spot_img
Saturday, March 21, 2026
spot_img

ಕೋಟ: ಪ್ರಸಿದ್ಧ ಯಕ್ಷ ಸ್ತ್ರೀ ವೇಷಧಾರಿ ಮಾಧವ ನಾಗೂರು ಬೆಳ್ಳಿ ಪಥ ಆಮಂತ್ರಣ ಬಿಡುಗಡೆ

ಕೋಟ: ಯಕ್ಷಗಾನ ಕಲಾಕ್ಷೇತ್ರಕ್ಕೆ ನಾಗೂರು ಕುಟುಂಬದ ಕೊಡುಗೆ ಅನನ್ಯವಾದದ್ದು ಎಂದು ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ನಾಯಕ ಹೇಳಿದರು.

ಅವರು ಭಾನುವಾರ ಕೋಟದ ಕಾಸನಗುಂದು ಪರಿಸರದಲ್ಲಿ ಅಮೃತೇಶ್ವರಿ ಮೇಳದ ರಂಗಸ್ಥಳದಲ್ಲಿ ಇದೇ ಮೇ.11ರಂದು ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ಯಕ್ಷಕಲಾವಿದ ಮಾದವ ನಾಗೂರು ಇಪ್ಪತೈದು ಸಂವತ್ಸರದ ಬೆಳ್ಳಿಪಥ ಶೀರ್ಷಿಕೆಯಡಿ ನಡೆಯುವ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ಯಕ್ಷಗಾನ ಕಲಾವಿದರ ಜೀವನ ನಿರ್ವಹಣೆ ಅವರು ಕಲಾಕ್ಷೇತ್ರಕ್ಕಾಗಿ ತಮ್ಮಸಮರ್ಪಣೆಗೊಳಿಸುವಿಕೆಯಿಂದ ವ್ಯಯಕ್ತಿಕ ಜೀವನದ ಬಗ್ಗೆ ಚಿಂತಿಸದೆ ಅವರ ಕಾರ್ಯಭಾಹುಳ್ಯ ಅತ್ಯಂತ ಶೇಷ್ಠವಾದದ್ದು ಬಳಸಿಕೊಳ್ಳವರ ಜತೆ ಹೊಗುವುದಕ್ಕಿಂತ ಬೆಳೆಸಿದವರ ಜತೆ ಸಾಂಗತ್ಯ ಸಂಪದನೆ ಕಲಾವಿದನನ್ನು ಬಹು ಎತ್ತರಕ್ಕೆ ಕೊಂಡ್ಯೊಯ್ಯಬಲ್ಲದು ಇದಕ್ಕೆ ಆನಂದ್ ಸಿ ಕುಂದರ್ ರವರಂತವರು ಸಾಕ್ಷಿ ಈ ದಿಸೆಯಲ್ಲಿ ಯಕ್ಷಗಾನ ಕಲಾವಿದರ ಭವಣೆಯನ್ನು ಅವರ ಕಲಾರಾಧನೆಯನ್ನು ಗೌರವಿಸಿ ಅವರ ನೆರವಿಗೆ ಎಲ್ಲರೂ ಧಾವಿಸಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಲಾವಿದ ಮಾಧವ ನಾಗೂರು ಬೆಳ್ಳಿ ಪಥ ಅಭಿನಂದನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಅಮೃತೇಶ್ವರಿ ದೇಗುಲದ ಟ್ರಸ್ಟಿಗಳಾದ ಎಂ ಶಿವ ಪೂಜಾರಿ,ಸುಬಾಷ್ ಶೆಟ್ಟಿ, ಜನತಾ ಸಮೂಹ ಸಂಸ್ಥೆಗಳ ನಿರ್ದೇಶಕ ರಕ್ಷಿತ್ ಕುಂದರ್,ಅಮೃತೇಶ್ವರಿಮೇಳದ ವ್ಯವಸ್ಥಾಕ ಕೋಟ ಸುರೇಶ್ ,ಪ್ರಧಾನ ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ,ಸಮಿತಿಯ ಸಂತೋಷ್ ಕುಮಾರ್ ಕೋಟ,ಕಲಾವಿದ ಮಾಧವ ನಾಗೂರು,ಸಹಕಲಾವಿದರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಮೃತೇಶ್ವರಿ ದೇಗುಲದ ಟ್ರಸ್ಟಿ ಚಂದ್ರ ಆಚಾರ್ ಸ್ವಾಗತಿಸಿ ನಿರೂಪಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!