spot_img
Tuesday, March 17, 2026
spot_img

ನಮ್ಮ ಭೂಮಿ: ಪರಿಸರದ ಮಡಿಲಲ್ಲಿ ಅಂತರಾಷ್ಟ್ರೀಯ ಯೋಗ ದಿನ 2025

ಕುಂದಾಪುರ: ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ತಾಲೂಕು ಆಯುಷ್ ಆಸ್ಪತ್ರೆ ಕುಂದಾಪುರ, ಲಯನ್ಸ್ ಕ್ಲಬ್
ಕುಂದಾಪುರದ ಅಮೃತಧಾರಾದ ಜಂಟಿ ಆಶ್ರಯದಲ್ಲಿ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ರಾಜ್ಯ ಸಂಪನ್ಮೂಲ
ಕೇಂದ್ರ ‘ನಮ್ಮ ಭೂಮಿ’ಯ ಹಸಿರಿನ ತಾಣದಲ್ಲಿ ಹರಿತ ಯೋಗದ ವಿಶಿಷ್ಟ ಆಚರಣೆ ಮಾಡಲಾಯಿತು.

ಭೂಮಿತಾಯಿಯ ಹಸಿರೇ ಉಸಿರು ಎನ್ನುವ ಆಶಯವನ್ನು ಬಿಂಬಿಸುವ ಹಾಡಿನೊಂದಿಗೆ ಬಹುಪಯೋಗಿ ನೇರಳೆ ಗಿಡವನ್ನು
ನೆಡುವುದರ ಮೂಲಕ ಯೋಗಕ್ಕೂ ಪರಿಸರಕ್ಕೂ ಇರವು ಸಂಬಂಧವನ್ನು ಸಾರುತ್ತಾ ಈ ಕಾರ್ಯಕ್ರಮವನ್ನು
ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಆಯುಷ್ ಆಸ್ಪತ್ರೆ ಕುಂದಾಪುರ ವೈದ್ಯಾಧಿಕಾರಿಗಳು, ಕುಂದಾಪುರ
ಲಯನ್ಸ್ ಕ್ಲಬ್ ಅಮೃತಧಾರಾದ ಅಧ್ಯಕ್ಷರು, ನಿಕಟಪೂರ್ವ ಅಧ್ಯಕ್ಷರು, ಸಂಸ್ಥೆಯ ಕಾರ್ಯಕರ್ತರು ಹಾಗೂ ೬೦ ಮಕ್ಕಳು
ಸಕ್ರೀಯವಾಗಿ ಪಾಲ್ಗೊಂಡರು.

ಕುಂದಾಪುರ ತಾಲೂಕು ಆಯುಷ್ ಆಸ್ಪತ್ರೆಯ ಡಾ|| ಕಿರಣ ಅವರು ವಿವಿಧ ಔಷಧೀಯ ಗಿಡಗಳ ಗುಣ ಮತ್ತು ಉಪಯೋಗಗಳನ್ನು
ವಿವರಿಸುತ್ತಾ, ಯೋಗ ಮತ್ತು ಆಯುರ್ವೇದದ ಪರಸ್ಪರ ಪೂರಕ ಸಂಬಂಧದ ಕುರಿತು ಮಾಹಿತಿಯನ್ನು ನೀಡಿದರು. ಕುಂದಾಪುರ
ತಾಲೂಕು ಆಯುಷ್ ಆಸ್ಪತ್ರೆಯ ಡಾ|| ಶಿಲ್ಪ ಅವರು ಆರೋಗ್ಯಪೂರ್ಣ ಬದುಕಿನ ನಿರ್ವಹಣೆಯಲ್ಲಿ ಯೋಗದ ಪಾತ್ರದ ಬಗ್ಗೆ
ವಿವರಿಸುತ್ತಾ, ಆರೋಗ್ಯವಂತರಾಗಿರಲು ಅತ್ಯಂತ ಅವಶ್ಯಕವಾದ ಕೆಲವೊಂದು ಯೋಗ, ಪ್ರಾಣಾಯಾಮಗಳನ್ನು ಪ್ರಾತ್ಯಕ್ಷಿಕೆಯ
ಮೂಲಕ ತೋರಿಸಿ ಹೇಳಿಕೊಟ್ಟರು. ಆಧುನಿಕ ಜೀವನಶೈಲಿಯಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ
ಪ್ರಾಣಾಯಾಮ, ಸೂಕ್ತ ಆಹಾರ ಸೇವನೆ ಮತ್ತು ನಿಯಮಿತ ಯೋಗ ಅಭ್ಯಾಸದ ಅಗತ್ಯತೆಯನ್ನು ಒತ್ತಿಹೇಳಿದರು.

ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ಅಧ್ಯಕ್ಷರಾದ ಡಾ|| ವಾಣಿಶ್ರೀ ಐತಾಳ್ ಅವರು ಮಾತನಾಡುತ್ತಾ ಆಯುರ್ವೇದವು
ಕೇವಲ ಚಿಕಿತ್ಸೆ ನೀಡುವ ಪದ್ಧತಿಯಲ್ಲ; ಇದೊಂದು ಜೀವನ ಕ್ರಮ ಎಂದು ಉಲ್ಲೇಖಿಸಿದರು. ಆರೋಗ್ಯ ಕಾಪಾಡಿಕೊಳ್ಳುವುದು
ರೋಗ ಬಂದ ಮೇಲೆ ಮಾತ್ರವಲ್ಲ, ಬರುವ ಮೊದಲು ಎಚ್ಚರಿಕೆ ವಹಿಸುವುದೂ ಕೂಡ ಅತ್ಯಂತ ಅಗತ್ಯವೆಂದು ತಿಳಿಸಿದರು.

ರೆಡಿಯೋ ಕುಂದಾಪುರದ ನಿರ್ವಹಕರಾದ ಆರ್.ಜೆ. ಜ್ಯೋತಿ ಪರಿಸರದ ಮಹತ್ವವನ್ನು ಹಾಗೂ ಯೋಗದ ಶಕ್ತಿ ಕುರಿತು ವಿಶ್ಲೇಷಿಸಿದರು. ನಮ್ಮ ಸುತ್ತಲಿರುವ ಹಸಿರು ಪರಿಸರ ನಮ್ಮ ದೇಹ ಹಾಗೂ ಮನಸ್ಸಿಗೆ ನೀಡುವ ಆಹ್ಲಾದ ಮತ್ತು ನೆಮ್ಮದಿಯನ್ನು ಅವರು ಸ್ಪಷ್ಟಪಡಿಸಿದರು.
ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ನಿಕಟಪೂರ್ವ ಅಧ್ಯಕ್ಷರಾದ ಆಶಾ ಶಿವರಾಮ ಶೆಟ್ಟಿ ಇವರು
ಯೋಗಾಭ್ಯಾಸದಿಂದ ತಾನು ಹೇಗೆ ತನಗಿರುವ ಅನಾರೋಗ್ಯದಿಂದ ಗುಣಮುಖರಾಗಿ, ಸ್ವಾಸ್ಥ್ಯ ಆರೋಗ್ಯವನ್ನು ಪಡೆದುಕೊಂಡೆ
ಎಂಬ ತಮ್ಮ ಅನುಭವವನ್ನು ಹಂಚಿಕೊಂಡರು. ಜೀವನದಲ್ಲಿ ನಿಯಮಿತ ಯೋಗ, ಆಹಾರ ಕ್ರಮ, ವಾರಕ್ಕೊಂದು ದಿನ ಇಡೀ
ದಿನದ ಉಪವಾಸದ ಕ್ರಮಗಳನ್ನು ಅಳವಡಿಸಿಕೊಂಡರೆ ವೈದ್ಯರ ಅಗತ್ಯವಿರುವುದಿಲ್ಲ ಎಂಬ ತನ್ನ ಸ್ವಾನುಭವ ಎಂಬುದನ್ನು
ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ಪ್ರತಿನಿತ್ಯ ನಮ್ಮ ಭೂಮಿಯಲ್ಲಿ ತಮಗೆ ಮಾಡಿಸುವ ಯೋಗ, ನೀಡುವ ಪೌಷ್ಟಿಕ
ಆಹಾರದಿಂದಾಗಿ ಹೇಗೆ ತಾವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದು ತಮ್ಮ
ದೈನಂದಿನ ಚಟುವಟಿಕೆಗಳನ್ನು ವಿವರಿಸುತ್ತಾ ತಮ್ಮಲ್ಲಾಗಿರುವ ಬದಲಾವಣೆಗಳನ್ನು ಗುರುತಿಸಿ, ಹಂಚಿಕೊಂಡರು.
ಶಿವಾನಂದ ಶೆಟ್ಟಿ ಸಂಸ್ಥೆಯ ಉಪಕಾರ್ಯಕಾರಿ ನಿರ್ದೇಶಕರು ಕಾರ್ಯಕ್ರಮ ನಿರೂಪಿಸಿ ಗಣ್ಯರನ್ನು ಸ್ವಾಗತಿಸಿದರು. ಸಂಸ್ಥೆಯ
ಕ್ಷೇತ್ರ ಕಾರ್ಯಕ್ರಮದ ಸಹನಿರ್ದೇಶರಾದ ಕೃಪಾ ಎಮ್. ಎಮ್. ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!