spot_img
Tuesday, March 17, 2026
spot_img

‘ಮಕ್ಕಳೇ, ಪ್ರತಿ ದಿನ ಆಟವಾಡಿ’ ಹಿರಿಯರೇ, ಪ್ರತಿದಿನ ಮಕ್ಕಳಿಗೆ ಆಟಕ್ಕೆ ಸಮಯ ನೀಡಿ…

ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾಗಿರುವ ಆಟಕ್ಕೆ ಹೆಚ್ಚಿನ ಆಧ್ಯತೆ ಸಿಗಲು ಆಟದ ದಿನ ಪ್ರೇರಣೆಯಾಗಲಿ

ಕುಂದಾಪುರ: ವಿಶ್ವಸಂಸ್ಥೆಯು ಜೂನ್ 11 ಅನ್ನು ಅಂತರರಾಷ್ಟ್ರೀಯ ಆಟದ ದಿನವಾಗಿ ಅಂಗೀಕರಿಸಿ, ಘೋಷಿಸಿ ಒಂದು ವರ್ಷ ಕಳೆದಿದೆ. ಕಳೆದ ವರ್ಷದಲ್ಲಿ ಆದಂತಹ ಈ ಘೋಷಣೆಗೆ ಪ್ರೇರಣೆಯಾಗಿದ್ದು ಆಟದ ಮಹತ್ವದ ಕುರಿತಾಗಿ ಪ್ರಪಂಚದಾದ್ಯಂತ 10,000 ಕ್ಕೂ ಹೆಚ್ಚು ಮಕ್ಕಳ ಧ್ವನಿ!

11-06-2025ರಂದು ಅಂತರಾಷ್ಟ್ರೀಯ ಆಟದ ದಿನದ ವಾರ್ಷಿಕ ಸಂಭ್ರಮಾಚರಣೆಯ ಅಂಗವಾಗಿ ಸಂಸ್ಥೆಯ ರಾಜ್ಯ ಸಂಪನ್ಮೂಲ ಕೇಂದ್ರವಾದ ನಮ್ಮ ಭೂಮಿಯಲ್ಲಿ ಮಕ್ಕಳಿಗಾಗಿ ವಿವಿಧ ಆಟಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಗ್ರಾಮ ಪಂಚಾಯತ್‍ಗಳ ಮಕ್ಕಳ ಸಂಘಗಳ ಪ್ರತಿನಿಧಿಗಳು, ರಾಜ್ಯ ಸಂಪನ್ಮೂಲ ಕೇಂದ್ರದಲ್ಲಿ ಕಲಿಯುತ್ತಿರುವ ಮಕ್ಕಳು ಸೇರಿ 140 ಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕ್ರೀಡಾ ಜ್ಯೋತಿಯೊಂದಿಗೆ ಮಕ್ಕಳ ಪ್ರೀತಿಯ ಹಕ್ಕಾದ ಆಟದ ಮಹತ್ವದ ಬಗ್ಗೆ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಈ ಎಲ್ಲಾ ಮಕ್ಕಳು ಶ್ರೀ ಸಿದ್ಧಿವಿನಾಯಕ ಶಾಲೆ ಹಟ್ಟಿಯಂಗಡಿ ಮಕ್ಕಳೊಂದಿಗೆ ಸೇರಿ ವಾದ್ಯಮೇಳಗಳೊಂದಿಗೆ ಸಾಗಿಬಂದರು. ತಾಲೂಕು ಕ್ರೀಡಾ ಇಲಾಖಾ ಅಧಿಕಾರಿ ಕುಸುಮಾಕರ ಶೆಟ್ಟಿಯವರು ಮಕ್ಕಳಿಂದ ಕ್ರೀಡಾಜ್ಯೋತಿ ಪಡೆದು ಇಡೀ ದಿನದ ಕ್ರೀಡಾಹಬ್ಬಕ್ಕೆ ಚಾಲನೆ ನೀಡಿದರು. “ಮಕ್ಕಳ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳವಲ್ಲಿ ಆಟ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳು ಹೆಚ್ಚು ಹೆಚ್ಚು ಆಟ ಆಡುವುದರಿಂದ ಸದೃಢರಾಗುತ್ತಾರೆ. ಚೆನ್ನಾಗಿ ಪರಿಣಿತಿ ಪಡೆದರೆ ಆಟವನ್ನೂ ಸಹ ವೃತ್ತಿಯಾಗಿ ಮುಂದುವರಿಸಲು ಇರುವ ವಿವಿಧ ಅವಕಾಶಗಳ ಬಗ್ಗೆ ಅವರು ಮಕ್ಕಳಿಗೆ ಮಾಹಿತಿ ನೀಡಿದರು.

