spot_img
Monday, March 16, 2026
spot_img

ಕಕ್ಕುಂಜೆ: ಶ್ರೀ ವರ್ತೆ ಪಂಜುರ್ಲಿ ದೈವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ

ಹಾಲಾಡಿ: ಕಕ್ಕುಂಜೆ ಗ್ರಾಮದ ಶೇರ್ಡಿ ಕಂಡಿಮಕ್ಕಿ ಕುಟುಂಬಸ್ಥರ ಶ್ರೀ ವರ್ತೆ ಪಂಜುರ್ಲಿ ದೈವಸ್ಥಾನದಲ್ಲಿ ಮೇ 15ರಂದು ಪ್ರತಿಷ್ಠಾ ವರ್ಧಂತಿ ಉತ್ಸವದ ಪ್ರಯುಕ್ತ ಕಲಾ ಹೋಮ, ಮಹಾಪೂಜೆ ಮತ್ತು ದೈವದರ್ಶನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು

ರಾತ್ರಿ ಆಜ್ರಿ ಚೋನಮನೆ ಶ್ರೀ ಶನೀಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಿತು. ಈ ಸಂದರ್ಭದಲ್ಲಿ ಮೇಳದ ಪ್ರಧಾನ ಭಾಗವತರಾದ ಆರ್ಗೋಡು ಸದಾನಂದ ಶೆಣೈಯವರನ್ನು ಯಕ್ಷ ಮಂದಾರ ಯಕ್ಷಾಭಿಮಾನಿ ಬಳಗ ಹಾಲಾಡಿ ಇವರು ಸನ್ಮಾನಿಸಿದರು.

ವೇದಿಕೆಯಲ್ಲಿ ವೇ. ಬ್ರ. ಶ್ರೀಪತಿ ಭಟ್, ಕಕ್ಕುಂಜೆ. ಹಾಲಾಡಿ ಮರ್ಲು ಚಿಕ್ಕು ದೇವಸ್ಥಾನದ ಆಡಳಿತ ಧರ್ಮದರ್ಶಿ ಅಮರನಾಥ ಶೆಟ್ಟಿ ಹಾಲಾಡಿ, ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶೇಖರ ಶೆಟ್ಟಿ ಗೈನಾಡಿ, ಹಿರಿಯರಾದ ಶಿವರಾಮ ಶೆಟ್ಟಿ ಕಂಬಿಕಲ್ಲು, ಶೇಖರ ಶೆಟ್ಟಿ ವಡ್ಡಮೇಶ್ವರ, ಶನೀಶ್ವರ ದೇವಸ್ಥಾನದ ಪಾತ್ರಿಗಳಾದ ಮಂಜುನಾಥ ಪೂಜಾರಿ ಗಿಳಿಯಾರು, ವರ್ತೆ ಪಂಜುರ್ಲಿ ದೇವಸ್ಥಾನದ ಪಾತ್ರಿಗಳಾದ ಬಾಬಣ್ಣ ಶೆಟ್ಟಿ ಹಾಲಾಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೈವಸ್ಥಾನದ ಸಂಪೂರ್ಣ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ, ಮಾರ್ಗದರ್ಶನ ಮಾಡಿದ ವೇ.ಬ್ರ. ಶ್ರೀಪತಿ ಭಟ್ಟರಿಗೆ ಶೇರ್ಡಿ ಕಂಡಿಮಕ್ಕಿ ಕುಟುಂಬಸ್ಥರ ಪರವಾಗಿ ಹಾಲಾಡಿ ಬಾಬಣ್ಣ ಶೆಟ್ಟಿಯವರು ಗೌರವಿಸಿದರು.

ಯಕ್ಷ ಮಂದಾರದ ಶ್ರೀಮತಿ ಅಮೃತಾ ಶೆಟ್ಟಿ, ಮುಂಬೈ ಸನ್ಮಾನ ಪತ್ರವನ್ನು ವಾಚಿಸಿದರು. ಯಕ್ಷಮಂದಾರದ ಹಾಲಾಡಿ ಸಂತೋಷ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!