spot_img
Tuesday, March 17, 2026
spot_img

ಬಿಲ್ಲವ ಸಂಘ ಕುಂದಾಪುರ: ಜೂ.17ಕ್ಕೆ ಸುರೇಶ್ ಎಸ್ ಪೂಜಾರಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಕುಂದಾಪುರ: ಜೂನ್ 4ರಂದು ವಯೋಸಹಜ ಕಾರಣದಿಂದ ಮುಂಬಯಿಯಲ್ಲಿ ನಿಧನರಾದ ಹಿರಿಯ ಹೋಟೆಲ್ ಉದ್ಯಮಿ, ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರದ ಗೌರವಾಧ್ಯಕ್ಷರಾದ ಸುರೇಶ ಎಸ್ ಪೂಜಾರಿ ಅವರ ಗೌರವಾರ್ಥ ಶ್ರದ್ದಾಂಜಲಿ ಸಭೆ ಕುಂದಾಪುರ ಬಿಲ್ಲವ ಸೇವಾ ಸಂಘದ ವತಿಯಿಂದ ಜೂನ್ 17 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಕುಂದಾಪುರದ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶ್ರದ್ದಾಂಜಲಿ ಸಭೆಯನ್ನು ಆಯೋಜಿಸಲಾಗಿದೆ.

ಅಗಲಿರುವ ಸುರೇಶ ಎಸ್.ಪೂಜಾರಿ ಅವರು ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರದ ಗೌರವಾಧ್ಯಕ್ಷರಾಗಿದ್ದು ಶ್ರೀ ನಾರಾಯಣಗುರು ಏಜ್ಯುಕೇಶನಲ್&ಕಲ್ಚರಲ್ ಟ್ರಸ್ಟ್ (ರಿ) ಕುಂದಾಪುರದ ಅಧ್ಯಕ್ಷರಾಗಿ ಕಳೆದ 35 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದರು. ಸಮಾಜದ ಅಶಕ್ತರು ಕೂಡ ಅತ್ಯುತ್ತಮವಾದ ಕಲ್ಯಾಣ ಮಂಟಪದಲ್ಲಿ ವಿವಾಹವನ್ನು ನಡೆಸಬೇಕು ಎಂದು 35 ವರ್ಷಗಳ ಹಿಂದೆಯೇ ಕುಂದಾಪುರದಲ್ಲಿ ಶ್ರೀ ನಾರಾಯಣಗುರು ಕಲ್ಯಾಣ ಮಂಟಪವನ್ನು ನಿರ್ಮಿಸಿ ಬಡವರ ಪಾಲಿನ ಬೆಳಕಾಗಿದ್ದರು, ವಿದ್ಯೆಗೆ ಬಹಳಷ್ಟು ಒತ್ತು ನೀಡಿದ್ದ ಅವರು ಬಿಲ್ಲವ ಸಂಘದ ಮೂಲಕ ಶ್ರೀ ನಾರಾಯಣಗುರು ಶೈಕ್ಷಣಿಕ & ಸಾಂಸ್ಕೃತಿಕ ಟ್ರಸ್ಟ್ ಸ್ಥಾಪಿಸಿ ವಿದ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅವರ ನಿಧನ ತುಂಬಲಾರದ ನಷ್ಟವಾಗಿದೆ ಎಂದು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ ಪೂಜಾರಿ ಬೀಜಾಡಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!