ನಿಧಿಶೋಧ ಆಟದ ಮೂಲಕ ಮಕ್ಕಳು ಆಟ ನಮ್ಮ ಹಕ್ಕು, ಜೊತೆಯಾಗಿ ಆಡೋಣ-ಜೊತೆಯಾಗಿ ಬಾಳೋಣ ಎನ್ನುತ್ತಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಂಡ್ಲೂರು ಪೆಲೀಸ್ ಠಾಣೆಯ ನಿರೀಕ್ಷಕರಾದ ಈರಣ್ಣ ಶಿರಗುಂಪಿ ಹಾಗೂ ಕುಸುಮಾಕರ ಶೆಟ್ಟಿಯವರೊಂದಿಗೆ ಕ್ರೀಡಾಹಬ್ಬವನ್ನು ಉದ್ಘಾಟಿಸಿದರು. ಪೆÇಲೀಸ್ ನಿರೀಕ್ಷಕರು ಮಾತನಾಡುತ್ತಾ, “ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಆಟ ಅತ್ಯಂತ ಅವಶ್ಯಕವಾಗಿದೆ. ಆಟದ ಮೂಲಕ ಅವರು ಭಾವನಾತ್ಮಕ, ಸಾಮಾಜಿಕ, ಬೌದ್ಧಿಕ ಮತ್ತು ದೈಹಿಕವಾಗಿಯೂ ಬೆಳೆಯುತ್ತಾರೆ ಹಾಗೂ ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸುತ್ತಾರೆ. ಆಟವು ಮಕ್ಕಳಲ್ಲಿ ಸಹನೆ, ಸಹಕಾರ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ” ಎಂದರು.

ಮಕ್ಕಳ ಮಿತ್ರರು, ಪೆÇೀಷಕರು ಈ ಮಕ್ಕಳೊಂದಿಗೆ ಸಂಭ್ರಮದಿಂದ ಮಕ್ಕಳಾಗಿ ಜೊತೆಯಾಗಿ ನಲಿದರು. ರಕ್ಷಣೆ, ಎಲ್ಲರ ಒಳಗೊಳ್ಳುವಿಕೆ, ಒಗ್ಗಟ್ಟಿನ ಮಹತ್ವ ಸಾರುವ ವಿವಿಧ ಆಟಗಳು ಆಡಿಸಿ, ಆ ಕುರಿತಾಗಿ ಮಕ್ಕಳೊಂದಿಗೆ ಚರ್ಚೆಗಳನ್ನು ನಡೆಸಲಾಯಿತು. ಅಲ್ಲದೇ ಮಕ್ಕಳಿಗೆ ಮೋಜಿನಾಟ, ಸಾಹಸಮಯ ಆಟಗಳಿಗೂ ಸಹ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಸಂಸ್ಥೆಯ ಕಾರ್ಯಕ್ಷೇತ್ರವಾದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿಯೂ ದುಡಿಯುವ ಮಕ್ಕಳ ಸಂಘಟನೆಯಾದ ಭೀಮಸಂಘದ ಪ್ರತಿನಿಧಿಗಳು ಬೇರೆ ಬೇರೆ ಶಾಲೆಗಳಲ್ಲಿ ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಿ ಕ್ರೀಡಾಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಇದರೊಂದಿಗೆ ಅಂತರಾಷ್ಟ್ರೀಯ ಆಟದ ದಿನದ ಕುರಿತಾಗಿ ಹಾಗೂ ಮಕ್ಕಳ ಬೆಳವಣಿಗೆಗೆ ಆಟವನ್ನು ಒಂದು ಸಾಧನವಾಗಿ ಬಳಸಿಕೊಳ್ಳಲು ಸಂಯೋಜಿತ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುವಂತೆ ರಾಜ್ಯಮಟ್ಟದಲ್ಲಿ ಮಕ್ಕಳಿಗೆ ಸಂಬಂಧಿಸಿದ ವಿವಿಧ ಇಲಾಖೆಗಳೊಂದಿಗೆ ವಕೀಲಿ ನಡೆಸಿದೆ. ಅಲ್ಲದೇ ಜಾಗತಿಕಮಟ್ಟದಲ್ಲಿ ಮಕ್ಕಳ ಆಟದ ಮಹತ್ವವನ್ನು ಸಾರುವಲ್ಲಿ ವಿವಿಧ ಕಾರ್ಯತಂತ್ರ ರೂಪಿಸುವಲ್ಲಿಯೂ ಸಹ ಸಂಸ್ಥೆಯು ಪ್ರಮುಖ ಪಾತ್ರವಹಿಸಿದೆ.

