spot_img
Saturday, February 14, 2026
spot_img

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಬಣ್ಣದ ಗರಿ’ ಮಕ್ಕಳ ಯಕ್ಷೋತ್ಸವ

ಕುಂದಾಪುರ: ಕುಂದಾಪುರ ಶೈಕ್ಷಣಿಕ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಬೆಂಗಳೂರು, ಇಂಡಿಯಾ ಪೌಂಡೇಷನ್ ಫಾರ್ ಆರ್ಟ್ಸ್ ಬೆಂಗಳೂರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇವರ ಸಹಯೋಗದಲ್ಲಿ ಕಲಿ ಕಲಿಸು ಕಲಾ ಅಂತರ್ಗತ ಕಲಿಕೆಯ “ಕರಾವಳಿಯ ವೀರ ವನಿತೆಯರು ಸಾಮಾಜಿಕ ಶೋಷಣೆ ಮತ್ತು ವಿದೇಶಿಯರ ವಿರುದ್ಧ ಹೋರಾಡಿ ನಾಡು ಕಟ್ಟಿದ ಕಥನಕ್ಕೆ ಯಕ್ಷರಂಗ ರೂಪ ನೀಡಿ ಶಾಲಾ ವಿದ್ಯಾರ್ಥಿನಿಯರಿಂದ ಅಭಿನಯಿಸುವುದು” ಎಂಬ ಯೋಜನೆಯ ಸಮಾರೋಪ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ “ಬಣ್ಣದ ಗರಿ” ಮಕ್ಕಳ ಯಕ್ಷೋತ್ಸವದಲ್ಲಿ ಕರಾವಳಿ ವೀರ ವನಿತೆಯರ ಕಥನವಾಗಿ ಪ್ರದರ್ಶನಗೊಂಡಿತು. ಶಂಕರನಾರಾಯಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಂಕರನಾರಾಯಣ ಭಟ್ ಕೊಂಡಳ್ಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ’ಚಿಂತನ ಚಾವಡಿ’ ಸಭಾ ಸಂಭ್ರಮವನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ರೆಡ್ ಕ್ರಾಸ್ ಕುಂದಾಪುರ ಘಟಕದ ಸಭಾಪತಿಗಳಾದ ಜಯಕರ ಶೆಟ್ಟಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಸಾಹಿತಿಗಳು ಮತ್ತು ಚಿಂತಕಿ ಪೂರ್ಣಿಮಾ ಭಟ್ ಕಮಲಶಿಲೆಯವರು ಮಕ್ಕಳನ್ನು ಬೆಳೆಸುವಲ್ಲಿ ತಾಯಂದಿರ ಪಾತ್ರ ಎನ್ನುವ ವಿಚಾರದ ಕುರಿತು ಮಾತನಾಡುತ್ತ “ಮಗು ಯಾವ ಮಾಧ್ಯಮದಲ್ಲಿ ಕಲಿತರು ಕಲಿಕೆಯನ್ನು ಅರ್ಥೈಸಿಕೊಳ್ಳುವುದು ತನ್ನ ಮಾತೃಭಾಷೆಯಲ್ಲಿ” ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಯೋ ನಿವೃತ್ತಿ ಹೊಂದಿದ ಶಾಲಾ ಅಡುಗೆಯವರಾದ ಸಾಕು ಪೂಜಾರಿ, ಸ್ವಯಂ ನಿವೃತ್ತಿ ಪಡೆದ ಆಶಾ, ಯಕ್ಷಗುರು ಕಿಶೋರ ಕುಮಾರ ಆರೂರು, ಗೌರವ ಶಿಕ್ಷಕಿಯರಾದ ನಯನ, ಶ್ರೀಮತಿ, ಪ್ರಮೀಳಾ, ವೈಶಾಲಿ ಶೆಟ್ಟಿ, ವಿಶಾಲಾಕ್ಷಿಯರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶಂಕರನಾರಾಯಣ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವತ್ಸಲಾ ಶೆಟ್ಟಿ, ಸದಸ್ಯಾದ ಲಕ್ಷ್ಮಿ, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಆಶಾಲತ ಶಿವರಾಮ ಶೆಟ್ಟಿ, ಶಂಕರನಾರಾಯಣ ಕ್ಯಾಶು ಇಂಡಸ್ಟ್ರೀಸ್ ಬೈಲೂರು ಇದರ ಮಾಲಕರಾದ ಶಶಿಧರ ಶೆಟ್ಟಿ, ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸುಬ್ರಹ್ಮಮಣ್ಯ ಐತಾಳರು, ಸಂತೋಷ ಕುಮಾರ ಬೈಲೂರು , ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಂಜುನಾಥ ಮೊಗವೀರ ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕರಾದ ಗಿರಿಜಾ ಡಿ ಸ್ವಾಗತಿಸಿದರು. ಸಹಶಿಕ್ಷಕ ಆನಂದ ಕುಲಾಲ ಪ್ರಸ್ತಾವನೆಗೈದರು. ಬಳ್ಕೂರು ಶಾಲಾ ಸಹ ಶಿಕ್ಷಕ ಸಂತೋಷ ಕಾರ್ಯಕ್ರಮ ನಿರೂಪಿಸಿದರು. ಮತ್ತು ಶಾಲಾ ಸಹಶಿಕ್ಷಕಿ ಸಂಧ್ಯಾ ಕೆ ವಂದಿಸಿದರು. ಗೌರವ ಶಿಕ್ಷಕಿಯರಾದ ನಯನ, ಶ್ರೀಮತಿ, ಪ್ರಮೀಳಾ, ವೈಶಾಲಿ ಶೆಟ್ಟಿ, ವಿಶಲಾಕ್ಷಿ ಸಹಕರಿಸಿದರು.

