spot_img
Wednesday, April 1, 2026
spot_img

ಕೊರಗ ಕಾಲನಿ ಭೇಟಿ | ಜಿಲ್ಲಾಡಳಿತದಿಂದ ಗ್ರಾಮ ಸರ್ಕಾರದ ಕಡೆಗಣನೆ : ರಮೇಶ್‌ ಶೆಟ್ಟಿ ವಕ್ವಾಡಿ ಆಕ್ರೋಶ

ಜನಪ್ರತಿನಿಧಿ (ಕುಂದಾಪುರ/ಉಡುಪಿ) : ಕರ್ನಾಟಕ ಗ್ರಾಮಸ್ವರಾಜ್ ಹಾಗೂ ಪಂಜಾಯತ್ ರಾಜ್  ಕಾಯ್ದೆಯ ನಿಯಮದಂತೆ ಸ್ಥಳೀಯ ಸರಕಾರವಾಗಿರುವ ಗ್ರಾಮಪಂಚಾಯತ್ ಅಲ್ಲಿ ತನ್ನದೇ ಆದ ಅಧಿಕಾರ ಹೊಂದಿದೆ. ಗ್ರಾಮ ಸರಕಾರದ ಪ್ರಥಮ ಪ್ರಜೆ ಚುನಾಯಿತ  ಗ್ರಾಮಪಂಚಾಯತ್ ಅಧ್ಯಕ್ಷರಾಗಿರುತ್ತಾರೆ. ಯಾವುದೇ ಇಲಾಖೆಯ ಕಾಮಗಾರಿಗಳ ಅನುಷ್ಠಾನಕ್ಕೆ ಗ್ರಾಮಪಂಚಾಯತ್ ಅನುಮತಿ ಕಡ್ಡಾಯವಾಗಿರುತ್ತದೆ. ಕಾರ್ಯಾಂಗದ ಕೆಲಸ ಶಾಸಕಾಂಗದ ಯೋಜನೆಗಳ ಅನುಷ್ಢಾನ ಆಗಿದ್ದು, ಸ್ಥಳೀಯ ಗ್ರಾಮಪಂಚಾಯತ್ ಚುನಾಯಿತ ಪ್ರತಿನಿಧಿಗಳು ಆ ಗ್ರಾಮದ ವ್ಯಾಪ್ತಿಯ ಶಾಸಕಾಂಗ ಇದ್ದ ಹಾಗೆ. ಆದರೆ ಇದೀಗ ಅಧಿಕಾರಿ ಶಾಹಿ ವರ್ಗ ಗ್ರಾಮ ಸರ್ಕಾರವನ್ನು ಕಡೆಗಣಿಸಿ ಹಿಟ್ಲರ್ ಆಡಳಿತ ನಡೆಸುವ ಹುನ್ನಾರ ನಡೆಸಿದೆ ಎಂದು ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಸಂಚಾಲಕ ರಮೇಶ್‌ ಶೆಟ್ಟಿ ವಕ್ವಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಕೊರಗ ಕಾಲನಿ ಭೇಟಿ ಹಾಗೂ ವಿವಿಧ ಕಾಮಗಾರಿಗಳ ಸ್ಥಳ ಪರಿಶೀಲನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಗ್ರಾಮ ಪಂಚಾಯತ್‌ ಅನ್ನು ಕಡೆಗಣಿಸಿರುವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಜನಪ್ರತಿನಿಧಿ ಪತ್ರಿಕೆಗೆ ಹೇಳಿಕೆ ನೀಡಿರುವ ಅವರು, ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೊರಗ ಕಾಲೋನಿಯ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲನೆಗೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಮಾತ್ರ ಆಹ್ವಾನ ನೀಡಿದೆ. ಈ ಅಭಿವೃದ್ಧಿ ಕಾರ್ಯಗಳನ್ನು ಸರಕಾರ ಮಾಡಿದ್ದೋ ಅಥವಾ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳ ಸ್ವಂತ ಹಣವೋ ಎನ್ನುವ ಅನುಮಾನ ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಗ್ರಾಮಪಂಚಾಯ್ ಅಭಿವೃದ್ಧಿ ಅಧಿಕಾರಿಗಳು , ಗ್ರಾಮಪಂಚಾಯತ್ ಅಧ್ಯಕ್ಷರ ಅಧೀನ ಕಾರ್ಯದರ್ಶಿಯಾಗಿದ್ದು , ಅಧ್ಯಕ್ಷರಿಗೆ ಆಹ್ವಾನ ನೀಡದೇ , ಅವರ ಅಧೀನ ಕಾರ್ಯದರ್ಶಿಗೆ ಆದೇಶ ಮಾಡುವ ಹಕ್ಕನ್ನು ಜಿಲ್ಲಾಡಳಿತಕ್ಕೆ ನೀಡಿದವರು ಯಾರು ಮತ್ತು ಯಾವ ಕಾಯ್ದೆಯಲ್ಲಿ ಅವಕಾಶ ನೀಡಿದೆ ಎನ್ನುವುದು ತಿಳಿದಿಲ್ಲ.ಇದರ ವಿರುದ್ದ ಪ್ಂಚಾಯತ್ ರಾಜ್ ಒಕ್ಕೂಟ ವತಿಯಿಂದ ಹೋರಾಟವನ್ನು ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!