ಅಲ್ಲದೇ, ಅಂತರಾಷ್ಟ್ರೀಯ ಆಟದ ದಿನ ಘೋಷಣೆಯಾಗಿ ಒಂದು ವರ್ಷದ ಸಂದರ್ಭದಲ್ಲಿ, ಸಂಸ್ಥೆಯ ಕಾರ್ಯಕ್ಷೇತ್ರವಾದ ಉಡುಪಿ ಹಾಗೂ ವಿಜಯನಗರ ಜಿಲ್ಲೆಗಳ ವಿವಿಧ ಪಂಚಾಯತ್‍ಗಳಲ್ಲಿ ಜೂನ್ ಪ್ರಾರಂಭದಿಂದಲೇ ಮಕ್ಕಳ ರಕ್ಷಣೆ, ಮಾನಸಿಕ ಆರೋಗ್ಯ, ಮಕ್ಕಳ ಹಕ್ಕುಗಳು ಹಾಗೂ ಸಂಘಟನೆಯ ಮಹತ್ವದ ಕುರಿತಾಗಿ ವಿವಿಧ ಆಟಗಳನ್ನು ರೂಪಿಸಿ ಪಂಚಾಯತ್ ಪ್ರತಿನಿಧಿಗಳು, ಪೆÇೀಷಕರು, ಶಿಕ್ಷಕರು ಹಾಗೂ ಮಕ್ಕಳು ಹೀಗೆ ವಿವಿಧ ಗುಂಪುಗಳಲ್ಲಿ ಆಟಗಳನ್ನು ಆಯೋಜಿಸಿತ್ತು. ಆ ಮೂಲಕ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಆಟದ ಮಹತ್ವವನ್ನು ಸಾರುವುದರೊಂದಿಗೆ ಪೆÇೀಷಕರ, ಸರ್ಕಾರದ, ಸಮುದಾಯದ, ಶಿಕ್ಷಕರ ಪಾತ್ರಗಳ ಬಗ್ಗೆ ಅರಿವು ಮೂಡಿಸಲು, ಅವರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಕ್ಕಳೇ ನೇರವಾಗಿ ಅವರೊಂದಿಗೆ ಮಾತುಕತೆ ನಡೆಸಲು ಸರಣಿ ಕಾರ್ಯಕ್ರಮಗಳನ್ನು ನಡೆಸಿದೆ. ಅಲ್ಲದೇ ಈ ವಿಷಯಗಳ ಕುರಿತಾಗಿ ಆಟದೊಂದಿಗೆ ಕಲಿಕೆಯನ್ನೂ ಸಹ ಅಳವಡಿಸಿ, ಆಟದ ನಂತರ ಆಟದ ಬಗ್ಗೆ, ಆಟದ ಮೂಲಕ ಆದ ಕಲಿಕೆಯ ಬಗ್ಗೆ ಆಳವಾಗಿ ಚರ್ಚೆಗಳನ್ನೂ ಸಹ ನಡೆಸಿದೆ.

ಅಂತರರಾಷ್ಟ್ರೀಯ ಆಟದ ದಿನದ ಘೋಷಣೆಯ ಇಡೀ ಪ್ರಕ್ರಿಯೆಯಲ್ಲಿ ಮಕ್ಕಳಿಗೆ ಸೌಕರ್ಯಕಾರಿಕೆ ಮಾಡಿದ ಸಂಸ್ಥೆಗಳಲ್ಲಿ ಒಂದಾದ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯು ಕಳೆದ ಇಡೀ ವರ್ಷದಲ್ಲಿ ಮಕ್ಕಳೊಂದಿಗೆ ಮಾಡಿದ ತನ್ನ ವಿವಿಧ ಚಟುವಟಿಕೆಗಳಲ್ಲಿ, ಜಾಗೃತಿ-ಮಾಹಿತಿ-ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಆಟವನ್ನು ಒಂದು ಮಾಧ್ಯಮವಾಗಿ ಪರಿಗಣಿಸಿ ಯೋಜನೆ ರೂಪಿಸಿತ್ತು.

ಕೃಪಾ ಎಂ.ಎಂ.
ಸಹನಿರ್ದೇಶಕರು, ಕ್ಷೇತ್ರ ಕಾರ್ಯಕ್ರಮ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!