spot_img
Monday, March 16, 2026
spot_img

ಉಡುಪಿ ಸೇರಿ 5 ಜಿಲ್ಲೆಗಳಿಗೆ ನೂತನ ಡಿಸಿ ನೇಮಿಸಿ ಸರ್ಕಾರ ಆದೇಶ | 17 ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ

ಜನಪ್ರತಿನಿಧಿ (ಬೆಂಗಳೂರು) : ಗ್ರಾಮಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಇ-ಗವರ್ನೆನ್ಸ್‌ನ ನಿರ್ದೇಶಕಿ ಯಾಗಿ ಕಾರ್ಯನಿರ್ವಹಿಸುತ್ತಿರುವ ಸ್ವರೂಪ ಟಿ.ಕೆ. ಅವರನ್ನು ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ರಾಜ್ಯ ಸರಕಾರ ವರ್ಗಾಯಿಸಿದೆ. ಹಾಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ.

ಟೈಕ್ಸ್‌ಟೈಲ್ ಇಂಜಿನಿಯರಿಂಗ್‌ನಲ್ಲಿ ಐಐಟಿ ದಿಲ್ಲಿಯಿಂದ ಎಂಟೆಕ್ ಪದವಿ ಪಡೆದಿರುವ ಸ್ವರೂಪ ಅವರು 2025ರ ಫೆಬ್ರವರಿಯಿಂದ ಆರ್‌ಡಿಪಿಆರ್ ಇಲಾಖೆಯಲ್ಲಿ ಇ-ಗವರ್ನೆನ್ಸ್‌ನ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಅದಕ್ಕೆ ಮುನ್ನ ಅವರು ಧಾರವಾಡ ಜಿಲ್ಲಾ ಪಂಚಾಯತ್‌ನಲ್ಲಿ ಸಿಇಓ ಹಾಗೂ ನೇಶನಲ್ ರೂರಲ್ ಲೈಲ್ಲಿಹುಡ್ ಮಿಷನ್‌ನ ಸಿಓಓ ಹಾಗೂ ಸಹಾಯಕ ನಿರ್ದೇಶಕಿಯಾಗಿಕಾರ್ಯನಿರ್ವಹಿಸಿದ್ದರು.

ದಕ್ಷಿಣ ಕನ್ನಡ, ಹಾಸನ, ಕೊಪ್ಪಳ, ಉಡುಪಿ ಹಾಗೂ ಬಾಗಲಕೋಟೆಯ ಜಿಲ್ಲಾಧಿಕಾರಿಗಳು ಹಾಗೂ ಕೆಲವೆಡೆ ಜಿಲ್ಲಾ ಪಂಚಾಯಿತಿ ಸಿಇಒಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ 2016ರ ಬ್ಯಾಚಿನ ಐಎಎಸ್ ಅಧಿಕಾರಿ ದರ್ಶನ್ ಎಚ್‌.ವಿ. ಅವರನ್ನು ನಿಯುಕ್ತಿ ಮಾಡಲಾಗಿದೆ. ದರ್ಶನ್, ಬೆಂಗಳೂರು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾಗಿದ್ದರು.

ಮುಲ್ಲೈ ಮುಗಿಲನ್ ಇಂದಿಗೆ ಎರಡು ವರ್ಷಗಳ ಹಿಂದೆ 2023ರ ಜೂನ್‌ 17 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದರು. ಅವರನ್ನು ಬೆಂಗಳೂರಿನ ಇನ್‌ಸ್ಪೆಕ್ಟರ್ ಜನರಲ್ ಆಫ್ ರೆಜಿಸ್ಟ್ರೇಷನ್ ಮತ್ತು ಕಮೀಷನರ್ ಆಫ್ ಸ್ಟ್ಯಾಂಪ್ಸ್ ಹುದ್ದೆಗೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಒಟ್ಟು 17 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಕೆ.ಎಂ.ಜಾನಕಿ- ಕೆಪಿಎಸ್‌ಸಿ ಕಾರ್ಯದರ್ಶಿ
ಟಿ.ಕೆ.ಸ್ವರೂಪಾ- ಉಡುಪಿ ಜಿಲ್ಲಾಧಿಕಾರಿ
ಎಚ್‌.ವಿ.ದರ್ಶನ್‌- ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
ಸಿ.ಸತ್ಯಭಾಮ- ಸಮಗ್ರ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರು
ಕೆ.ಎಸ್‌.ಲತಾ ಕುಮಾರಿ- ಹಾಸನ ಜಿಲ್ಲಾಧಿಕಾರಿ
ಡಾ.ಅವಿನಾಶ್‌ ಮೆನನ್‌ ರಾಜೇಂದ್ರನ್‌- ಎನ್‌ಎಚ್‌ಎಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಮಿಷನ್‌ ಡೈರೆಕ್ಟರ್‌
ಎಂ.ಪಿ. ಮುಲೈ ಮುಗಿಲನ್‌- ನೋಂದಣಿ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು
ನಳಿನಿ ಅತುಲ್‌- ಕೆಕೆಆರ್‌ಡಿಬಿ ಕಾರ್ಯದರ್ಶಿ
ಸಂಗಪ್ಪ- ಬಾಗಲಕೋಟೆ ಜಿಲ್ಲಾಧಿಕಾರಿ
ಸುರೇಶ್‌ ಬಿ. ಇಟ್ನಾಳ್‌- ಕೊಪ್ಪಳ ಜಿಲ್ಲಾಧಿಕಾರಿ
ಡಾ.ವೈ.ನವೀನ್‌ ಭಟ್‌- ಚಿಕ್ಕಬಳ್ಳಾಪುರ ಜಿಪಂ ಸಿಇಒ
ಗರೀಮಾ ಪನ್ವಾರ್‌- ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು
ರಾಹುಲ್‌ ರತ್ನಂ ಪಾಂಡೆ- ಸೆಂಟರ್‌ ಫಾರ್‌ ಸ್ಮಾರ್ಟ್‌ ಗವರ್ನೆನ್ಸ್‌ ಕಾರ್ಯಕಾರಿ ನಿರ್ದೇಶಕ
ಪ್ರಕಾಶ್‌ ಜಿ.ಟಿ. ನೆಟ್ಟಾಲಿ- ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ (ಬಿಸಿಯೂಟ)
ವರ್ನಿತ್‌ ನೇಗಿ- ಕೊಪ್ಪಳ ಜಿಪಂ ಸಿಇಒ
ಗಿಟ್ಟೆ ಮಾಧವ್‌ ವಿಠ್ಠಲ್‌ ರಾವ್‌- ದಾವಣಗೆರೆ ಜಿಪಂ ಸಿಇಒ
ಶಮ್ಲಾಇಕ್ಬಾಲ್‌- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ತೋಟಗಾರಿಕೆ, ರೇಷ್ಮೆ ಇಲಾಖೆ ಕಾರ್ಯದರ್ಶಿ (ಹೆಚ್ಚುವರಿ)

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!