spot_img
Tuesday, March 17, 2026
spot_img

ಅಮಾಸೆಬೈಲು: ಹುಲ್ಲು ತರಲು ಹೋದ ಯುವತಿ ಕಿಂಡಿ ಅಣೆಕಟ್ಟುವಿಗೆ ಬಿದ್ದು ಮೃತ್ಯು

ಅಮಾಸೆಬೈಲು: ಅಮಾಸೆಬೈಲು ಗ್ರಾಮದ ಯುವತಿ ತೋಟದಿಂದ ಹುಲ್ಲನ್ನು ತೆಗೆದುಕೊಂಡು ಕಿಂಡಿ ಅಣೆಕಟ್ಟಿನ ದಂಡೆಯ ಮೇಲೆ ನಡೆದುಕೊಂಡು ಬರುತ್ತಿರುವಾಗ ಜೋರಾಗಿ ಗಾಳಿ ಮಳೆ ಬರುತ್ತಿದ್ದು ಕಾಲುಜಾರಿ ಕಿಂಡಿ ಅಣೆಕಟ್ಟಿನ ನೀರಿಗೆ ಬಿದ್ದು ಮುಳುಗಿ ಮೃತಪಟ್ಟ ಘಟನೆ ಜೂ.19ರಂದು ಗುರುವಾರ ನಡೆದಿದೆ.

ಮೂಕಾಂಬಿಕಾ (24 ವ) ಮೃತ ದುರ್ದೈವಿ. ಅಮಾಸೆಬೈಲು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಮೂಕಾಂಬಿಕಾ ಜೂ.19 ಗುರುವಾರ ಮಧ್ಯಾಹ್ನ ಬಂಧು ಅಶ್ವಿನಿಯವರೊಂದಿಗೆ ಹುಲ್ಲು ತರಲು ಮನೆ ಸಮೀಪ ಇರುವ ತೋಟಕ್ಕೆ ಹೋಗಿದ್ದು ಹುಲ್ಲನ್ನು ಕೊಯ್ದು ಹೊರೆಯನ್ನು ಅಶ್ವಿನಿಯವರಿಗೆ ಹೊರಿಸಿ ಹಿಂದಿನಿಂದ ತಾನು ಬರುವುದಾಗಿ ತಿಳಿಸಿ ಬಂದಿದ್ದು ಅಶ್ವಿನಿಯವರು ಮನೆಗೆ ಬಂದರೂ ಮೂಕಾಂಬಿಕಾ ಬಾರದೇ ಇರುವುದನ್ನು ನೋಡಿ ವಾಪಾಸು ತೋಟ ಸಮೀಪ ಹೋಗಿ ನೋಡಿದಾಗ ತೋಟದ ಮೇಲೆ ಇದ್ದ ಜಂಬೆಹಾಡಿ ಕಿಂಡಿ ಅಣೆಕಟ್ಟು ಇದರ ದಂಡೆಯ ಮೇಲೆ ಹುಲ್ಲು ಕೊಯ್ಯುವ ಕತ್ತಿ ಇದ್ದು ಮೂಕಾಂಬಿಕಾಳನ್ನು ಕೂಗಿ ಕರೆದಾಗ ಆಕೆ ಮಾತನಾಡದೇ ಇದ್ದು ಜೋರಾಗಿ ಮಳೆ ಸುರಿಯುತ್ತಿದ್ದು ನಡೆದುಕೊಂಡು ಬರುವಾಗ ಕಿಂಡಿ ಅಣೆಕಟ್ಟಿಗೆ ಬಿದ್ದರಬಹುದೆಂದು ಅನುಮಾನಗೊಂಡು ಮನೆಯವರನ್ನು ಕರೆದಿದ್ದಾರೆ. ಸ್ಥಳಕ್ಕೆ ಬಂದ ಮಹೇಶ ಅವರು ದೋಟಿಯ ಸಹಾಯದಿಂದ ಜಾಲಾಡಿದಾಗ ಮೂಕಾಂಬಿಕೆಯ ತಲೆ ಕೂದಲು ಮೇಲಕ್ಕೆ ತೇಲಿದ್ದು ದೋಟಿಯ ಕತ್ತಿಯ ಸಹಾಯದಿಂದ ದೇಹ ಮೇಲಕ್ಕೆ ಎತ್ತಿದ್ದಾರೆ. ಆಗಲೇ ಅವರು ಮೃತಪಟ್ಟಿದ್ದರು.

ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!