spot_img
Monday, March 16, 2026
spot_img

ಬ್ರಹ್ಮಾವರ : ಮೌಲ್ಯಯುತ ಶಿಕ್ಷಣದಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ : ಶಬಾನ ಅಂಜುಮ್‌

ಜನಪ್ರತಿನಿಧಿ (ಬ್ರಹ್ಮಾವರ) : ಮಾತೃ ಭಾಷೆಯಲ್ಲಿ ನೀಡುವ ಮೌಲ್ಯಯುತ ಶಿಕ್ಷಣದಿಂದ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಮ್‌ ಹೇಳಿದರು.

ಕುಂಜಾಲು ವಿಶ್ವಕೀರ್ತಿ ಹಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ ವರ್ಷದ ಆರಂಭೋತ್ಸವ ಸಮಾರಂಭದಲ್ಲಿ ಅವರು ಶಾಲಾ ಮಕ್ಕಳಿಗೆ ಪೆನ್‌ ವಿತರಿಸಿ ಮಾತನಾಡಿದರು.

ಇಂದು ಕನ್ನಡ ಮಾಧ್ಯಮ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ಸೇವೆ ಒದಗಿಸುತ್ತಿವೆ. ಶಿಕ್ಷಕರ ಕೊರತೆ ಇರುವುದು ನಿಜ. ಆದರೇ ಇಲಾಖೆ ಸಾಧ್ಯವಾದಷ್ಟು ತನ್ನ ಇತಿಮಿತಿಯೊಳಗೆ ಶಿಕ್ಷಕರನ್ನು ಹೊಂದಿಸಿಕೊಡುವ ಕೆಲಸ ಮಾಡುತ್ತಿದೆ. ವಿಶ್ವಕೀರ್ತಿಯಂತಹ ಶತಮಾನ ಕಂಡ ಶಾಲೆಗೆ ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಗಳು ಒಮ್ಮನಸ್ಸಿನಿಂದ ಬೆಂಬಲ ನೀಡಿದರೆ ಶಾಲೆ ಇನ್ನಷ್ಟು ಅಭಿವೃದ್ಧಿ ಕಾಣುತ್ತದೆ ಎಂದು ಹೇಳಿದರು.

ಆರೂರು ನೀಲಮ್ಮ ಶೆಡ್ತಿ ಚಾರಿಟೇಬಲ್‌ ಟ್ರಸ್ಟ್‌ನ ದೃಷ್ಟಿ ಆರೂರು ತಿಮ್ಮಪ್ಪ ಶೆಟ್ಟಿ ಮಾತನಾಡಿದರು.

ನೀಲಾವರ ಮಹಿಷಮರ್ದಿನಿ ದೇವಸ್ಥಾನದ ಧರ್ಮದರ್ಶಿ, ರಘುರಾಮ ಮಧ್ಯಸ್ಥ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಯಾವ ಮಗುವೂ ಶಿಕ್ಷಣದಿಂದ ಚಂಚಿತರಾಗಬಾರದು. ಮಾತೃಭಾಷೆ ಕನ್ನಡ ಉಳಿಯಬೇಕು ಎಂಬುವುದು ಸರ್ಕಾರದ ಘೋಷಣೆಯಾಗಿಯೇ ಉಳಿದಿರುವುದು ದುರಾದೃಷ್ಟಕರ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಗೆ ಬಣ್ಣ ಪೈಟಿಂಗ್‌ ಕೆಲಸ ನಿರ್ವಹಿಸಿದ ಸುರೇಶ್‌ ಕೊಡವೂರು, ಸ್ವಯಂಸೇವಕ ರಾಜೇಶ್‌ ದೇವಾಡಿಗ, ಸ್ವಚ್ಛತಾ ಸೇವೆ ಸಲ್ಲಿಸಿದ ಹರ್ಷಿತ್‌ ಹಾಗೂ ಬಳಗ, ನಾಗೇಶ ನಾಯ್ಕ, ಪ್ರಸಾದ್‌ ಆರೂರು, ಶೈಲಾ ಆರ್‌ ನಾಯಕ್‌, ಜ್ಯೋತಿ ಭಟ್‌, ಶಾಲೆಗೆ ಕಂಪ್ಯೂಟರ್‌ ಕೊಡುಗೆ ನೀಡಿದ ಬೇಬಿ ಸಾಲಿಯನ್‌ ಹಾಗೂ ಸಂತೋಷ್‌ ಪೂಜಾರಿ ಅವರನ್ನು ಶಾಳೆಯ ಪರವಾಗಿ ಗೌರವಿಸಲಾಯಿತು. ರವೀಂದ್ರ ರಾವ್‌ ನೀಡಲಿರುವ ಶಾಲಾ ಬ್ಯಾಗನ್ನು ಸಾಂಕೇತಿಕವಾಗಿ ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು.

ಶಾಲಾ ಸಂಚಾಲಕ ಧನಂಜಯ್‌ ಅಮೀನ್‌, ಆರೂರು ಗ್ರಾ.ಪಂ ಅಧ್ಯಕ್ಷ ಗುರುರಾಜ್‌ ರಾವ್‌, ನೀಲಾವರ ಗ್ರಾ.ಪಂ. ಉಪಾಧ್ಯಕ್ಷ ರಮೇಶ್‌ ಪೂಜಾರಿ, ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್‌, ನಿವೃತ್ತ ಶಿಕ್ಷಕ ಪಾಂಡುರಂಗ ನಾಯ್ಕ, ನಿರ್ವಹಣಾ ಸಮಿತಿ ಕೋಶಾಧ್ಯಕ್ಷ ಕೆ.ಟಿ ನಾಯ್ಕ ಇದ್ದರು.

ನೂತನ ನಿರ್ವಹಣಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಬಾಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೀಲಾವರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೀತಾ ಬಾಳಿಗ, ಮುಚ್ಚುವ ಭೀತಿಯಲ್ಲಿದ್ದ ಶಾಲೆಯನ್ನು ಉಳಿಸಿಕೊಳ್ಳುವಲ್ಲಿ ಗ್ರಾ.ಪಂ ವಹಿಸಿದ ಪಾತ್ರ ಮತ್ತು ಕಾಳಜಿಯನ್ನು ವಿವರಿಸಿದರು.

ಪಂಚಾಯತಿ ಅಧ್ಯಕ್ಷೆ ಬೇಬಿ ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕ ಬಾಲಚಂದ್ರ ಶೆಟ್ಟಿ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ರಾಜೇಶ್‌ ದೇವಾಡಿಗ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!