spot_img
Wednesday, April 1, 2026
spot_img

ಕೇರಳಕ್ಕೆ ನಾಲ್ಕೈದು ದಿನಗಳಲ್ಲಿ ಮುಂಗಾರು ಪ್ರವೇಶ ಸಾಧ್ಯತೆ : ಹವಾಮಾನ ಇಲಾಖೆ

ಜನಪ್ರತಿನಿಧಿ (ನವ ದೆಹಲಿ) : ಮುಂದಿನ ನಾಲ್ಕೈದು ದಿನಗಳಲ್ಲಿ ನೈರತ್ಯ ಮಾನ್ಸೈನ್‌ ಕೇರಳಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು (ಮಂಗಳವಾರ) ಹೇಳಿದೆ.

ಮೇ ೨೭ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆಗೆ ಈಗಾಗಲೇ ಮುನ್ಸೂಚನೆ ನೀಡಿತ್ತು.

ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್‌ ಜೂನ್‌ ೧ ರ ವೇಳೆಗೆ ಕೇರಳಕ್ಕೆ ಪ್ರವೇಶಿಸುತ್ತದೆ. ಒಂದು ವೇಳೆ ನಿರೀಕ್ಷೆಯಂತೆ ಈ ಬಾರಿ ನಾಲ್ಕೈದು ದಿನಗಳಲ್ಲಿ ಮುಂಗಾರು ಪ್ರವೇಶಿಸಿದರೆ, ೨೦೦೯ರ ನಂತರ ಭಾರತದ ಮುಖ್ಯ ಭೂಭಾಗದಲ್ಲಿ ವಾಡಿಕೆಗಿಂತ ಮುಂಚಿತವಾಗಿ ಮುಂಗಾರು ಆರಂಭವಾಗುತ್ತಿರುವುದು ಇದೇ ಮೊದಲು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ, ನೈಋತ್ಯ ಮಾನ್ಸೂನ್‌ ಜುಲೈ ೮ರ ವೇಳೆಗೆ ಇಡೀ ದೇಶವನ್ನು ಮುಂಗಾರು ಆವರಿಸಲಿದೆ. ಸೆಪ್ಟೆಂಬರ್‌ ೧೭ರ ಸುಮಾರಿಗೆ ಇದು ವಾಯವು ಭಾರತದಿಂದ ಸ್ಥಳಾಂತರಗೊಳ್ಳಲು ಆರಂಭಿಸುತ್ತದೆ. ಅಕ್ಟೋಬರ್‌ ೧೫ರ ಹೊತ್ತಿಗೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.

ಕಳೆದ ವರ್ಷ ಮೇ ೩೦ರಂದು, ೨೦೨೩ರಲ್ಲಿ ಜೂನ್‌ ೮, ೨೦೨೨ ರಲ್ಲಿ ಮೇ ೨೯, ೨೦೨೧ ರಲ್ಲಿ ಜೂನ್‌ ೩, ೨೦೨೦ರಲ್ಲಿ ಜೂನ್‌ ೧, ೨೦೧೯ರಲ್ಲಿ ಜೂನ್‌೮ ಹಾಗೂ ೨೦೧೮ರಲ್ಲಿ ಮೇ ೨೯ ರಂದು ಮಾನ್ಸೂನ್‌ ಕೇರಳಕ್ಕೆ ಪ್ರವೇಶಿಸಿತ್ತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!