spot_img
Wednesday, March 4, 2026
spot_img

ಕುಂದಬಾರಂದಾಡಿ ಶಾಲೆಗೆ ‘ಹೊಳ್ಮಗೆ ಸಿಂಗಾರಿ ಶಿವರಾಮ ಶೆಟ್ಟಿ ಶಾಲೆ’ ಮರು ನಾಮಕರಣ ಅನಾವರಣ

ಕುಂದಾಪುರ: ಕುಂದಬಾರಂದಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಹಾಗೂ ಹೊಳ್ಮಗೆ ಸಿಂಗಾರಿ ಶಿವರಾಮ ಶೆಟ್ಟಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದು ಮರುನಾಮಕರಣ ಕಾರ್ಯಕ್ರಮ ಗುರುವಾರ ನಡೆಯಿತು.

ಬಗ್ವಾಡಿ ಮೆತ್ತಿನಮನೆ ಗೋಪಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಕ್ಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಮೊಗವೀರ ಅವರು ಶಾಲೆಯ ನೂತನ ನಾಮಫಲಕ ಅನಾವರಣ ಮಾಡಿದರು.

ಮುಂಬಯಿಯ ಫೆರ್ಮೆಂಟಾ ಬಯೋಟೆಕ್ ಚೇರ್‌ಮೆನ್ ಪ್ರದೀಪ್ ಚಂದನ್ ಅವರು ನೂತನವಾಗಿ ಆರಂಭಗೊಂಡ ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಉದ್ಘಾಟಿಸಿದರು.

ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಮಾತನಾಡಿ, ಸರಕಾರಿ ಶಾಲೆಗಳ ಸುಧಾರಣೆಗೆ ಸ್ಥಳೀಯ ದಾನಿಗಳು, ವಿದ್ಯಾಭಿಮಾನಿಗಳು, ಹಳೆವಿದ್ಯಾರ್ಥಿಗಳ ಸಹಕಾರ, ನೆರವು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಶೋಭಾ ಬಿ.ಎನ್ ಶೆಟ್ಟಿ ದಂಪತಿಯ ಸಹಿತ ಊರಿನ ಹಲವಾರು ದಾನಿಗಳ ಕೊಡುಗೆ ನಿಜಕ್ಕೂ ಶ್ಲಾಘನೀಯ ಎಂದರು.

ಶಾಲೆಯ ಮಹಾ ಪೋಷಕರಾದ ನಿವೃತ್ತ ಅಧಿಕಾರಿ ಬಿ.ಎನ್.ಶೆಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಈ ಶಾಲೆಯ ಪ್ರಗತಿಗೆ ನಮ್ಮ ಕುಟುಂಬ ಸದಾ ಸಹಕಾರ ನೀಡಲಿದೆ. ಈ ಶಿಕ್ಷಣ ಸಂಸ್ಥೆಯ ಅಗತ್ಯವಾದ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 8ನೇ ರ್‍ಯಾಂಕ್ ಪಡೆದ ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ಚಿತ್ತಾರ ಎನ್.ಪೂಜಾರಿ ಹಾಗೂ 10ನೇ ರ್‍ಯಾಂಕ್ ಪಡೆದ ಆತ್ರಾಡಿ ವಿಜಯ ಮಕ್ಕಳ ಕೂಟದ ನಿಶ್ಮಿತಾ ಜಿ ಪೂಜಾರಿ ಅವರನ್ನು ಸನ್ಮಾನಿಸಿ, ಪ್ರೋತ್ಸಾಹಧನ ನೀಡಲಾಯಿತು.

ಹಕ್ಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಭಾಶ್ ಶೆಟ್ಟಿ ಹೊಳ್ಮಗೆ, ಸದಸ್ಯರಾದ ರತ್ನಜಿ ಶ್ರೀಯಾನ್, ಭಾಸ್ಕರ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್, ಪ್ರಧಾನ ಪೋಷಕರಾದ ಶೋಭಾ ಬಿ.ಎನ್ ಶೆಟ್ಟಿ, ಕಲ್ಪನಾ ಅಶೋಕ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಶಂಕರ ಹೆಗ್ಡೆ, ರವಿ ಪೂಜಾರಿ, ಸೂರ ಕೆ ಮೊಗವೀರ, ಹೊಸಾಡು ಕ್ಲಸ್ಟರ್ ಸಿ.ಆರ್.ಪಿ ಸತೀಶ್ ಶೆಟ್ಟಿ, ಎಸ್.ಡಿ.ಎಂ.ಸಿ‌ಅಧ್ಯಕ್ಷ ವಿಶ್ವನಾಥ ಗಾಣಿಗ ಹಾಗೂ ಎಸ್.ಡಿ.ಎಂ.ಸಿ, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಚೆನ್ನಕೇಶವ ಲಯನ್ಸ್ ಕ್ಲಬ್ ನ ಸುರೇಶ್ ಪೂಜಾರಿ ಬಸವನಮಕ್ಕಿ ಬಗ್ವಾಡಿ ರಾಜೀವ ಶೆಟ್ಟಿ,, ಕುಂದಬಾರಂದಡಿ -ಹಕ್ಲಾಡಿ ಲಯನ್ಸ್ ಕ್ಲಬ್ , ಚೆನ್ನಕೇಶವ ಯುವಕ ಮಂಡಲ, ಚಿಕ್ಕು ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕ ಶಿವರಾಜ್ ಭಂಡಾರಿ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂಜೀವ ಬಿಲ್ಲವ, ಶಿಕ್ಷಕಿಯರಾದ ತಾರಾ, ವಸಂತಿ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಶಿಕ್ಷಕಿಯರಾದ ದಿವ್ಯಾ ವಂದಿಸಿದರು. ಶ್ರುತಿ ಕಾರ್ಯಕ್ರಮಕ್ಕೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!