spot_img
Tuesday, March 17, 2026
spot_img

ಜೂನ್ 21ಕ್ಕೆ ಬೆಂಗಳೂರಿನಲ್ಲಿ ‘ಯಕ್ಷ ಸಿಂಧೂರ’ ಅದ್ದೂರಿಯ ಪೌರಾಣಿಕ ಯಕ್ಷಭಿನ್ನಣ

ಬೆಂಗಳೂರು: ಕಳೆದ 14 ವರ್ಷಗಳಿಂದ ಕಲಾಕ್ಷೇತ್ರದ ಪ್ರೇಕ್ಷಕರಿಗೆ ಯಕ್ಷ ರಸದೌತಣ ಉಣಬಡಿಸಿರುವ ಅನಿಲ್ ಕುಮಾರ್ ಶೆಟ್ಟಿ ಪೆರ್ಡೂರು ಸಂಯೋಜನೆಯಲ್ಲಿ ಟೀಮ್ ಕದಳಿ ಪ್ರಸ್ತುತಿಯಲ್ಲಿ ಜೂನ್ 21-2025 ಶನಿವಾರ ರಾತ್ರಿ 10 ಗಂಟೆಯಿಂದ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷ ಸಿಂಧೂರ ಪೌರಾಣಿಕ ಯಕ್ಷಭಿನ್ನಣ ನೆರವೇರಲಿದೆ.

ಶ್ರೀರಾಮ ಪಟ್ಟಾಭಿಷೇಕ, ರುಕ್ಮಿಣಿ ಕಲ್ಯಾಣ, ಸುದರ್ಶನ ವಿಜಯ ಎನ್ನುವ ತ್ರಿವಳಿ ಆಖ್ಯಾನಗಳನ್ನು ಬಡಗು-ತೆಂಕಿನ ಪ್ರಸಿದ್ಧ ಕಲಾವಿದರು ಅಭಿನಯಿಸಿ ತೋರಿಸಲಿದ್ದಾರೆ.

ಹಿಮ್ಮೇಳದಲ್ಲಿ ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಸುರೇಶ ಶೆಟ್ಟಿ ಶಂಕರನಾರಾಯಣ, ಹಿಲ್ಲೂರು ರಾಮಕೃಷ್ಣ ಹೆಗಡೆ, ವಿನಯ್ ಆರ್ ಶೆಟ್ಟಿ, ಮದ್ದಳೆಯಲ್ಲಿ ಪರಮೇಶ್ವರ ಭಂಡಾರಿ ಕರ್ಕಿ, ಸುನಿಲ್ ಭಂಡಾರಿ ಕಡತೋಕ, ಚಂಡೆಯಲ್ಲಿ ಶಿವಾನಂದ ಕೋಟ, ಶ್ರೀನಿವಾಸ ಪ್ರಭು, ಸುಜನ್ ಹಾಲಾಡಿ. ಮುಮ್ಮೇಳ ಸ್ತ್ರೀಭೂಮಿಕೆಯಲ್ಲಿ ಸಂತೋಷ್ ಹಿಲಿಯಾಣ, ಸುಧೀರ್ ಉಪ್ಪೂರು, ನಾಗರಾಜ ದೇವಲ್ಕುಂದ, ಹಾಸ್ಯದಲ್ಲಿ ಅಶೋಕ ಭಟ್ ಸಿದ್ಧಾಪುರ, ಶೇಖರ ಶೆಟ್ಟಿ ಯಳಬೇರು, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಪುರುಷ ವೇಷದಲ್ಲಿ ತೀರ್ಥಹಳ್ಳಿ ಗೋಪಾಲ ಆಚಾರ್, ಬಳ್ಕೂರು ಕೃಷ್ಣ ಯಾಜಿ, ಗಣಪತಿ ಹೆಗಡೆ ತೋಟಿಮನೆ, ಸುಬ್ರಹ್ಮಣ್ಯ ಚಿಟ್ಟಾಣಿ, ಜಯಪ್ರಕಾಶ ಹೆಗಡೆ ಪೆರ್ಮುದೆ, ವಿದ್ಯಾದರ ರಾವ್ ಜಲವಳ್ಳಿ, ಪ್ರಕಾಶ ಮೊಗವೀರ ಕಿರಾಡಿ, ವಿಶ್ವನಾಥ ಹೆನ್ನಾಬೈಲ್, ಸುನಿಲ್ ಹೊಲಾಡು ಭಾಗವಹಿಸಲಿದ್ದಾರೆ. ಸ್ನೇಹಪೂರ್ವಕವಾಗಿ ನವೀನ್ ಶೆಟ್ಟಿ ಐರ್‌ಬೈಲು, ಪ್ರಶಾಂತ್ ಹೆಗ್ಡೆ, ಯುವ ಗಾಯಕಿ ಶ್ರೇಯ ಆಚಾರ್ಯ ಅಲಂಕಾರು, ಕಡಬ ಭಾಗವಹಿಸಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!