spot_img
Monday, March 16, 2026
spot_img

ನಂದ್ರೋಳ್ಳಿಯಲ್ಲಿ ಕಲ್ಲಂಬೋಗಿ ಮರಸಾಗಾಟ: ವಾಹನದ ಮಾಲೀಕತ್ವ ಸಾಬೀತುಪಡಿಸಲು ಸೂಚನೆ

ಉಡುಪಿ: ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ವ್ಯಾಪ್ತಿಯ ಸಿದ್ದಾಪುರ ವನ್ಯಜೀವಿ ವಲಯ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ನಂದ್ರೋಳ್ಳಿ ಎಂಬ ಪ್ರದೇಶದಲ್ಲಿ ಬರುವ ನೂಜಿನಾಣೆ ಮೀಸಲು ಅರಣ್ಯದಿಂದ ಒಂದು ಕಲ್ಲಂಬೋಗಿ ಮರದ ಸೊತ್ತುಗಳನ್ನು ಸಾಗಾಟ ಮಾಡುತ್ತಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಪಿಕ್‌ಅಪ್ ವಾಹನ ಕೆ‌ಎ 20 ಬಿ 2444 ಅನ್ನು ಸರಕಾರದ ಪರ ವಶಪಡಿಸಿಕೊಂಡು 1963 ರ ಕರ್ನಾಟಕ ಅರಣ್ಯ ಕಾಯ್ದೆ ವಿಧಿ-71 ಎ ಪ್ರಕಾರ ಮುಂದಿನ ಕ್ರಮ ಜರುಗಿಸಲು ಪ್ರಾಧಿಕಾರಕ್ಕೆ ಹಾಜರುಪಡಿಸಲಾಗಿರುತ್ತದೆ.

ಪಿಕ್‌ಅಪ್ ವಾಹನದ ಬಗ್ಗೆ ಯಾವುದೇ ಹಕ್ಕು ಭಾದ್ಯತೆಯನ್ನು ರುಜುವಾತುಪಡಿಸುವುದಾದಲ್ಲಿ ಅಂತಹ ವ್ಯಕ್ತಿಗಳು ತಮ್ಮಲ್ಲಿರುವ  ವಾಹನದ ಮಾಲೀಕತ್ವದ ಮೂಲ ದಾಖಲೆಗಳೊಂದಿಗೆ ಪ್ರಕಟಣೆ ಪ್ರಕಟವಾದ 30 ದಿನಗಳ ಒಳಗಾಗಿ ಕುದುರೆಮುಖ ವನ್ಯಜೀವಿ ವಿಭಾಗದ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ರವರ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಮಾಲೀಕತ್ವವನ್ನು ರುಜುವಾತುಪಡಿಸಿಕೊಳ್ಳುವುದರೊಂದಿಗೆ ಅಕ್ರಮ ಸಾಗಾಟದಲ್ಲಿ ಭಾಗಿಯಾದ ಸದ್ರಿ ವಾಹನವನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಬಾರದೇಕೆ ಎಂಬುವುದಕ್ಕೆ ಕಾರಣ ನೀಡಬೇಕು. ನಿಗಧಿತ ಅವಧಿಯೊಳಗೆ ಯಾವುದೇ ಅಹವಾಲು ಸಲ್ಲಿಕೆಯಾಗದಿದ್ದಲ್ಲಿ ಮೇಲಿನ ವಾಹನದ ಮಾಲೀಕತ್ವ ಸಾಬೀತುಪಡಿಸುವ ಯಾವುದೆ ವ್ಯಕ್ತಿ ಇರುವುದಿಲ್ಲ ಎಂದು ಭಾವಿಸಿ, ೧೯೬೩ ನೇ ಕರ್ನಾಟಕ ಅರಣ್ಯ ಕಾಯ್ದೆ ೭೧ (ಎ) ಯಿಂದ (ಎಫ್) ವರೆಗಿನ ವಿಧಿಯಂತೆ ಕ್ರಮ ಜರುಗಿಸಿ, ಸದ್ರಿ ವಾಹನವನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆಜ್ಞೆ ಹೊರಡಿಸಲಾಗುವುದು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!