spot_img
Wednesday, March 18, 2026
spot_img

ಸರ್ವ ಪಕ್ಷ ನಿಯೋಗ : ಭಯೋತ್ಪಾದನೆ ಬಗ್ಗೆ ಭಾರತದ ನಿಲುವನ್ನು ವಿವಿಧ ರಾಷ್ಟ್ರಗಳ ಮುಂದೆ ಹಂಚಿಕೊಂಡ ಭಾರತ !

 

 

ಜನಪ್ರತಿನಿಧಿ (ನವದೆಹಲಿ) : ಪಾಕಿಸ್ತಾನ ಜೊತೆಗಿನ ಬಿಕ್ಕಟ್ಟಿನ ನಡುವೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸಲು ಭಾರತದ ಹೊಸ ವಿಧಾನವನ್ನು ತಿಳಿಸಲು ಭಾರತೀಯ ಸಂಸದರ ಸರ್ವಪಕ್ಷ ನಿಯೋಗಗಳು ಭಾನುವಾರ ವಿವಿಧ ರಾಷ್ಟ್ರಗಳ ನಾಯಕರನ್ನು ಭೇಟಿಯಾದವು.

ಅಮೆರಿಕ, ಬಹ್ರೇನ್, ಕತಾರ್, ದಕ್ಷಿಣ ಕೊರಿಯಾ ಮತ್ತು ಸ್ಲೋವೇನಿಯಾ ನಾಯಕರನ್ನು ಭೇಟಿಯಾದ ಭಾರತೀಯ ನಿಯೋಗಗಳು, ಭಾರತದ ಸಂದೇಶ ಕುರಿತು ತಮ್ಮ ಸಹವರ್ತಿಗಳಿಗೆ ತಿಳಿಸಿದರು.ಶಿಕ್ಷೆಯಾಗದೆ ಭಯೋತ್ಪಾದನೆ ಹೋಗಲ್ಲ. ಹಿಂಸೆ ಜೊತೆಗಿನ ಮಾತುಕತೆಯಿಂದ ಜೊತೆಗೂಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ಪಾಕಿಸ್ತಾನದಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸಲು ಭಾರತವು ಈಗ ಹೊಸ ವಿಧಾನವನ್ನು ಹೊಂದಿದೆ ಮತ್ತು ಅಂತಹ ಅಪರಾಧಗಳಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆಯಾಗದೆ ಭಯೋತ್ಪಾದನೆ ನಿರ್ಮೂಲನೆ ಆಗಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಗಯಾನಾಕ್ಕೆ ತೆರಳುವ ಮುನ್ನಾ ನ್ಯೂಯಾರ್ಕ್‌ನಲ್ಲಿ ನಡೆದ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಶಿ ತರೂರ್ ಈ ಹೇಳಿಕೆ ನೀಡಿದರು. ಇದಕ್ಕೂ ಮುನ್ನಾ ಸರ್ವ ಪಕ್ಷ ನಿಯೋಗದ ಸದಸ್ಯರು 9/11 ಭಯೋತ್ಪಾದಕ ದಾಳಿಯ ರಾಷ್ಟ್ರೀಯ ಸ್ಮಾರಕದಲ್ಲಿ ಗೌರವ ಸಲ್ಲಿಸಿದರು.

ಬಹ್ರೇನ್‌ಗೆ ತೆರಳಿದ ಸರ್ವಪಕ್ಷದ ಭಾರತೀಯ ಸಂಸದೀಯ ನಿಯೋಗ, ಭಾನುವಾರ ಬಹ್ರೇನ್‌ನ ಉಪ ಪ್ರಧಾನ ಮಂತ್ರಿ ಶೇಖ್ ಖಾಲಿದ್ ಬಿನ್ ಅಬ್ದುಲ್ಲಾ ಅಲ್ ಖಲೀಫಾ ಅವರಿಗೆ ಭಾರತ ಎದುರಿಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ ಸವಾಲು ಮತ್ತು ಅದನ್ನು ಎದುರಿಸಲು ಭಾರತದ ದೃಢ ಸಂಕಲ್ಪವನ್ನು ವಿವರಿಸಿತು.

ಏಪ್ರಿಲ್ 22 ರಂದು 26 ಜನರು ಸಾವನ್ನಪ್ಪಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತದ ಶೂನ್ಯ ಸಹಿಷ್ಣುತೆಯ ನೀತಿಯ ಬಗ್ಗೆ ಪ್ರತ್ಯೇಕ ಭಾರತೀಯ ನಿಯೋಗಗಳು ದಕ್ಷಿಣ ಕೊರಿಯಾ ಮತ್ತು ಸ್ಲೊವೇನಿಯಾದ ರಾಜಕೀಯ ನಾಯಕರಿಗೆ ವಿವರಿಸಿದರು.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸರ್ವಪಕ್ಷ ನಿಯೋಗಗಳ ಪ್ರಯತ್ನಗಳನ್ನು ಶ್ಲಾಘಿಸಿದ್ದು, ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯನ್ನು ಘೋಷಿಸುವಲ್ಲಿ ಭಾರತವು ಒಟ್ಟಾಗಿ ನಿಂತಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!