spot_img
Thursday, March 19, 2026
spot_img

ಸಿನ್ಸ್ 1999 ಶ್ವೇತಯಾನ ಸಮಾಪನ ‘ಮಧ್ಯಮಾವತಿ’ | ಕಲೆಗೆ ಯಶಸ್ವೀ ಕಲಾವೃಂದದ ಕೊಡುಗೆ ಅನನ್ಯ-ಆನಂದ ಸಿ. ಕುಂದರ್

ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕರಾವಳಿ ಭಾಗದ ಹೆಮ್ಮೆಯ ಸಂಸ್ಥೆ. ಮರೆಯಾದ ಯಕ್ಷಗಾನದ ಎಲ್ಲಾ ಆಯಾಮಗಳನ್ನು ಮತ್ತೆ ನೆನಪಿಸಿ, ಜೀವಂತ ಉಳಿಸಿದ ಸಂಸ್ಥೆ ಇದು. ಕೇವಲ ಯಕ್ಷಗಾನವಲ್ಲದ ಎಲ್ಲಾ ಲಲಿತಕಲಾ ವಿಭಾಗದಲ್ಲಿ ಅನೇಕ ಕಲಾವಿದರನ್ನು ಸಮಾಜಕ್ಕೆ ಕೊಟ್ಟ ಸಂಸ್ಥೆಯ ಬೆಳ್ಳಿ ಹಬ್ಬದ ಸಡಗರದಲ್ಲಿ ಭಾಗಿಯಾಗುವ ಅವಕಾಶಕ್ಕೆ ಎಲ್ಲರೂ ಕೃತಜ್ಙತೆ ಸಲ್ಲಿಸಲೇಬೇಕು ಎಂದು ಗೀತಾನಂದ ಫೌಂಡೇಶನ್‌ನ ಆನಂದ ಸಿ. ಕುಂದರ್ ಹೇಳಿದರು.

ಪಿ.ಎಂ.ಶ್ರೀ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೆಕ್ಕಟ್ಟೆಯಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಬೆಳ್ಳಿ ಹಬ್ಬದ ಸಿನ್ಸ್ ೧೯೯೯ ಶ್ವೇತಯಾನ ಸಮಾಪನ ಮಧ್ಯಮಾವತಿ ಕಾರ್ಯಕ್ರಮವನ್ನು ಏಪ್ರಿಲ್ 19ರಂದು ಉದ್ಘಾಟಿಸಿ ಮಾತನ್ನಾಡಿದರು.

ಗುರುವಂದನೆ ಸಲ್ಲಿಸಿ ಮಾತನ್ನಾಡಿದ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ  ಕಲೆಯಲ್ಲಿ ಆಸಕ್ತಿ ಇಲ್ಲದೇ ಹೋದರೆ ಸಾಮಾನ್ಯ ಮನುಷ್ಯನಾಗಲು ಸಾಧ್ಯವಿಲ್ಲ. ಮಕ್ಕಳಲ್ಲಿ ಹುಟ್ಟಿನಿಂದಲೇ ಅಡಕವಾಗಿರುವ ಕಲೆಯನ್ನು ಹೊರತರುವ ಕೆಲಸವನ್ನು ಕಲಾ ಶಿಕ್ಷಕರು ಇತ್ತೀಚೆಗೆ ಹಲವು ಕಡೆಗಳಲ್ಲಿ ಮಾಡುತ್ತಿರುವುದು ಸ್ತುತ್ಯರ್ಹ. ಮನಸ್ಸಿನ ಕೊರತೆಗಳನ್ನು ನೀಗಿಸಬಲ್ಲ ಕಲೆಯನ್ನು ಮಕ್ಕಳಲ್ಲಿ ತುಂಬಿಸುವ ಕಾರ್ಯ ನಡೆಸುತ್ತಿರುವ ಯಶಸ್ವಿ ಕಲಾವೃಂದದ ಗುರು ಸೀತಾರಾಮ ಶೆಟ್ಟಿಯವರು ಜೀವನ ಪರ್ಯಂತ ಮಕ್ಕಳ ನಡುವೆಯೇ ಬೆಳೆದು ಸಾರ್ಥಕ್ಯ ಕಂಡುಕೊಂಡು ಸಂಸ್ಥೆಯನ್ನು ಬೆಳೆಸಿದವರು. ಹೀಗೆ ಸಾಂಸ್ಕೃತಿಕವಾಗಿ ಬೆಳೆದ ಸಂಸ್ಥೆಗೆ ಆರ್ಥಿಕ ಸಹಕಾರವೂ ಸಿಕ್ಕಿದರೆ ಕಲಿತ ಮಕ್ಕಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯ ಎಂದರು.

