spot_img
Thursday, April 2, 2026
spot_img

ತೆಕ್ಕಟ್ಟೆ: ಏಪ್ರಿಲ್ 19, ಸಿನ್ಸ್ 1999 ಶ್ವೇತಯಾನ ‘ಮಧ್ಯಮಾವತಿ’ ಸಮಾಪನ:

ಏಪ್ರಿಲ್: 17: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಬೆಳ್ಳಿ ಹಬ್ಬದ ವರ್ಷದಲ್ಲಿ ಒಟ್ಟು 124 ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಪೂರೈಸಿಕೊಂಡು ಸಮಾಪನದಲ್ಲಿ ‘ಮಧ್ಯಮಾವತಿ’ ಶಿರ್ಷಿಕೆಯೊಂದಿಗೆ 125ನೇಯ ಕಾರ್ಯಕ್ರಮವಾಗಿ ಮುಕ್ತಾಯಗೊಳ್ಳುತ್ತಿದೆ.

ಸಂಜೆ ಗಂಟೆ 4ರಿಂದ ತೆಕ್ಕಟ್ಟೆಯ ಸಾಂಸ್ಕøತಿಕ ಕೇಂದ್ರವಾದ ಹಯಗ್ರೀವ ಕಲ್ಯಾಣ ಮಂಟಪದಿಂದ ಮೆರವಣಿಗೆ ಹೊರಡಲಿದ್ದು ಕನ್ನುಕೆರೆ ನವಶಕ್ತಿ ಕಲ್ಯಾಣ ಮಂಟಪದ ತನಕ ತೆರಳಿ ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊನೆಗೊಳ್ಳಿದೆ. ಮೆರವಣಿಗೆಗೆ ಚಾಲನೆಯನ್ನು ಶಿವರಾಮ ಶೆಟ್ಟಿ ಮಲ್ಯಾಡಿ ಮಾಡಲಿದ್ದಾರೆ.

ಬಳಿಕ ತೆಕ್ಕಟ್ಟೆ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ‘ಗಾನ ವೈಭವ’, ಕೊಡವೂರು ಮಾನಸಿ ಸುಧೀರ್ ಬಳಗ ನೃತ್ಯ ನಿಕೇತನ ಕೊಡವೂರು ಇವರಿಂದ ‘ನೃತ್ಯೋಪಾಸನೆ’ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ‘ಚಕ್ರವ್ಯೂಹ’ ಪ್ರದರ್ಶನಗೊಳ್ಳಲಿದ್ದು ಚಕ್ರವ್ಯೂಹ ರಚನೆಯಲ್ಲಿ ಊರ ಪರವೂರ 150 ಗಣ್ಯರು ವೇಷಧಾರಿಗಳಾಗಿ ಚಕ್ರವ್ಯೂಹ ಕೋಟೆಯನ್ನು ಬಲಿಯಲಿದ್ದಾರೆ.

ಕೊೈಕೂರು ಸೀತಾರಾಮ ಶೆಟ್ಟಿಯವರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಉದ್ಯಮಿ ಕೋಟ ಆನಂದ ಸಿ. ಕುಂದರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಜಯಪ್ರಕಾಶ್ ಹೆಗ್ಡೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಡೋಜ ಡಾ. ಜಿ. ಶಂಕರ್, ಡಾ. ಟಿ. ಶ್ಯಾಮ್ ಭಟ್, ಆಂಡ್ರ್ಯೂ ಡಿ’ಸಿಲ್ವ, ಮುರಳಿ ಕಡೆಕಾರ್, ಶ್ರೀಮತಿ ಲಲಿತಾ ಸಕಾರಾಂ, ಡಾ. ಜಗದೀಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಡಾ. ಕೆ.ಸಿ. ಬಲ್ಲಾಳ್ ಬೆಂಗಳೂರು ವಿಶೇಷ ಅಭಿನಂದನಾರ್ಹರು. ಪ್ರೊ. ಪವನ್ ಕಿರಣ್‍ಕೆರೆ ಆಶಯ ನುಡಿಗಳನ್ನಾಡಲಿದ್ದಾರೆ. ಸ್ಮರಣ ಸಂಚಿಕೆಯ ಮುಖಪುಟ ಅನಾವರಣವನ್ನು ಸಾಹಿತಿ ಸುಧಾ ಆಡುಕುಳ ಮಾಡಲಿದ್ದಾರೆ ಎಂದು ಸಿನ್ಸ್ 1999 ಶ್ವೇತಯಾನದ ಕಾರ್ಯಾಧ್ಯಕ್ಷ ಮಲ್ಯಾಡಿ ಸುಜಯ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!