೇಖರ ಹೆಗ್ಡೆ, ಯಕ್ಷಗಾನ ತರಬೇತುದಾರರಾದ ಅಶ್ವಿನಿ ಕೊಂಡದಕುಳಿ, ಸ್ಥಳೀಯ ಯಕ್ಷಗಾನ ಅರ್ಥದಾರಿ ಸುನಿಲ್ ಹೊಲಾಡು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕ್ರೀಡಾಪಟು ಪಲ್ಲವಿ ವಿ.ರಾವ್, ಯಕ್ಷಗಾನ ಕಲಾವಿದೆ, ಗುರು ಅಶ್ವಿನಿ ಕೊಂಡದಕುಳಿ, ತಾಳಮದ್ದಳೆ ಅರ್ಥದಾರಿ ಸುನಿಲ್ ಹೊಲಾಡು ಅವರನ್ನು ಸನ್ಮಾನಿಸಲಾಯಿತು. ರಮಾನಂದ ಆಚಾರ್ಯ ಪ್ರಾರ್ಥಿಸಿದರು. ಸಂಜೀವ ಪೂಜಾರಿ ವಂಡ್ಸೆ ಸ್ವಾಗತಿಸಿದರು. ಬಾಲಚಂದ್ರ ಶೆಟ್ಟಿ ವಂದಿಸಿದರು. ಶಿಕ್ಷಕ ವಸಂತರಾಜ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಿತು. ಯಕ್ಷಗಾನ ಪ್ರಾರಂಭದಲ್ಲಿ ಶ್ರೀ ಸಾಯಿ ಕಲ್ಚರಲ್ ಸ್ಪೋಟ್ಸ್ ಕ್ಲಬ್‍ನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಪೂರ್ವರಂಗ ಪ್ರಸ್ತುತ ಪಡಿಸಿದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!