ಯಶಸ್ವೀ ಯಾನ ಸುಲಭವಾಗಿರಲಿಲ್ಲ. ಕಲ್ಲು ಮುಳ್ಳಿನ ಹಾಸಿಗೆಯಾಗಿದ್ದ ಸಂಸ್ಥೆ ಬಹಳ ಕಷ್ಠ ಪಟ್ಟು ಇಪ್ಪತ್ತೈದು ವರ್ಷ ಕಳೆದಿದೆ. ಹೃದಯ ತುಂಬಿ ಬಂದಿದೆ ಎಂದು ಗುರುವಂದನೆ ಸಲ್ಲಿಸಿಕೊಂಡ ಗುರು ಸೀತಾರಾಮ ಶೆಟ್ಟಿ  ನುಡಿದರು.

ಯಶಸ್ವೀ ಕಲಾವೃಂದದ ಸಂಕಲ್ಪದಲ್ಲಿ ಯಶಸ್ಸು ಇದೆ. ಸಂಸ್ಥೆಯನ್ನು ಬೆಳೆಸುವ ಕಾರ್ಯ ಬಹಳ ಕಷ್ಟಕರ. ರಾಜ್ಯ ರಾಜಧಾನಿಗೂ ಹೂವಿನಕೋಲು ಕೊಂಡು ಹೋಗಿ ಯಶಸ್ಸು ಕಂಡುಕೊಂಡಿದೆ ಎಂದು ಡಾ. ಜಗದೀಶ್ ಶೆಟ್ಟಿ ಮಾತನ್ನಾಡಿದರು.

ಡಾ. ಕೆ.ಸಿ. ಬಲ್ಲಾಳ್ ಬೆಂಗಳೂರು ಮಾತನ್ನಾಡಿ ಹುಟ್ಟೂರ ಅಭಿನಂದನೆ ಸಲ್ಲಿಸಿದ ಸಾಧಕ ಸಂಸ್ಥೆಗೆ ಚಿರ‌ಋಣಿ ಎಂದರು. ಸಂಘಟನೆಯ ಸಂಕಷ್ಟ ಅರಿತವನು ನಾನು. ಸಂಘಟನೆ ಪ್ರಾಮಾಣಿಕ ಕಾರ್ಯಕರ್ತ ಅತೀ ಅವಶ್ಯ. ಮೊಬೈಲ್ ಪ್ರೇಕ್ಷಕರು ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದಾರೆ. ಈ ಕಾಲಘಟ್ಟದಲ್ಲಿ ಸಂಘಟನೆ ಅತೀ ಕಷ್ಟ ಎಂದು ಉಡುಪಿ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನ್ನಾಡಿದರು.

ಶ್ವೇತಯಾನ ಸ್ಮರಣೆ ಸಂಚಿಕೆ ಮುಖಪುಟದ ಅನಾವರಣ ಮಾಡಿದ ಸಾಹಿತಿ ಸುಧಾ ಆಡುಕುಳ ಮಾತನ್ನಾಡಿ, ಹಲವು ಬಣ್ಣಗಳನ್ನು ತನ್ನೊಳಗೆ ಇರಿಸಿಕೊಂಡ ಶ್ವೇತವರ್ಣದ ಪುಸ್ತಕ ಉತ್ತಮವಾಗಿ ಮೂಡಿ ಬರಲಿ ಎಂದು ಹಾರೈಸಿ ಆಶಯ ನುಡಿಗಳನ್ನಾಡಿದರು.

ಮಲ್ಯಾಡಿ ಶಿವರಾಮ ಶೆಟ್ಟಿ ಶುಭ ನುಡಿದರು. ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಸುಜಯ್ ಶೆಟ್ಟಿ ಸ್ವಾಗತಿಸಿದರು, ಗೋಪಾಲ್ ಪೂಜಾರಿ ಕೊಮೆ ವಂದಿಸಿದರು. ಗುಲಾಬಿ ಪ್ರಾರ್ಥಿಸಿದರು. ರೇಖಾ ಕುಲಾಲ್ ನಿರೂಪಣೆ ಮಾಡಿದರು. ಶ್ವೇತಯಾನ ಮಧ್ಯಮಾವತಿ ರಂಗದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಗಾನ ವೈಭವ, ಮಾನಸಿ ಸುಧೀರ್ ಬಳಗದ ನೃತ್ಯೋಪಾಸನೆ, ಅತಿಥಿ ಕಲಾವಿದರ ಕೂಡುವಿಕೆಯಲ್ಲಿ 150 ವೇಷಧಾರಿಗಳನ್ನೊಳಗೊಂಡ ಯಕ್ಷಗಾನ ಚಕ್ರವ್ಯೂಹ ಪ್ರಸ್ತುತಿಗೊಂಡು ಕಾರ್ಯಕ್ರಮ ಸಂಪನ್ನಗೊಂಡಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!