spot_img
Saturday, February 14, 2026
spot_img

ಬ್ರಹ್ಮಾವರ | ತಾಲೂಕಿನಾದ್ಯಂತ ಭಾರಿ ಮಳೆ : ಅಪಾರ ಹಾನಿ

ಜನಪ್ರತಿನಿಧಿ (ಬ್ರಹ್ಮಾವರ) : ಬ್ರಹ್ಮಾವರ ತಾಲೂಕಿನಾದ್ಯಂತ ಕಳೆದೊಂದು ದಿನದಿಂದ ಸುರಿದ ಭಾರಿ ಗಾಳಿ ಮಳೆಗೆ ಹಲವೆಡೆ ರಸ್ತೆ ಸಂಚಾರದಲ್ಲಿ ವ್ಯತ್ಯಯ, ಮನೆ ಮತ್ತು ವಿದ್ಯುತ್‌ ಕಂಬಗಳ ಮೇಲೆ ಮರ ಬಿದ್ದು ಅಪಾರ ಹಾನಿಯಾಗಿದೆ.

ಕೇವಲ ಏಳೆಂಟು ಗಂಟೆಯಲ್ಲಿ ೧೪.೫ ಸೆಂ.ಮೀ ಮಳೆಯಾಗಿದ್ದು, ಗಾಳಿಯೂ ರಭಸವಾಗಿತ್ತು. ಬ್ರಹ್ಮಾವರ ಹೆಬ್ರಿ ರಾಜ್ಯ ಹೆದ್ದಾರಿಯ ಚಾಂತಾರಿನಲ್ಲಿ ರೈಲ್ವೇ ಸೇತಯವೆ ಕೆಳಗೆ ರಸ್ತೆಯಲ್ಲಿ ಎರಡು ಅಡಿಗಿಂತಲೂ ಹೆಚ್ಚು ನೀರು ನಿಂತಿದ್ದರಿಂದ ಕೆಲಕಾಲ ವಾಹನ ಸವಾರರು ಪರದಾಡುವಂತಾಯಿತು.

ಕೆಲವು ಬೈಕ್‌ ಗಳು ನೀರಿನಲ್ಲಿಯೇ ಸಾಗಿದ್ದರಿಂದ ಹಾಳಾಗಿರುವ ಕುರಿತಾಗಿಯೂ ವರದಿಯಾಗಿದೆ.

ಪರಿಸರದ ಕುಂಜಾಲು, ಚಾಂತಾರು, ಪೇತ್ರು, ಚೇರ್ಕಾಡಿ, ಆರೂರು, ಹಾವಂಜೆ ಪರಿಸರದಲ್ಲಿ ಬೀಸಿದ ಗಾಳಿಗೆ ಅನೇಕ ಮರಗಳು ವಿದ್ಯುತ್‌ ತಂತಿಗಳ ಮೇಲೆ ಬಿದ್ದು ೨೫ಕ್ಕೂ ಹೆಚ್ಚು ಕಂಬಗಳಿಗೆ ಹಾನಿಯಾಗಿದೆ. ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಾಯವಾಗಿತ್ತು. ಮಳೆಯಲ್ಲೇ ಮೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಇನ್ನು, ಬ್ರಹ್ಮಾವರ ಕೃಷಿ ಹವಾಮಾನ ಘಟಕದ ತಾಂತ್ರಿಕ ಅಧಿಕಾರಿ ಪ್ರವೀಣ್‌ ಕೆ.ಎಂ. ಸೂಚನೆಯಂತೆ ಜಿಲ್ಲೆಯಲ್ಲಿ ಇಂದು(ಬುಧವಾರ) ರೆಡ್‌ ಅಲರ್ಟ್‌, ಗುರುವಾರ ಆರೆಂಜ್‌ ಅಲರ್ಟ್‌ ಇದ್ದು, ಭಾರಿ ಮಳೆಯೊಂದಿಗೆ ೧೫ ಕಿ. ಮೀ -೩೦ ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಕೃಷಿಕರು ಕೃಷಿಗೆ ಗೊಬ್ಬರೆ, ರಾಸಾಯನಿಕ ಸಿಂಪರಣೆಯನ್ನು ನಾಲ್ಕೈದು ದಿನಗಳ ಬಳಿಕ ಮಾಡಿದರೆ ಉತ್ತಮ ಎಂದು ಸೂಚನೆ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!