spot_img
Tuesday, March 17, 2026
spot_img

ಇರಾನ್-ಇಸ್ರೇಲ್ ಯುದ್ಧ ಕಾರ್ಮೋಡ : ದೆಹಲಿಗೆ ಬಂದಿಳಿದ ‘ಆಪರೇಷನ್ ಸಿಂಧೂ’ ಮೊದಲ ಬ್ಯಾಚ್

ಜನಪ್ರತಿನಿಧಿ (ನವ ದೆಹಲಿ) : ಇರಾನ್-ಇಸ್ರೇಲ್ ಆಗಸದಲ್ಲಿ ಮಿಸೈಲ್‌ಗಳೇ ಸದ್ದು ಮಾಡುತ್ತಿವೆ. ಆತಂಕ ಮನೆ ಮಾಡಿದೆ. ಯುದ್ಧೋನ್ಮಾದ ಹೆಚ್ಚುತ್ತಿರುವ ಇರಾನ್ ಮತ್ತು ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಆತಂಕದ ಕಾರ್ಮೋಡ ಕವಿದಿದೆ.

ತಾಯ್ನಾಡಿಗೆ ವಾಪಸ್ ಆಗಲು ಮನ ಹಂಬಲಿಸುತ್ತಿದೆ. ಇದಕ್ಕೆ ಸ್ಪಂದಿಸಿದ ಭಾರತ ಸರ್ಕಾರ ಸ್ಥಳಾಂತರ ಪ್ರಕ್ರಿಯೆಯನ್ನು ಬಿರುಸುಗೊಳಿಸಿದ್ದು, ಭಾರತೀಯರ ರಕ್ಷಣೆಗೆ ‘ಆಪರೇಷನ್ ಸಿಂಧೂ’ ಹೆಸರನ್ನಿಟ್ಟಿದೆ. ಇದೀಗ ‘ಆಪರೇಷನ್ ಸಿಂಧೂ’ ಇದರ ಮೊದಲ ಬ್ಯಾಚ್ ದೆಹಲಿಗೆ ಬಂದಿಳಿದಿದೆ.

ಇರಾನ್‌ನಲ್ಲಿ ಸುಮಾರು 10 ಸಾವಿರ ಭಾರತೀಯರಿದ್ದಾರೆ. ಇದರಲ್ಲಿ 1500-2000 ವಿದ್ಯಾರ್ಥಿಗಳಿದ್ದಾರೆ ಎನ್ನಲಾಗಿದೆ. ಈಗಾಗಲೇ ಊರ್ಮಿ ಯುನಿವರ್ಸಿಟಿಯ 110 ವಿದ್ಯಾರ್ಥಿಗಳ ಭೂ ಮಾರ್ಗವಾಗಿ ಇರಾನ್‌ನಿಂದ ಅರ್ಮೇನಿಯಾವನ್ನು ಸುರಕ್ಷಿತವಾಗಿ ತಲುಪಿಸಲಾಗಿತ್ತು. ಅವರೆಲ್ಲ ಇದೀಗ ದೆಹಲಿ ತಲುಪಿದ್ದಾರೆ.
ಅರ್ಮೇನಿಯಾದ ಯೆರೆವಾನ್ ಏರ್‌ಪೋರ್ಟ್ನಿಂದ ವಿಶೇಷ ಇಂಡಿಗೋ ವಿಮಾನದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲಾಗಿದೆ. ಮೊದಲ ತಂಡದಲ್ಲಿರುವ ಬಹುತೇಕರು ಜಮ್ಮು-ಕಾಶ್ಮೀರ ಭಾಗದವರಾಗಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನ, ಭಾರತದತ್ತ ಹೊರಟಿದೆ. ಕೆಲವೇ ಕ್ಷಣಗಳಲ್ಲಿ ಮೊದಲ ತಂಡ ದೆಹಲಿಗೆ ಆಗಮಿಸಲಿದೆ.

ಭಾರತೀಯರ ಸ್ಥಳಾಂತರ ಪ್ರಕ್ರಿಯೆ ಅನುಕೂಲ ಮಾಡಿಕೊಟ್ಟ ಇರಾನ್ ಮತ್ತು ಅರ್ಮೇನಿಯಾ ಸರ್ಕಾರಕ್ಕೆ ಭಾರತ ಸರ್ಕಾರ ಕೃತಜ್ಞತೆ ಹೇಳಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!