spot_img
Tuesday, March 17, 2026
spot_img

ಬಂಟರ ಯಾನೆ ನಾಡವರ ಸಂಘ ಬೈಂದೂರು: ಸಾಧಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೈಂದೂರು: ಬಂಟರ ಯಾನೆ ನಾಡವರ ಸಂಘ (ರಿ) ಬೈಂದೂರು ಇದರ 30ರ ಸಂಭ್ರಮದ ವಾರ್ಷಿಕೋತ್ಸವಕ್ಕೆ ವಿವಿಧ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅತ್ಯುತ್ತಮ ಇಂಜಿನೀಯರಿಂಗ್ ವಿದ್ಯಾರ್ಥಿ, ಅತ್ಯುತ್ತಮ ವೈದ್ಯಕೀಯ ವಿದ್ಯಾರ್ಥಿ, ಅತ್ಯುತ್ತಮ ವಾಣಿಜ್ಯ ವಿದ್ಯಾರ್ಥಿ, ಅತ್ಯುತ್ತಮ ಸರ್ವತೋಮುಖ ಪ್ರತಿಭಾನ್ವಿತ ವಿದ್ಯಾರ್ಥಿನಿ, ಅತ್ಯುತ್ತಮ ಕಾನೂನು ವಿದ್ಯಾರ್ಥಿ, ಅತ್ಯುತ್ತಮ ದಂತ ವೈದ್ಯಕೀಯ ವಿದ್ಯಾರ್ಥಿ, ಅತ್ಯುತ್ತಮ ಬಿ.ಎಸ್ಸಿ (ಕೃಷಿ) / ಪಿ.ಯಿ.ಸಿ. (ವಿಜ್ಞಾನ) ವಿದ್ಯಾರ್ಥಿ, ಅತ್ಯುತ್ತಮ ಕ್ರೀಡಾ ವಿದ್ಯಾರ್ಥಿ, ಯಾವುದೇ ಕ್ಷೇತ್ರದಲ್ಲಿನ ಉನ್ನತ ಸಾಧನೆಗಾಗಿ, ವಿವಿಧ ಕ್ಷೇತ್ರದಲ್ಲಿನ ಸರ್ವತೋಮುಖ ಪ್ರತಿಭೆ ಗಾಗಿ (ವಿದ್ಯಾರ್ಥಿನಿ), ಅತ್ಯುತ್ತಮ ಬಿ.ಇ. (ಎಲೆಕ್ಟ್ರಾನಿಕ್ಸ್) ಅಥವಾ ಇತರೆ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ, “ಶಾಸ್ತ್ರೀಯ ಸಂಗೀತ ” ದಲ್ಲಿ ವಿಶೇಷ ಸಾಧನೆಗಾಗಿ, ಅತ್ಯುತ್ತಮ ಪಶು ವಿಜ್ಞಾನ ವಿದ್ಯಾರ್ಥಿ ಅಥವಾ ಪಶುವಿಜ್ಞಾನ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ, ಅತ್ಯುತ್ತಮ ವೈದ್ಯಕೀಯ ವಿದ್ಯಾರ್ಥಿನಿ, ಅತ್ಯುತ್ತಮ ನೇತ್ರ ವೈದ್ಯ ಅಥವಾ ಯಾವುದೇ ವೈದ್ಯಕೀಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, “ಶಾಸ್ತ್ರೀಯ ನೃತ್ಯ’ದಲ್ಲಿನ ವಿಶೇಷ ಸಾಧನೆಗಾಗಿ, ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿ, ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿನಿ, ವಾಣಿಜ್ಯ ವಿಷಯದಲ್ಲಿ ಪದವಿ ಗಳಿಸಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಅತ್ಯುತ್ತಮ ವಿದ್ಯಾರ್ಥಿನಿ, ವಿಜ್ಞಾನ, ವಾಣಿಜ್ಯ ಕಲಾ ವಿಭಾಗಗಳಲ್ಲಿನ ವಿಶೇಷ ಸಾಧನೆಗಾಗಿ, ಕಲೆ, ಸಂಗೀತ, ನೃತ್ಯ, ಯಕ್ಷಗಾನ, ನಾಟಕ ಇತ್ಯಾದಿ ವಿಭಾಗಗಳಲ್ಲಿ ವಿಶೇಷ ಸಾಧನೆಗಾಗಿ, ಕ್ರೀಡೆ, ಯೋಗ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ, ಎಸ್.ಎಸ್.ಎಲ್.ಸಿ./10 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿರುವ ಅತ್ಯುತ್ತಮ ವಿದ್ಯಾರ್ಥಿನಿ, ಅತ್ಯುತ್ತಮ ಮ್ಯಾನೆಜಮೆಂಟ್ ವಿದ್ಯಾರ್ಥಿ ಅಥವಾ ಯಾವುದೇ ಕ್ಷೇತ್ರದಲ್ಲಿನ ಉನ್ನತ ಸಾಧನೆಗಾಗಿ, ದ್ವಿತೀಯ ಪಿಯುಸಿ/12 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿರುವ ಅತ್ಯುತ್ತಮ ವಿದ್ಯಾರ್ಥಿನಿ, ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸುವ ಪ್ರತಿಭಾನ್ವಿತ ವಿದ್ಯಾರ್ಥಿನಿ, ಪಿಯುಸಿ, ಪದವಿ ಅಥವಾ ಇನ್ಯಾವುದೇ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿ, ಪಿ.ಯು.ಸಿ, ಪದವಿ ಅಥವಾ ಇನ್ಯಾವುದೇ ಶಿಕ್ಷಣ ಪಡೆಯುತ್ತಿರುವ ತಂದೆಯನ್ನು ಕಳೆದುಕೊಂಡಿರುವ ವಿದ್ಯಾರ್ಥಿ, ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಬಂಟ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಪ್ರತಭಾವಂತ ವಿದ್ಯಾರ್ಥಿ, ಅತ್ಯುತ್ತಮ ಶಿಕ್ಷಕ ತರಬೇತಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
2024-25ನೇ ಸಾಲಿನಲ್ಲಿ ಶಿಕ್ಷಣವನ್ನು ಪೂರೈಸಿದ ವಿದ್ಯಾರ್ಥಿಗಳು ಯಾವುದೇ ಪ್ರಶಸ್ತಿಗೆ “ಬೈಂದೂರು ಶೈಕ್ಷಣಿಕ ವಲಯದ” ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಸ್ವವಿವರ, ಅಂಕಪಟ್ಟಿಯ ಪ್ರತಿ, ಇತ್ತೀಚಿನ ಭಾವಚಿತ್ರ ಹಾಗೂ ದೂರವಾಣಿ ಜೂನ್ 27ರ ಒಳಗಾಗಿ ಸಂಘದ ಕಛೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದವರಿಗೆ ದಿನಾಂಕ 27/7/2025ರಂದು ನಡೆಯಲ್ಲಿರುವ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9481300846, 9448170246 ಸಂಪರ್ಕಿಸಬಹುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!