spot_img
Sunday, February 15, 2026
spot_img

ಕುಂದಾಪುರದಲ್ಲಿ ‘ಗ್ರಾಮ ಸ್ವರಾಜ್ಯ ಗತಿಸ್ಥಿತಿ ಚಿಂತನ’ ಕಾರ್ಯಕ್ರಮ | ವಿಕೇಂದ್ರೀಕರಣ ಹಿನ್ನೆಡೆಗೆ ಅಧಿಕಾರ ಕೇಂದ್ರೀಕೃತವಾಗುತ್ತಿರುವುದು ಕಾರಣ-ಟಿ.ಆರ್.ರಘುನಂದನ್

ಕುಂದಾಪುರ, ಏ.27: ಜನಪ್ರತಿನಿಧಿ ಪತ್ರಿಕೆಯ 25ನೇ ವರ್ಷದ ಪ್ರಯುಕ್ತ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ, ಗ್ರಾಮ ಪಂಚಾಯತ್ ಹಕ್ಕೋತ್ತಾಯ ಆಂದೋಲನದ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 27 ಕುಂದಾಪುರದ ಬಂಟರ ಯಾನೆ ನಾಡವರ ಸಂಘದ ಆರ್.ಎನ್.ಶೆಟ್ಟಿ ಸಭಾ ಭವನದಲ್ಲಿ ನೆಡೆದ ಗ್ರಾಮ ಸ್ವರಾಜ್ಯ ಗತಿಸ್ಥಿತಿ ಚಿಂತನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಶಾಸಕದ್ವಯರಾದ ಎ.ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರುರಾಜ ಗಂಟಿಹೊಳೆ ಕಾರ್ಯಕ್ರಮ ಉದ್ಘಾಟಿಸಿದರು.

ಉದ್ಘಾಟನಾ ಮಾತುಗಳನ್ನಾಡಿದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ರಾಜ್ಯದಲ್ಲಿ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ವ್ಯವಸ್ಥೆಗೆ ಚುನಾವಣೆ ಆಗದೆ ನಾಲ್ಕು ವರ್ಷಗಳೆ ಆಗಿವೆ. ಚುನಾವಣೆ ನಡೆಸುವಲ್ಲಿ ವಿಫಲತೆ ಕಾಣುತ್ತಿದ್ದೇವೆ. ಇದು ಪಂಚಾಯತ್ ರಾಜ್ ವ್ಯವಸ್ಥೆಗೆ ಹಿನ್ನೆಡೆ. ಇದರ ನೇರ ಪರಿಣಾಮ ಅಭಿವೃದ್ಧಿಯ ಮೇಲೆ ಆಗಲಿದೆ. ಅಧಿಕಾರಿಗಳ ಆಡಳಿತ ಅನುಭವ ಜನಸಾಮಾನ್ಯರಿಗೆ ಆಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದೆ, ಅಧಿಕಾರಿಗಳ ವ್ಯವಸ್ಥೆಯಡಿ ನಡೆಯುವ ಸ್ಥಿತಿ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ದವಾಗಿ ಚುನಾವಣೆಗಳು ನಡೆಯಬೇಕು. ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳಬೇಕು ಎಂದರು.

ಇನ್ನೋರ್ವ ಉದ್ಘಾಟಕರಾದ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಮಾತನಾಡಿ, ಗ್ರಾಮ ಆಡಳಿತಕ್ಕೆ ವಿಶೇಷ ಮಹತ್ವ ಹಿಂದನಿಂದಲೂ ಇತ್ತು. ಹಿಂದೆ ಪಂಚಾಯಿತಿ ಕಟ್ಟೆಗಳು ಇದ್ದವು. ಅಲ್ಲಿನ ತೀರ್ಮಾನಗಳು ನಿರ್ಣಯಕವಾಗುತ್ತಿದ್ದವು. ಇವತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ವಿಕೇಂದ್ರೀಕರಣ ವ್ಯವಸ್ಥೆಯಾಗಿದೆ. ಈ ನಡುವೆ ಅಧಿಕಾರಿಗಳ ಹಸ್ತಾಕ್ಷೇಪ, ಪಂಚಾಯಿತಿಗಳ ಅಧಿಕಾರ ಕುಂಠಿತವಾಗುತ್ತಿವೆ ಇತ್ಯಾದಿ ವಿಚಾರಗಳು ಚರ್ಚೆಯಾಗುತ್ತಿವೆ. ಸಮಸ್ಯೆಗಳು ಕೂಡಾ ಹೆಚ್ಚಾಗುತ್ತಿವೆ. ಈಗಲೂ ಕೂಡಾ ಪಂಚಾಯತ್ ಆಡಳಿತ ನಿರ್ಣಯವಾಗಲೂ ವಿಕೇಂದ್ರೀಕರಣ ವ್ಯವಸ್ಥೆ ಬಲಗೊಳ್ಳಬೇಕು, ಪಂಚಾಯತಿಗಳಿಗೆ ಹೆಚ್ಚಿನ ಶಕ್ತಿ ಸಿಗುವಂತಾಗಬೇಕು ಎಂದರು.