ನಂತರ ನಡೆದ ಮಕ್ಕಳ ಯಕ್ಷೋತ್ಸವದಲ್ಲಿ ಕರಾವಳಿ ವೀರ ವನಿತೆಯರ ಕಥನವನ್ನು ಯಕ್ಷಸಿರಿ ಶಂಕರನಾರಾಯಣದ ಸಂಚಾಲಕರಾದ ಕಿಶೋರ ಕುಮಾರ ಆರೂರು ಇವರ ನಿರ್ದೇಶನದಲ್ಲಿ ೪ ಮತ್ತು ೫ನೇ ತರಗತಿ ಮಕ್ಕಳು ನಂಗೇಲಿ ಕಥನವನ್ನು ನೃತ್ಯರೂಪಕವಾಗಿಯೂ, ೫ನೇ ತರಗತಿ ವಿದ್ಯಾರ್ಥಿಗಳು ಕಮಲಾದೇವಿ ಚಟ್ಟೋಪಾಧ್ಯಯ ಕಥನವನ್ನು ತಾಳಮದ್ದಳೆಯಾಗಿಯೂ, ೬ನೇ ತರಗತಿ ವಿದ್ಯಾರ್ಥಿಗಳು ರಾಣಿ ಚೆನ್ನಾಭೈರಾದೇವಿ ಮತ್ತು ೭ನೇ ತರಗತಿ ವಿದ್ಯಾರ್ಥಿಗಳು ವೀರ ರಾಣಿ ಅಬ್ಬಕ್ಕನ ಕಥನವನ್ನು ಯಕ್ಷಗಾನವಾಗಿ ಪ್ರದರ್ಶನಗೈದರು. ಭಾಗವತಿಕೆಯಲ್ಲಿ ಸುಮನ ಎನ್ , ಸತೀಶ ಬೈಲೂರು, ಮತ್ತು ಕಿಶೋರ ಕುಮಾರ ಆರೂರು, ಮದ್ದಳೆಯಲ್ಲಿ ಪ್ರಭಾಕರ ಆಚಾರ್ಯ ಮಾರಣಕಟ್ಟೆ, ಚಂಡೆಯಲ್ಲಿ ಭಾಸ್ಕರ್ ಆಚಾರ್ಯ ಕನ್ಯಾನ ಮತ್ತು ಮಾಸ್ಟರ್ ಪನ್ನಗ ಆರೂರು ಸಹಕರಿಸಿದರು. ಇದರ ಜೊತೆಗೆ ಶಾಲಾ ಶಿಕ್ಷಕಿಯರ ನಿರ್ದೇಶನದಲ್ಲಿ ಹೆಜ್ಜೆ ಗೆಜ್ಜೆ ವೈವಿಧ್ಯಮಯವಾದ ನೃತ್ಯ ಕಾರ್ಯಕ್ರಮ ನಡೆಯಿತು.

ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ ಮತ್ತು ಸಹಶಿಕ್ಷಕಿಯರ ನೆರವಿನೊಂದಿಗೆ ಕಲಿ ಕಲಿಸು ಕಲಾ ಅಂತರ್ಗತ ಕಲಿಕಾ ಯೋಜನೆಯ ನಿರ್ದೇಶಕರಾದ ಸಹ ಶಿಕ್ಷಕ ಆನಂದ ಕುಲಾಲ ಕಾರ್ಯಕ್ರಮ ಸಂಯೋಜಿಸಿದ್ದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!