ರಾಜ್ಯ, ಕೇಂದ್ರ ಪಂಚಾಯತ್ ರಾಜ್ ಇಲಾಖೆ ಇದರ ವಿಶ್ರಾಂತ ಕಾರ್ಯದರ್ಶಿಗಳಾದ ಟಿ.ಆರ್.ರಘುನಂದನ್ ದಿಕ್ಸೂಚಿ ಭಾಷಣ ಮಾಡುತ್ತಾ, ಬಡತನ ನಿರ್ಮೂಲನ ಮಾಡಲು ಪಂಚಾಯಿತಿಗಳಿಂದ ಮಾತ್ರ ಸಾಧ್ಯವೆಂದು ಅಬ್ದುಲ್ ನಜೀರ್ ಸಾಬ್ ನಂಬಿದ್ದರು. ರಾಮಕೃಷ್ಣ ಹೆಗಡೆ ಮತ್ತು ಅಬ್ದುಲ್ ನಜೀರ್ ಸಾಬ್ ರಾಜಕೀಯ ಪರಿಸ್ಥಿತಿಯ ನಡುವೆಯೂ ಗ್ರಾಮೀಣಾಭಿವೃದ್ಧಿಯಲ್ಲಿ ಬದಲಾವಣೆ ಮಾಡಿ ತೋರಿದ್ದರು. ಇವತ್ತು ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಹಿನ್ನಡೆಯಲ್ಲಿದೆ. ಕೇರಳ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ ಕರ್ನಾಟಕದಲ್ಲಿ ಆಗುತ್ತಿಲ್ಲ. ಇಲ್ಲಿ ಅಧಿಕಾರ ವಿಕೇಂದ್ರೀಕರಣ ಆಗುವ ಬದಲು ಅಧಿಕಾರ ಕೇಂದ್ರೀಕೃತಗೊಳ್ಳುತ್ತಿದೆ. ಚುನಾವಣೆ ಮುಂದಕ್ಕೆ ಹಾಕುವಂತಹ ವ್ಯವಸ್ಥಿತ ತಂತ್ರಗಳನ್ನು ಸರಕಾರಗಳು ಮಾಡುತ್ತಿವೆ. ಮೀಸಲಾತಿ, ಕ್ಷೇತ್ರ ವಿಂಗಡಣೆ ಇತ್ಯಾದಿಗಳ ನೆಪವೊಡ್ಡಿ, ಆಕ್ಷೇಪಣೆಯ ಹೆಸರಲ್ಲಿ ನ್ಯಾಯಾಲಯಕ್ಕೆ ಹೋಗುವ ಮೂಲಕ ಪರೋಕ್ಷವಾಗಿ ಚುನಾವಣೆಯನ್ನು ಹಿಂದೆ ಹಿಂದೆ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಚುನಾವಣೆ ನಡೆಸದೆ ಆಡಳಿತಾಧಿಕಾರಿಗಳ ನೇಮಕ ಮಾಡಿ ಅಸಂವಿಧಾನಿಕ ಆಡಳಿತ ನಡೆಸಲಾಗುತ್ತದೆ. ಇತ್ತ ಅಧಿಕಾರಿಗಳು ವಿಕೇಂದ್ರೀಕರಣಕ್ಕೆ ಅಧಿಕಾರಿಗಳು ವಿರೋಧ ಮಾಡುತ್ತಿದ್ದಾರೆ. ಗ್ರಾಮ ಸ್ವರಾಜ್ಯ ಕಾಯ್ದೆ ಸರಿಯಾದ ಪ್ರಮಾಣದಲ್ಲಿ ಅನುಷ್ಠಾನವಾಗುತ್ತಿಲ್ಲ. ಪಂಚಾಯತ್ ರಾಜ್ ಒಕ್ಕೂಟ ವ್ಯವಸ್ಥೆಯ ಮೂಲಕ ಪ್ರಶ್ನಿಸುವಂತಾಗಬೇಕು. ರಾಜ್ಯದ 6300 ಗ್ರಾಮ ಪಂಚಾಯುತ್‌ಗಳು ಗ್ರಾಮ ಸ್ವರಾಜ್ಯ ಬಲಿಷ್ಠಗಳಿಸುವಲ್ಲಿ ಒಂದಾಗಬೇಕು ಎಂದರು.

ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಸೂರು ಇದರ ಮಾಜಿ ತರಬೇತಿ ಸಂಯೋಜಕರಾದ ವಿಲ್ ಫ್ರೆಡ್ ಡಿಸೋಜ ಪ್ರತ್ರಿಕ್ರಿಯೆ ನೀಡಿ, ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ ಕರ್ನಾಟಕದ ಪಾಳಿಗೆ ವಿಷಾದದಿನ ಆಗುತ್ತಿದೆ. ಒಂದೊಂದು ಸರಕಾರಗಳು ಒಂದೊಂದು ಕಾನೂನು ತರುತ್ತಿವೆ. ಸುಸ್ಥಿರತೆ ಇಲ್ಲ. ಅಧಿಕಾರದ ವಿಕೇಂದ್ರೀಕರಣದ ಜೊತೆಗೆ ಭೃಷ್ಟಚಾರದ ವಿಕೇಂದ್ರೀಕರಣ ಆಗುತ್ತಿದೆ. ಗ್ರಾಮ ಸ್ವರಾಜ್ಯದ ಬಗ್ಗೆ ಸ್ಥಳೀಯಾಡಳಿತದ ಪ್ರತಿನಿಧಿಗಳಾದ ವಿಧಾನಪರಿಷತ್ ಸದಸ್ಯರು ಮಾತನಾಡಬೇಕು, ಅವರು ಈ ಬಗ್ಗೆ ವಕಾಲತ್ತು ವಹಿಸಬೇಕು ಎಂದರು.

ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಗೌರವಾಧ್ಯಕ್ಷರಾದ ಎಸ್.ಜನಾರ್ದನ ಮರವಂತೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂವಾದ ಕಾರ್ಯಕ್ರಮವನ್ನು ಪಂಚಾಯತ್ ರಾಜ್ ಒಕ್ಕೂಟದ ಗೌರವ ಸಲಹೆಗಾರರಾದ ಟಿ.ಬಿ ಶೆಟ್ಟಿ ನಿರ್ವಹಿಸಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಸಮಾರೋಪ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ, ಕೇಂದ್ರ ಪಂಚಾಯತ್ ರಾಜ್ ಇಲಾಖೆ ಇದರ ವಿಶ್ರಾಂತ ಕಾರ್ಯದರ್ಶಿಗಳಾದ ಟಿ.ಆರ್.ರಘುನಂದನ್ ಹಾಗೂ ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಸೂರು ಇದರ ಮಾಜಿ ತರಬೇತಿ ಸಂಯೋಜಕರಾದ ವಿಲ್ ಫ್ರೆಡ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

ಗಣೇಶ ಗಂಗೊಳ್ಳಿ ಜನಾಧಿಕಾರ ಗೀತೆ ಹಾಡಿದರು. ಹಕ್ಕೋತ್ತಾಯ ಆಂದೋಲನದ ಪ್ರಮುಖರಾದ ಶ್ರೀನಿವಾಸ ಗಾಣಿಗ ಸ್ವಾಗತಿಸಿದರು. ಸೂಲಿಯಣ್ಣ ಶೆಟ್ಟಿ ವಂದಿಸಿದರು. ಜನಪ್ರತಿನಿಧಿ ಪತ್ರಿಕೆಯ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಹಾಗೂ ಶ್ರೀರಾಜ್ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!